ಸಂಪುಟ
ಸಣ್ಣ ಉಪಗ್ರಹದ ಅಭಿವೃದ್ಧಿಯ ಸಹಕಾರಕ್ಕೆ ಸಂಬಂಧಿಸಿದಂತೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಮಾರಿಷಸ್ ಸಂಶೋಧನೆ ಮತ್ತು ನಾವೀನ್ಯತೆ ಮಂಡಳಿ (ಎಂಆರ್‌ಐಸಿ) ನಡುವಿನ ತಿಳುವಳಿಕಾ ಒಪ್ಪಂದಕ್ಕೆ ಸಂಪುಟ ಅನುಮೋದನೆ
Posted On:
05 JAN 2024 1:11PM by PIB Bengaluru
ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನವೆಂಬರ್ 01, 2023 ರಂದು ಮಾರಿಷಸ್‌ನ ಪೋರ್ಟ್ ಲೂಯಿಸ್‌ನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತು ಮಾರಿಷಸ್ ಸಂಶೋಧನೆ ಮತ್ತು ಆವಿಷ್ಕಾರ ಮಂಡಳಿ (ಎಂಆರ್‌ಐಸಿ) ನಡುವೆ ಸಹಿ ಹಾಕಲಾದ ಬಗ್ಗೆ ಮಾಹಿತಿ ನೀಡಲಾಯಿತು.
ಮಾರಿಷಸ್ ಗಣರಾಜ್ಯದ ಮಾಹಿತಿ ತಂತ್ರಜ್ಞಾನ, ಸಂವಹನ ಮತ್ತು ನಾವೀನ್ಯತೆ ಸಚಿವಾಲಯದ ಏಜಿಸ್, ಜಂಟಿ ಸಣ್ಣ ಉಪಗ್ರಹದ ಅಭಿವೃದ್ಧಿಯ ಸಹಕಾರಕ್ಕೆ ಸಂಬಂಧಿಸಿದಂತೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ.
ಪರಿಣಾಮ :
ಎಂಆರ್‌ಐಸಿಯ ಗ್ರೌಂಡ್ ಸ್ಟೇಷನ್‌ನ ಬಳಕೆಯ ಸಹಕಾರಕ್ಕಾಗಿ ಜಂಟಿ ಉಪಗ್ರಹದ ಅಭಿವೃದ್ಧಿಯಲ್ಲಿ ಇಸ್ರೋ ಮತ್ತು ಎಂಆರ್‌ಐಸಿ ನಡುವಿನ ಸಹಕಾರ ಸ್ಥಾಪಿಸಲು ಈ ಒಪ್ಪಂದ ಸಹಾಯ ಮಾಡುತ್ತದೆ. ಜಂಟಿ ಉಪಗ್ರಹಕ್ಕಾಗಿ ಕೆಲವು ಉಪವ್ಯವಸ್ಥೆಗಳನ್ನು ಭಾರತೀಯ ಕೈಗಾರಿಕೆಗಳ ಭಾಗವಹಿಸುವಿಕೆಯ ಮೂಲಕ ತೆಗೆದುಕೊಳ್ಳಲಾಗುವುದು ಮತ್ತು ಉದ್ಯಮಕ್ಕೆ ಪೂರಕವಾಗಿರುತ್ತದೆ.
ಉಪಗ್ರಹದ ಈ ಜಂಟಿ ಅಭಿವೃದ್ಧಿಯ ಸಹಯೋಗವು ಮಾರಿಷಸ್‌ನಲ್ಲಿರುವ ಭಾರತೀಯ ನಿಲ್ದಾಣಕ್ಕೆ ಮಾರಿಷಸ್ ಸರ್ಕಾರದಿಂದ ನಿರಂತರ ಬೆಂಬಲವನ್ನು ಮತ್ತಷ್ಟು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ, ಇದು ISRO/ಭಾರತದ ಉಡಾವಣಾ ವಾಹನ ಮತ್ತು ಉಪಗ್ರಹ ಕಾರ್ಯಾಚರಣೆಗಳಿಗೆ ನಿರ್ಣಾಯಕವಾಗಿದೆ. ಜಂಟಿ ಉಪಗ್ರಹ ಕಟ್ಟಡವು ಭವಿಷ್ಯದಲ್ಲಿ ಇಸ್ರೋದ ಸಣ್ಣ ಉಪಗ್ರಹ ಕಾರ್ಯಾಚರಣೆಗೆ MRIC ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಜಂಟಿ ಉಪಗ್ರಹಕ್ಕಾಗಿ ಕೆಲವು ಉಪವ್ಯವಸ್ಥೆಗಳನ್ನು ಭಾರತೀಯ ಕೈಗಾರಿಕೆಗಳ ಭಾಗವಹಿಸುವಿಕೆಯ ಮೂಲಕ ತೆಗೆದುಕೊಳ್ಳಲಾಗುವುದು ಮತ್ತು ಇದರಿಂದಾಗಿ ಉದ್ಯೋಗ ಸೃಷ್ಟಿ ಹೆಚ್ಚಾಗಲಿದೆ.
ಅನುಷ್ಠಾನ :
ಈ ತಿಳುವಳಿಕಾ ಒಡಂಬಡಿಕೆಗೆ ಸಹಿ ಮಾಡುವುದರಿಂದ ಇಸ್ರೋ ಮತ್ತು ಎಂಆರ್‌ಐಸಿ ನಡುವಿನ ಸಣ್ಣ ಉಪಗ್ರಹದ ಜಂಟಿ ಕಾರ್ಯಾಚರಣೆಯನ್ನು ಸಕ್ರಿಯಗೊಳಿಸುತ್ತದೆ. ಉಪಗ್ರಹವನ್ನು 15 ತಿಂಗಳ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಪ್ರಸ್ತಾಪಿಸಲಾಗಿದೆ.
ಖರ್ಚು ವೆಚ್ಚ :
ಜಂಟಿ ಉಪಗ್ರಹದ ಸಾಕ್ಷಾತ್ಕಾರಕ್ಕೆ ಅಂದಾಜು ವೆಚ್ಚ ರೂ.20 ಕೋಟಿ ರೂಪಾಯಿ ಆಗಲಿದ್ದು, ಇದನ್ನು ಭಾರತ ಸರ್ಕಾರವೇ ಭರಿಸಲಿದೆ. ಈ ಎಂಒಯು ಪಕ್ಷಗಳ ನಡುವೆ ಯಾವುದೇ ಇತರ ಹಣ ವಿನಿಮಯವನ್ನು ಒಳಗೊಂಡಿರುವುದಿಲ್ಲ.
ಹಿನ್ನೆಲೆ:
ಭಾರತ ಮತ್ತು ಮಾರಿಷಸ್ ನಡುವಿನ ಬಾಹ್ಯಾಕಾಶ ಸಹಕಾರವು 1980 ರ ದಶಕದ ಉತ್ತರಾರ್ಧದಲ್ಲಿ ಇಸ್ರೋದ ಉಡಾವಣಾ ವಾಹನ ಮತ್ತು ಉಪಗ್ರಹ ಕಾರ್ಯಾಚರಣೆಗಳಿಗೆ ಟ್ರ್ಯಾಕಿಂಗ್ ಮತ್ತು ಟೆಲಿಮೆಟ್ರಿ ಬೆಂಬಲಕ್ಕಾಗಿ ಮಾರಿಷಸ್‌ನಲ್ಲಿ ಗ್ರೌಂಡ್ ಸ್ಟೇಷನ್ ಅನ್ನು ಸ್ಥಾಪಿಸಲಾಯಿತು. ಈ ಉದ್ದೇಶಕ್ಕಾಗಿ 1986 ರಲ್ಲಿ ಒಪ್ಪಂದದ ಪ್ರಕಾರ ಕ್ರಮ ಕೈಗೊಳ್ಳಲಾಯಿತು. ಪ್ರಸ್ತುತ ಬಾಹ್ಯಾಕಾಶ ಸಹಕಾರವನ್ನು 29.7.2009 ರಂದು ಸಹಿ ಮಾಡಿದ ಒಪ್ಪಂದದಿಂದ ನಿಯಂತ್ರಿಸಲಾಗುತ್ತಿದೆ. ಇದು 1986 ಒಪ್ಪಂದವನ್ನು ರದ್ದುಗೊಳಿಸಲಿದೆ.
ಮಾರಿಷಸ್‌ಗೆ ಜಂಟಿಯಾಗಿ ಸಣ್ಣ ಉಪಗ್ರಹವನ್ನು ನಿರ್ಮಿಸಲು MRIC ಆಸಕ್ತಿ ತೋರಿದ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಭಾರತ-ಮಾರಿಷಸ್ ಜಂಟಿ ಉಪಗ್ರಹವನ್ನು ಸಾಕಾರಗೊಳಿಸುವ ಬಗ್ಗೆ MRI ಯೊಂದಿಗೆ ಚರ್ಚೆಯನ್ನು ಪ್ರಾರಂಭಿಸಲು ISRO ಗೆ ವಿನಂತಿಸಿತು. MEA ಧನಸಹಾಯದೊಂದಿಗೆ ಅದರ ಅನುಷ್ಠಾನ, ಉಡಾವಣೆ ಮತ್ತು ಕಾರ್ಯಾಚರಣೆಗಾಗಿ ಜಂಟಿ ಉಪಗ್ರಹ ಕುರಿತು ಸಮಾಲೋಚನೆ ನಡೆಸಲಾಗಿದೆ. ನವೆಂಬರ್ 1, 2023 ರಂದು ಮಾರಿಷಸ್‌ನ ಪೋರ್ಟ್ ಲೂಯಿಸ್‌ನಲ್ಲಿ 'ಆಪ್ರವಾಸಿ ದಿವಸ್' ಕಾರ್ಯಕ್ರಮಕ್ಕಾಗಿ ಮಾರಿಷಸ್‌ಗೆ ವಿದೇಶಾಂಗ ವ್ಯವಹಾರ ರಾಜ್ಯ ಸಚಿವ (MEA) ಭೇಟಿ ನೀಡಿದ ಸಂದರ್ಭದಲ್ಲಿ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲಾಯಿತು.
****
(Release ID: 1993445)
Visitor Counter : 169
Read this release in:
English
,
Urdu
,
Hindi
,
Marathi
,
Nepali
,
Manipuri
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam