ಪ್ರಧಾನ ಮಂತ್ರಿಯವರ ಕಛೇರಿ
ಧನುಷ್ಕೋಡಿಯ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ಪ್ರಧಾನಮಂತ್ರಿಯವರು ದೇವರ ದರ್ಶನ ಪಡೆದರು ಮತ್ತು ಪೂಜೆ ನೆರವೇರಿಸಿದರು
प्रविष्टि तिथि:
21 JAN 2024 3:41PM by PIB Bengaluru
ಧನುಷ್ಕೋಡಿಯ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ದೇವರ ದರ್ಶನ ಪಡೆದರು ಮತ್ತು ಪೂಜೆ ಸಲ್ಲಿಸಿದರು.
ಈ ದೇವಾಲಯವು ಶ್ರೀ ಕೋದಂಡರಾಮ ಸ್ವಾಮಿಗೆ ಸಮರ್ಪಿತವಾಗಿದೆ. ಕೋದಂಡರಾಮ ಎಂಬ ಹೆಸರು - ಬಿಲ್ಲು ಹೊಂದಿರುವ ರಾಮ ಎಂದರ್ಥವನ್ನು ಹೊಂದಿದೆ. ಇದು ಧನುಷ್ಕೋಡಿ ಎಂಬ ಸ್ಥಳದಲ್ಲಿದೆ. ವಿಭೀಷಣನು ಮೊದಲು ಶ್ರೀರಾಮನನ್ನು ಭೇಟಿಯಾಗಿ ಆಶ್ರಯವನ್ನು ಕೇಳಿದ್ದು ಇಲ್ಲಿಯೇ ಎಂದು ಹೇಳಲಾಗುತ್ತದೆ. ಶ್ರೀರಾಮನು ವಿಭೀಷಣನ ಪಟ್ಟಾಭಿಷೇಕವನ್ನು ನಡೆಸಿದ ಸ್ಥಳ ಇದಾಗಿದೆ ಎಂದು ಕೆಲವು ಪುರಾಣಗಳು ಹೇಳುತ್ತವೆ.
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ತಿಳಿಸಿದ್ದಾರೆ ;
“ಐತಿಹಾಸಿಕ ಮಹತ್ವದ ಶ್ರೀ ಕೋದಂಡರಾಮ ಸ್ವಾಮಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದೆ. ಆಶೀರ್ವಾದದೊಂದಿಗೆ ಅತ್ಯಂತ ಧನ್ಯತೆಯನ್ನು ಅನುಭವಿಸಿದೆ. ”
***
(रिलीज़ आईडी: 1998437)
आगंतुक पटल : 164
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam