ವಾರ್ತಾ ಮತ್ತು ಪ್ರಸಾರ ಸಚಿವಾಲಯ

ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ


ಮೊದಲ ದಿನದಂದು 250 + ಗ್ರಾಮ ಪಂಚಾಯತ್‌ ಗಳಲ್ಲಿ 100,000 ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು

ಕಲ್ಯಾಣ ಯೋಜನೆಗಳ ಶೇಕಡಾ 100 ಸಂಪೂರ್ಣತೆ ಸಾಧನೆಯ ಗುರಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆಗಾಗಿ 21000 ನೋಂದಣಿ

Posted On: 17 NOV 2023 4:00PM by PIB Bengaluru

ಅದ್ದೂರಿ ಆರಂಭ ಕಂಡ ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಮೊದಲ ದಿನವೇ ದೇಶದ 259 ಗ್ರಾಮ ಪಂಚಾಯತ್‌ ಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿತು.  ಈ ಅಭಿಯಾನಕ್ಕೆ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 15, 2023 ರಂದು ಜಾರ್ಖಂಡ್‌ ನ ಖುಂಟಿಯಲ್ಲಿ ಹಸಿರು ನಿಶಾನೆ ತೋರಿಸಿದರು. ಇದೇ ಸಮಯದಲ್ಲಿ ದೇಶದಾದ್ಯಂತ ಗಮನಾರ್ಹ ಬುಡಕಟ್ಟು ಜನಸಂಖ್ಯೆಯನ್ನು ಹೊಂದಿರುವ ವಿವಿಧ ಸ್ಥಳಗಳಿಂದ ಏಕಕಾಲದಲ್ಲಿ ಅನೇಕ ವಾಹನಗಳಿಗೂ ಚಾಲನೆ ನೀಡಲಾಯಿತು.  ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಮೊದಲ ದಿನದಂದು ಕಾರ್ಯಕ್ರಮಗಳು ಮತ್ತು ಉಪಕ್ರಮಗಳ ಸಂಯೋಜಿತ  ಚಟುವಟಿಕೆಗಳು ಆರಂಭವಾದವು. ಇದರಲ್ಲಿ ರಾಷ್ಟ್ರ ಅಭಿವೃದ್ಧಿಯ ಹಂಚಿಕೆಯ ದೃಷ್ಟಿಕೋನಕ್ಕಾಗಿ ಸಬಲೀಕರಣ ಮತ್ತು ಸಾಮೂಹಿಕ ತೊಡಗಿಸಿಕೊಳ್ಳುವಿಕೆಯ ಕಥೆಗಳನ್ನು ಒಟ್ಟಿಗೆ ಹೆಣೆಯಲಾಗಿದೆ.

ಜನರು ವಿಕಸಿತ ಭಾರತ ಸಂಕಲ್ಪ ಯಾತ್ರಾ ಐಇಸಿ ವಾಹನಗಳ ಬಳಿ ಕಿಕ್ಕಿರಿದು ಸೇರಿದರು ಮತ್ತು ಆಯೋಜಿಸಲಾದ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿದರು ಹಾಗೂ ಸ್ಥಳದಲ್ಲೇ ಒದಗಿಸಿದ ಸೇವೆಗಳನ್ನು ಪಡೆದುಕೊಂಡರು.  ಮೊದಲ ದಿನ 16,000 ಕ್ಕೂ ಹೆಚ್ಚು ಜನರು ಆರೋಗ್ಯ ಶಿಬಿರದಲ್ಲಿ ಭಾಗವಹಿಸಿದರು, 6,000 ಕ್ಕೂ ಹೆಚ್ಚು ಜನರು ಕ್ಷಯ ಮತ್ತು 4500 ಕ್ಕೂ ಹೆಚ್ಚು ಜನರು ಸಿಕಲ್ ಸೆಲ್ ರಕ್ತಹೀನತೆ ಕಾಯಿಲೆಯ ತಪಾಸಣೆ ಮಾಡಿಸಿದರು.

ಕೇಂದ್ರ ಸರ್ಕಾರದ ಕಲ್ಯಾಣ ಯೋಜನೆಗಳು ಮತ್ತು ನೀತಿಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಪ್ರಮುಖ ಸರ್ಕಾರಿ ಯೋಜನೆಗಳ ಶೇಕಡಾ 100 ರಷ್ಟು ಸಂಪೂರ್ಣತೆಯನ್ನು ಸಾಧಿಸುವುದು ಯಾತ್ರೆಯ ಗುರಿಯಾಗಿದೆ. ಈ ಉದ್ದೇಶಕ್ಕೆ ಅನುಗುಣವಾಗಿ, ಯಾತ್ರೆಯ ಮೊದಲ ದಿನವೇ 21000 ಕ್ಕೂ ಹೆಚ್ಚು ಜನರು ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ ನೋಂದಾಯಿಸಿಕೊಂಡರು.

ಈ ಪ್ರಯತ್ನದಲ್ಲಿ ನಾಗರಿಕರ ಪಾತ್ರ ಮತ್ತು ಜವಾಬ್ದಾರಿಯನ್ನು ಅಭಿವೃದ್ಧಿಪಡಿಸುವ ಮತ್ತು ಅಂಗೀಕರಿಸುವ ಭಾರತದ ಸಂಕಲ್ಪಕ್ಕೆ ಈ ಯಾತ್ರೆಯು ಸಾಕ್ಷಿಯಾಗಿದೆ. 1200 ಕ್ಕೂ ಹೆಚ್ಚು ಮೇರಾ ಯುವ ಮೈ ಭಾರತ್ ಸ್ವಯಂಸೇವಕರನ್ನು ನೋಂದಾಯಿಸಲಾಗಿದೆ. ಜೊತೆಗೆ 80,000 ಕ್ಕೂ ಹೆಚ್ಚು ಜನರು ಪರಿವರ್ತಕವಾದ "ಸಂಕಲ್ಪ ಪ್ರತಿಜ್ಞೆ" ಮಾಡಿದರು. ಯಾತ್ರೆಯು ಮೊದಲ ದಿನ ಗಮನಾರ್ಹ ವ್ಯಕ್ತಿಗಳ -3,448 ಮಹಿಳೆಯರು, 1,475 ವಿದ್ಯಾರ್ಥಿಗಳು, 495 ಸ್ಥಳೀಯ ಕಲಾವಿದರು ಮತ್ತು 298 ಕ್ರೀಡಾಪಟುಗಳ-ಪ್ರಯತ್ನಗಳನ್ನು ಗುರುತಿಸಲಾಯಿತು ಮತ್ತು ಅವರನ್ನು ಸ್ಪೂರ್ತಿದಾಯಕ ವ್ಯಕ್ತಿಗಳೆಂದು ಅಂಗೀಕರಿಸಲಾಯಿತು.

ಡ್ರೋನ್ ಪ್ರದರ್ಶನವು ಭಾರೀ ಯಶಸ್ಸು ಕಂಡಿದೆ

ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಕೃಷಿ ಕ್ಷೇತ್ರದಲ್ಲಿನ ಅಭಿವೃದ್ಧಿಯನ್ನು ಪ್ರದರ್ಶಿಸುತ್ತದೆ, ಅದನ್ನು ರೈತರು ತಮ್ಮ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಬಳಸಿಕೊಳ್ಳಬಹುದು. ಮೊದಲ ದಿನದಂದು, 120 ಕ್ಕೂ ಹೆಚ್ಚು ಡ್ರೋನ್ ಪ್ರದರ್ಶನಗಳು ಮತ್ತು ಮಣ್ಣಿನ ಆರೋಗ್ಯ ಕಾರ್ಡ್ ಪ್ರದರ್ಶನಗಳನ್ನು ಆಯೋಜಿಸಲಾಯಿತು. ಸಹಜ ಕೃಷಿ ಮಾಡುವ ರೈತರೊಂದಿಗೆ ಸಂವಾದ ನಡೆಯಿತು.

ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಸರ್ಕಾರದ ಪ್ರಮುಖ ಯೋಜನೆಗಳ ಶೇಕಡಾ 100 ರಷ್ಟು ಸಂಪೂರ್ಣತೆಯನ್ನು ಸಾಧಿಸಿದ ಮೈಲಿಗಲ್ಲುಗಳನ್ನು ಎತ್ತಿ ತೋರಿಸುತ್ತದೆ. ಮೊದಲ ದಿನದಂದು 259 ಗ್ರಾಮ ಪಂಚಾಯತ್‌ ಗಳಲ್ಲಿ 83 ಆಯುಷ್ಮಾನ್ ಕಾರ್ಡ್ ಗಳಲ್ಲಿ ಶೇಕಡಾ 100 ಸಂಪೂರ್ಣತೆ, 89 ಜೆಜೆಎಂನಲ್ಲಿ ಶೇಕಡಾ 100 ಸಂಪೂರ್ಣತೆ, 97 ಜನಧನ್ ನಲ್ಲಿ ಶೇಕಡಾ 100  ಸಂಪೂರ್ಣತೆ ಮತ್ತು 124 ಒಡಿಎಫ್+ ನಲ್ಲಿ ಶೇಕಡಾ 100 ಮೈಲಿಗಲ್ಲು ಸಾಧಿಸಿವೆ.

ಯಾತ್ರೆಯಲ್ಲಿ ವೈಯಕ್ತಿಕ ಯಶೋಗಾಥೆಗಳು ಇರುತ್ತವೆ. ಮೊದಲ ದಿನದಂದು, 200 ಕ್ಕೂ ಹೆಚ್ಚು ಫಲಾನುಭವಿಗಳು "ಮೇರಿ ಕಹಾನಿ ಮೇರಿ ಜುಬಾನಿ" ಯನ್ನು ಪ್ರಸ್ತುತಪಡಿಸಿದರು, ಇವು ಸರ್ಕಾರದ ಪ್ರಮುಖ ಯೋಜನೆಗಳು ಅವರ ಜೀವನದಲ್ಲಿ ತಂದ ಪರಿವರ್ತನೆಗೆ ಸಾಕ್ಷಿಯಾಗಿವೆ.

ವಿಕಸಿತ ಭಾರತ ಸಂಕಲ್ಪ ಯಾತ್ರೆಯು ಭಾರತ ಸರ್ಕಾರದ ಅತಿ ದೊಡ್ಡ ಉಪಕ್ರಮವಾಗಿದೆ. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯ ದೃಷ್ಟಿಕೋನದಲ್ಲಿ ಯೋಜಿಸಲಾಗಿದೆ, ಇದು ತನ್ನ ಯೋಜನೆಗಳ ಪ್ರಯೋಜನಗಳು ಎಲ್ಲಾ ನಾಗರಿಕರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವ, ಆ ಮೂಲಕ ಶೇಕಡಾ 100 ಸಂಪೂರ್ಣತೆಯನ್ನು ಸಾಧಿಸುವ ಸರ್ಕಾರದ ನಿರಂತರ ಪ್ರಯತ್ನವಾಗಿದೆ. ಯಾತ್ರೆಯು ಮಾಹಿತಿಯ ಪ್ರಸಾರ ಮತ್ತು ದೇಶದ ಅಭಿವೃದ್ಧಿಯಲ್ಲಿ ಸಕ್ರಿಯ ಪಾಲುದಾರರಾಗಲು ನಾಗರಿಕರನ್ನು ಸಬಲೀಕರಣಗೊಳಿಸುವ ಮೂಲಕ ಈ ಉದ್ದೇಶದ ಸಾಧನೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.

ವಿಕ್ಷಿತ್ ಭಾರತ್ ಅಭಿಯಾನದ ಸಂದರ್ಭದಲ್ಲಿ ವಿತರಿಸಲಾದ ಸಾರ್ವಜನಿಕ ಕಲ್ಯಾಣ ಯೋಜನೆಗಳ ಸಾಹಿತ್ಯ

ಬಿಹಾರದ ಹಳ್ಳಿಯೊಂದರಲ್ಲಿ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರಾ ಐಇಸಿ ವ್ಯಾನ್.

ವಿಕ್ಷಿತ್ ಭಾರತ್ ಅಭಿಯಾನದ ಭಾಗವಾಗಿ ಡ್ರೋನ್ ಪ್ರದರ್ಶನ

Health screening held in WJH for Viksit Bharat Sankalp yatra

ಈಶಾನ್ಯದಲ್ಲಿ ವಿಕ್ಷಿತ್ ಭಾರತ್ ಸಂಕಲ್ಪ ಯಾತ್ರೆ ಐಇಸಿ ವ್ಯಾನ್

Image

ಅಸ್ಸಾಂನಲ್ಲಿ ಆರೋಗ್ಯ ಶಿಬಿರ

 

 

*****

 

 



(Release ID: 1977627) Visitor Counter : 190