ಪ್ರಧಾನ ಮಂತ್ರಿಯವರ ಕಛೇರಿ

​​​​​​​'ಈಗ ರೈತರಿಗೆ ಬೆಂಬಲದ ಭರವಸೆ ಇದೆ': ಪ್ರಧಾನಿಗೆ ಪಂಜಾಬ್ ರೈತ


ನಮ್ಮ ಗುರುಗಳ ಸಲಹೆಯಂತೆ ನಾವು ಕೃಷಿ ಮಾಡಬೇಕು ಮತ್ತು ಭೂಮಿತಾಯಿಯನ್ನು ರಕ್ಷಿಸಬೇಕು. ಗುರುನಾನಕ್ ದೇವ್ ಜೀ ಅವರ ಬೋಧನೆಗಳಿಗೆ ಮಿಗಿಲಾದದ್ದು ಏನೂ ಇಲ್ಲ: ಪ್ರಧಾನಿ

Posted On: 08 JAN 2024 3:21PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಕೇಂದ್ರ ಸಚಿವರು, ಸಂಸದರು, ಶಾಸಕರು ಮತ್ತು ಸ್ಥಳೀಯ ಮಟ್ಟದ ಪ್ರತಿನಿಧಿಗಳೊಂದಿಗೆ ದೇಶಾದ್ಯಂತದ ಸಾವಿರಾರು ಮಂದಿ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪಂಜಾಬ್ ನ ಗುರುದಾಸ್ ಪುರದ ಗುರ್ವಿಂದರ್ ಸಿಂಗ್ ಬಾಜ್ವಾ ಅವರು, ವಿಕ್ಷಿತ್ ಭಾರತ್ ನ ಪ್ರಯಾಣದ ಅತಿದೊಡ್ಡ ಲಾಭವೆಂದರೆ ರೈತರು ಕೃಷಿ ಕ್ಷೇತ್ರದಲ್ಲಿ ಸಾಧ್ಯವಾದಷ್ಟು ಉತ್ತಮವಾದ ಸವಲತ್ತುಗಳನ್ನು ಪಡೆಯಲು ಸಣ್ಣ ಗುಂಪುಗಳಾಗಿ ಸಂಘಟಿತರಾಗಿರುವುದು ಎಂದು ಪ್ರಧಾನಮಂತ್ರಿಯವರಿಗೆ ತಿಳಿಸಿದರು. ತಮ್ಮ ರೈತರ ಗುಂಪು ವಿಷಮುಕ್ತ ಕೃಷಿಯಲ್ಲಿ ತೊಡಗಿದೆ ಮತ್ತು ಅದಕ್ಕಾಗಿ ತಾವು ಯಂತ್ರೋಪಕರಣಗಳಿಗೆ ಸಬ್ಸಿಡಿ ಪಡೆದಿರುವುದಾಗಿ ಅವರು ಪ್ರಧಾನಮಂತ್ರಿಯವರಿಗೆ ತಿಳಿಸಿದರು. ಇದು ಸಣ್ಣ ರೈತರಿಗೆ 'ಪರಲಿ' (ಬೆಳೆ ತ್ಯಾಜ್ಯ/ಉಳಿಕೆ) ನಿರ್ವಹಣೆ ಮತ್ತು ಮಣ್ಣಿನ ಆರೋಗ್ಯ ನಿರ್ವಹಣೆಯಲ್ಲಿ ಸಹಾಯ ಮಾಡಿತು. ಸರ್ಕಾರದ ನೆರವಿನಿಂದಾಗಿ ಗುರುದಾಸ್ ಪುರದಲ್ಲಿ ಪರಲಿ ಸುಡುವ ಘಟನೆಗಳಲ್ಲಿ ಗಮನಾರ್ಹ ಇಳಿಕೆಯಾಗಿದೆ ಎಂದು ಶ್ರೀ ಬಾಜ್ವಾ ಮಾಹಿತಿ ನೀಡಿದರು. ಈ ಪ್ರದೇಶದಲ್ಲಿ ಎಫ್ ಪಿಒ ಸಂಬಂಧಿತ ಚಟುವಟಿಕೆಗಳು ಸಹ ನಡೆಯುತ್ತಿವೆ. ಕಸ್ಟಮ್ ಬಾಡಿಗೆ ಯೋಜನೆ (ರೈತರಿಗೆ ಯಂತ್ರೋಪಕರಣಗಳನ್ನು ನೀಡುವ ಯೋಜನೆ) 50 ಕಿ.ಮೀ ವ್ಯಾಪ್ತಿಯಲ್ಲಿನ ಸಣ್ಣ ರೈತರಿಗೆ ಸಹಾಯ ಮಾಡುತ್ತಿದೆ.

"ಈಗ ರೈತ ತನಗೆ ಸರಿಯಾದ ಬೆಂಬಲ ಸಿಗುತ್ತದೆ ಎಂದು ಭಾವಿಸುತ್ತಿದ್ದಾನೆ" ಎಂದು ಶ್ರೀ ಬಾಜ್ವಾ ಹೇಳಿದರು. 'ಮೋದಿ ಹೈ ತೋ ಮುಮ್ಕಿನ್ ಹೈ' ನಂತೆ ನಿರೀಕ್ಷೆಗಳು ಹೆಚ್ಚಿವೆ ಎಂದು ರೈತ ಹೇಳಿದಾಗ  ಪ್ರಧಾನ ಮಂತ್ರಿ ಅವರು, ರೈತರು ತಮ್ಮ ಮನವಿಗಳನ್ನು ಕೇಳುವುದರಿಂದ ಇದು ಸಾಧ್ಯ ಎಂದು ಹೇಳಿದರು. ಸುಸ್ಥಿರ ಕೃಷಿಗಾಗಿ ತಮ್ಮ ಮನವಿಯನ್ನು ಪ್ರಧಾನಿ ಪುನರುಚ್ಚರಿಸಿದರು. "ನಾವು ನಮ್ಮ ಗುರುಗಳ ಸಲಹೆಯಂತೆ ಕೃಷಿ ಮಾಡಬೇಕು ಮತ್ತು ಭೂಮಿ ತಾಯಿಯನ್ನು ರಕ್ಷಿಸಬೇಕು. ಕೃಷಿ ಕ್ಷೇತ್ರದಲ್ಲಿ ಗುರುನಾನಕ್ ದೇವ್ ಜೀ ಅವರ ಬೋಧನೆಗಳಿಗೆ  ಮಿಗಿಲಾದುದು  ಬೇರೇನೂ ಇಲ್ಲ ಎಂದು ಪ್ರಧಾನಿ ಹೇಳಿದರು. ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆಯ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, "ಪ್ರತಿಯೊಬ್ಬ ಕಟ್ಟಕಡೆಯ ಫಲಾನುಭವಿಯನ್ನು ತಲುಪುವವರೆಗೂ ಮೋದಿ ಕಿ ಗ್ಯಾರಂಟಿ ಕಿ ಗಾಡಿ' ನಿಲ್ಲುವುದಿಲ್ಲ" ಎಂದು ಹೇಳಿದರು.

*****



(Release ID: 1994221) Visitor Counter : 124