ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಯುನೆಸ್ಕೋದ  ಅಮೂರ್ತ ಪಟ್ಟಿಯಲ್ಲಿ ಗರ್ಬಾ ನೃತ್ಯವನ್ನು ಸೇರ್ಪಡೆ ಮಾಡಿರುವುದನ್ನು ಶ್ಲಾಘಿಸಿದ ಪ್ರಧಾನಮಂತ್ರಿಯವರು 

ಪ್ರಕಟಣಾ ದಿನಾಂಕ: 06 DEC 2023 8:27PM by PIB Bengaluru

ಗುಜರಾತಿನ ಗರ್ಬಾ ನೃತ್ಯದ ಹೆಸರನ್ನು ಯುನೆಸ್ಕೋದ ಅಮೂರ್ತ ಪರಂಪರಾ ಪಟ್ಟಿಯಲ್ಲಿ ಸೇರಿಸಿದ್ದರ ಬಗ್ಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಧಾನಮಂತ್ರಿಯವರು ಎಕ್ಸ್ ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ;

 "ಗರ್ಬಾ ನೃತ್ಯ ಜೀವನ, ಏಕತೆ ಮತ್ತು ನಮ್ಮ ಆಳವಾಗಯೀ ಬೇರೂರಿರುವ ಸಂಪ್ರದಾಯಗಳ ಆಚರಣೆಯಾಗಿದೆ. ಯುನೆಸ್ಕೋ ಅಮೂರ್ತ ಪರಂಪರೆಯ ಪಟ್ಟಿಯಲ್ಲಿ ಅದರ ಸೇರ್ಪಡೆ ಭಾರತೀಯ ಸಂಸ್ಕೃತಿಯ ಸೌಂದರ್ಯವನ್ನು ವಿಶ್ವಕ್ಕೆ ಬಿಂಬಿಸುವಂತಾಗಿದೆ. ಈ ಮಾನ್ಯತೆ ಭವಿಷ್ಯದ ಪೀಳಿಗೆಗೆ ನಮ್ಮ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಸ್ಫೂರ್ತಿ ನೀಡುತ್ತದೆ. ಈ ಜಾಗತಿಕ ಮಾನ್ಯತೆ ಪಡೆದಿರುವುದಕ್ಕೆ ಅಭಿನಂದನೆಗಳು." 

 

********


(ಪ್ರಕಟಣೆ ಐ.ಡಿ.: 1983492) ವಿಸಿಟರ್ ಕೌಂಟರ್ : 111