ಪ್ರಧಾನ ಮಂತ್ರಿಯವರ ಕಛೇರಿ
ಬ್ಯಾಂಕಾಕ್ ನಲ್ಲಿ ನಡೆದ ಪ್ಯಾರಾ ಏಷ್ಯನ್ ಆರ್ಚರಿ ಚಾಂಪಿಯನ್ ಷಿಪ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತೀಯ ಪ್ಯಾರಾ ಆರ್ಚರಿ ತಂಡಕ್ಕೆ ಪ್ರಧಾನಮಂತ್ರಿ ಅಭಿನಂದನೆ
प्रविष्टि तिथि:
23 NOV 2023 10:58AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬ್ಯಾಂಕಾಕ್ ನಲ್ಲಿ ನಡೆದ ಪ್ಯಾರಾ ಏಷ್ಯನ್ ಆರ್ಚರಿ ಚಾಂಪಿಯನ್ ಷಿಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ಪ್ಯಾರಾ ಆರ್ಚರಿ ತಂಡವನ್ನು ಅಭಿನಂದಿಸಿದರು.
ಈ ಸಂಬಂಧ ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
"ಬ್ಯಾಂಕಾಕ್ ನಲ್ಲಿ ನಡೆದ ಪ್ಯಾರಾ ಏಷ್ಯನ್ ಆರ್ಚರಿ ಚಾಂಪಿಯನ್ ಷಿಪ್ ನಲ್ಲಿ ಐತಿಹಾಸಿಕ ಗೆಲುವು!
ಅದ್ಭುತ ಪ್ರದರ್ಶನ ನೀಡಿ, ಇತಿಹಾಸದ ಪುಸ್ತಕಗಳಲ್ಲಿ ತಮ್ಮ ಹೆಸರುಗಳನ್ನು ದಾಖಲಿಸಿರುವ ಅಸಾಧಾರಣ ಭಾರತೀಯ ಪ್ಯಾರಾ ಆರ್ಚರಿ ತಂಡಕ್ಕೆ ಅಭಿನಂದನೆಗಳು!
ಚಾಂಪಿಯನ್ ಷಿಪ್ ನಲ್ಲಿ ತಂಡವು 4 ಚಿನ್ನದ ಪದಕಗಳು ಸೇರಿದಂತೆ ಒಟ್ಟು 9 ಪದಕಗಳೊಂದಿಗೆ ತಮ್ಮ ಅತ್ಯುತ್ತಮ ಪ್ರದರ್ಶನದೊಂದಿಗೆ ಪ್ರಕಾಶಮಾನವಾಗಿ ಹೊಳೆಯುತ್ತಿದೆ.
ಪ್ರತಿಯೊಬ್ಬ ಕ್ರೀಡಾಪಟುವಿನ ಕೊಡುಗೆಗಾಗಿ ಅಭಿನಂದನೆಗಳು.ಅವರು ನಮ್ಮನ್ನು ಸದಾ ಹೆಮ್ಮೆ ಪಡುವಂತೆ ಮಾಡಲಿ,'' ಎಂದಿದ್ದಾರೆ
***
(रिलीज़ आईडी: 1979063)
आगंतुक पटल : 140
इस विज्ञप्ति को इन भाषाओं में पढ़ें:
English
,
Urdu
,
हिन्दी
,
Marathi
,
Bengali
,
Assamese
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam