ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​23 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವನ್ನು ಶ್ಲಾಘಿಸಿದ ಪ್ರಧಾನಿ

प्रविष्टि तिथि: 02 NOV 2023 9:29PM by PIB Bengaluru

ಇತ್ತೀಚೆಗೆ ನಡೆದ 23 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತೀಯ ತಂಡವನ್ನು ಇಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹುರಿದುಂಬಿಸಿದರು.

ಪ್ರಧಾನಮಂತ್ರಿಯವರು ಈ ಬಗ್ಗೆ X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:

"ಇತ್ತೀಚೆಗೆ ನಡೆದ 23 ವರ್ಷದೊಳಗಿನವರ ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಕುಸ್ತಿ ಪರಾಕ್ರಮವು ತನ್ನ ಅತ್ಯುತ್ತಮ ಪ್ರದರ್ಶನದೊಂದಿಗೆ ಪ್ರಕಾಶಮಾನವಾಗಿ ಹೊಳೆಯುತ್ತದೆ, ನಾವು ಅತ್ಯುತ್ತಮ 9 ಪದಕಗಳನ್ನು ಗಳಿಸಿದ್ದೇವೆ, ಅದರಲ್ಲಿ 6 ಪದಕಗಳನ್ನು ನಮ್ಮ ನಾರಿ ಶಕ್ತಿ ಗೆದ್ದಿದೆ. ವಿಶ್ವ ಚಾಂಪಿಯನ್ ಶಿಪ್ ನಲ್ಲಿ  ನಮ್ಮ ಬೆಳೆಯುತ್ತಿರುವ ಕುಸ್ತಿಪಟುಗಳ ಈ ಗಮನಾರ್ಹ ಪ್ರದರ್ಶನವು ನಮ್ಮ ಕುಸ್ತಿಪಟುಗಳ ನಿರಂತರ ಪರಿಶ್ರಮ ಮತ್ತು ದೃಢತೆಗೆ ಸಾಕ್ಷಿಯಾಗಿದೆ. ಅವರಿಗೆ ಅಭಿನಂದನೆಗಳು ಮತ್ತು ಅವರ ಮುಂಬರುವ ಪ್ರಯತ್ನಗಳಿಗೆ ಶುಭವಾಗಲಿ" ಎಂದು ಅವರು ಹೇಳಿದ್ದಾರೆ.

*****


(रिलीज़ आईडी: 1974369) आगंतुक पटल : 134
इस विज्ञप्ति को इन भाषाओं में पढ़ें: Marathi , Tamil , Assamese , English , Urdu , हिन्दी , Manipuri , Bengali , Punjabi , Gujarati , Gujarati , Odia , Telugu , Malayalam