ಹಣಕಾಸು ಸಚಿವಾಲಯ
azadi ka amrit mahotsav

"ಉತ್ತಮ ಬೆಳವಣಿಗೆಯೊಂದಿಗೆ ಆರ್ಥಿಕತೆಯನ್ನು ಬಲಪಡಿಸಲು ಮತ್ತು ವಿಸ್ತರಿಸಲು ಹಾಗೂ ಜನರು ತಮ್ಮ ಆಕಾಂಕ್ಷೆಗಳನ್ನು ಸಾಧಿಸಲು ಸೂಕ್ತ ಪರಿಸ್ಥಿತಿಗಳನ್ನು ರಚಿಸಲು ಕೇಂದ್ರ ಸರ್ಕಾರವು ಬದ್ಧವಾಗಿದೆ"


​​​​​​​ಪ್ರಧಾನಮಂತ್ರಿ ಮುದ್ರಾ ಯೋಜನೆ, ಫಂಡ್ ಆಫ್ ಫಂಡ್ಸ್, ಸ್ಟಾರ್ಟ್ ಅಪ್ ಇಂಡಿಯಾ, ಮತ್ತು ಸ್ಟಾರ್ಟ್ ಅಪ್ ಕ್ರೆಡಿಟ್ ಗ್ಯಾರಂಟಿ ಯೋಜನೆಗಳು ಯುವಕರ ಉದ್ಯಮಶೀಲತೆಯ ಆಕಾಂಕ್ಷೆಗಳನ್ನು ತೆರೆಯುತ್ತಿವೆ: ಕೇಂದ್ರ ಹಣಕಾಸು ಸಚಿವರು

Posted On: 01 FEB 2024 12:32PM by PIB Bengaluru

“ಹೆಚ್ಚಿನ ಬೆಳವಣಿಗೆಯೊಂದಿಗೆ ಆರ್ಥಿಕತೆಯನ್ನು ಬಲಪಡಿಸಲು ಮತ್ತು ವಿಸ್ತರಿಸಲು ಹಾಗೂ ಜನರು ತಮ್ಮ ಆಕಾಂಕ್ಷೆಗಳನ್ನು ಸಾಧಿಸಲು ಸೂಕ್ತ ಪರಿಸ್ಥಿತಿಗಳನ್ನು ಸೃಷ್ಟಿಸಲು ಕೇಂದ್ರ ಸರ್ಕಾರವು ಬದ್ಧವಾಗಿದೆ” ಎಂದು ಇಂದು ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ 2024 ಅನ್ನು ಮಂಡಿಸುತ್ತಾ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು  ಹೇಳಿದರು.

ಅಮೃತ ಕಾಲ ಈಗ  ಕರ್ತವ್ಯ ಕಾಲವಾಗಿದೆ

ಭಾರತದ ಗಣರಾಜ್ಯದ 75 ನೇ ವರ್ಷಾಚರಣೆಯ  ಈ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ದಿನದಂದು ರಾಷ್ಟ್ರವನ್ನುದ್ದೇಶಿಸಿ ಪ್ರಧಾನಮಂತ್ರಿಯವರು ಮಾಡಿದ ಭಾಷಣವನ್ನು ಉಲ್ಲೇಖಿಸಿದ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್  ಅವರು “ಈಗ ಕರ್ತವ್ಯ ಕಾಲದ ಆರಂಭವಾಗಿದೆ” ಎಂದು ಹೇಳಿದರು. ಹಾಗೂ ಮುಂದುವರಿದು, "ನಾವು ಹೊಸ ಸ್ಫೂರ್ತಿಗಳು, ಹೊಸ ಪ್ರಜ್ಞೆ, ಹೊಸ ನಿರ್ಣಯಗಳೊಂದಿಗೆ ರಾಷ್ಟ್ರೀಯ ಅಭಿವೃದ್ಧಿಗೆ ನಮ್ಮನ್ನು ನಾವು ಸಮರ್ಪಿಸಲು ಬದ್ಧರಾಗಿದ್ದೇವೆ, ಏಕೆಂದರೆ ದೇಶವು ಅಪಾರ ಸಾಧ್ಯತೆಗಳು ಮತ್ತು ಅವಕಾಶಗಳನ್ನು ತೆರೆಯುತ್ತಾ ಇದೆ." ಎಂದು ಹೇಳಿದರು.

ಯುವಕರ ಉದ್ಯಮಶೀಲತೆಯ ಆಕಾಂಕ್ಷೆಗಳನ್ನು ತೆರೆಯುವುದು

“ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಒಟ್ಟು 43 ಕೋಟಿ ಸಾಲ ಮಂಜೂರು ಮಾಡುವುದರೊಂದಿಗೆ ಒಟ್ಟು ರೂ. 22.5 ಲಕ್ಷ ಕೋಟಿ ಸಾಲ ನೀಡುವುದರೊಂದಿಗೆ, ನಮ್ಮ ಯುವಕರ ಅಪ್ರತಿಮ ಉದ್ಯಮಶೀಲತೆಯ ಆಕಾಂಕ್ಷೆಗಳನ್ನು ತೆರೆಯಲಾಗಿದೆ. ಅದರ ಜೊತೆಗೆ, ಫಂಡ್ ಆಫ್ ಫಂಡ್ಸ್, ಸ್ಟಾರ್ಟ್ ಅಪ್ ಇಂಡಿಯಾ ಮತ್ತು ಸ್ಟಾರ್ಟ್ ಅಪ್ ಕ್ರೆಡಿಟ್ ಗ್ಯಾರಂಟಿ ಯೋಜನೆಗಳು ನಮ್ಮ ಯುವಕರಿಗೆ ಸಹಾಯ ಮಾಡುತ್ತಿವೆ ಮತ್ತು ಅವುಗಳಿಂದು ಬೃಹತ್  'ರೋಜ್ ಗಾರ್ ಡೇಟಾ' ಗಳಾಗುತ್ತಿವೆ.” ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು  ಹೇಳಿದರು.

*****


(Release ID: 2001466) Visitor Counter : 99