ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಖ್ಯಾತ ಗಾಯಕ ಶ್ರೀ ಪಂಕಜ್ ಉದಾಸ್ ಅವರ ನಿಧನಕ್ಕೆ ಪ್ರಧಾನಮಂತ್ರಿಯವರು ಸಂತಾಪ ವ್ಯಕ್ತಪಡಿಸಿದ್ದಾರೆ

प्रविष्टि तिथि: 26 FEB 2024 7:08PM by PIB Bengaluru

ಖ್ಯಾತ ಗಾಯಕ ಶ್ರೀ ಪಂಕಜ್ ಉದಾಸ್ ಅವರ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಪಂಕಜ್ ಉದಾಸ್ ಅವರೊಂದಿಗೆ ನಡೆಸಿದ ವಿವಿಧ ಸಂವಾದಗಳನ್ನು ಸ್ಮರಿಸಿದ ಶ್ರೀ ಮೋದಿ, ಶ್ರೀ ಪಂಕಜ್ ಉದಾಸ್ ಜಿ ಅವರು ಭಾರತೀಯ ಸಂಗೀತದ ದಾರಿದೀಪವಾಗಿದ್ದರು, ಅವರ ಮಧುರ ಸ್ವರಗಳು ಪೀಳಿಗೆಯನ್ನು ಮೀರಿದೆ. ಅವರ ನಿರ್ಗಮನವು ಸಂಗೀತ ಜಗತ್ತಿನಲ್ಲಿ ಎಂದಿಗೂ ತುಂಬಲಾಗದೆ,  ಶೂನ್ಯ ಅನುಭವವನ್ನು ಉಂಟುಮಾಡುತ್ತದೆ ಎಂದು ಶ್ರೀ ಮೋದಿ ಹೇಳಿದರು.

ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ತಿಳಿಸಿದ್ದಾರೆ;

“ಶ್ರೀ ಪಂಕಜ್ ಉದಾಸ್ ಜಿ ಅವರ ನಷ್ಟಕ್ಕೆ ನಾವು ಶೋಕಿಸುತ್ತೇವೆ, ಅವರ ಗಾಯನವು ಭಾವನೆಗಳ ವ್ಯಾಪ್ತಿಯ ಅಗಾಧತೆಯನ್ನು ತಿಳಿಸುತ್ತದೆ ಮತ್ತು ಅವರ ಗಜಲ್ ಗಳು ಆತ್ಮಕ್ಕೆ ನೇರವಾಗಿ ಸಂಪರ್ಕಿಸುವ ಅನುಭವ ನೀಡುತ್ತವೆ. ಅವರು ಭಾರತೀಯ ಸಂಗೀತದ ದಾರಿದೀಪವಾಗಿದ್ದರು, ಅವರ ಮಧುರ ಸ್ವರಗಳು ತಲೆಮಾರುಗಳನ್ನು ಮೀರಿದೆ. ನಾನು ಅವರೊಂದಿಗೆ ಹಲವಾರು ವರ್ಷಗಳ ಕಾಲದ ನನ್ನ ವಿವಿಧ ಸಂವಹನಗಳನ್ನು ನೆನಪಿಸಿಕೊಳ್ಳುತ್ತೇನೆ.

ಅವರ ನಿರ್ಗಮನವು ಸಂಗೀತ ಜಗತ್ತಿನಲ್ಲಿ ಎಂದಿಗೂ ತುಂಬಲಾಗದ ಶೂನ್ಯವನ್ನು ಉಂಟುಮಾಡುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು. ಓಂ ಶಾಂತಿ.”

 ***


(रिलीज़ आईडी: 2009704) आगंतुक पटल : 108
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Manipuri , Punjabi , Gujarati , Odia , Tamil , Telugu , Malayalam