ಪ್ರಧಾನ ಮಂತ್ರಿಯವರ ಕಛೇರಿ

ಭಾರತ ಮತ್ತು ಬಾಂಗ್ಲಾದೇಶದ ಪ್ರಧಾನ ಮಂತ್ರಿಗಳು ನವೆಂಬರ್ ಒಂದರಂದು ಮೂರು ಅಭಿವೃದ್ಧಿ ಯೋಜನೆಗಳನ್ನು ಜಂಟಿಯಾಗಿ ಉದ್ಘಾಟಿಸಲಿದ್ದಾರೆ


ಈ ಮೂರು ಯೋಜನೆಗಳನ್ನು ಭಾರತದ ನೆರವಿನ ಮೂಲಕ ಕಾರ್ಯಗತಗೊಳಿಸಲಾಗಿದೆ

ಮೂರು ಯೋಜನೆಗಳು : ಅಖೌರಾ-ಅಗರ್ತಲಾ ಗಡಿಯಾಚೆಗಿನ ರೈಲು ಸಂಪರ್ಕ; ಖುಲ್ನಾ - ಮೊಂಗ್ಲಾ ಬಂದರು ರೈಲು ಮಾರ್ಗ; ಮತ್ತು ಮೈತ್ರಿ ಸೂಪರ್ ಥರ್ಮಲ್ ಪವರ್ ಪ್ಲಾಂಟ್ನ ಘಟಕ – II

ವಿವಿಧ ಯೋಜನೆಗಳು ಈ ಪ್ರದೇಶದಲ್ಲಿ ಸಂಪರ್ಕ ಮತ್ತು ಇಂಧನ ಭದ್ರತೆಯನ್ನು ಬಲಪಡಿಸುತ್ತದೆ

Posted On: 31 OCT 2023 5:02PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಮಂತ್ರಿ   ಶೇಖ್ ಹಸೀನಾ ಅವರು ಮೂರು ಭಾರತೀಯ ನೆರವಿನ ಅಭಿವೃದ್ಧಿ ಯೋಜನೆಗಳನ್ನು 1 ನವೆಂಬರ್ 2023 ರಂದು ಬೆಳಿಗ್ಗೆ ಸುಮಾರು 11  ಗಂಟೆಗೆ  ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಜಂಟಿಯಾಗಿ ಉದ್ಘಾಟಿಸಲಿದ್ದಾರೆ.  ಈ ಮೂರು ಯೋಜನೆಗಳು ಅಖೌರಾ - ಅಗರ್ತಲಾ ಗಡಿಯಾಚೆಗಿನ  ರೈಲು ಸಂಪರ್ಕ ; ಖುಲ್ನಾ - ಮೊಂಗ್ಲಾ ಬಂದರು ರೈಲು ಮಾರ್ಗ; ಮತ್ತು ಮೈತ್ರೀ ಸೂಪರ್ ಥರ್ಮಲ್ ಪವರ್ ಪ್ಲಾಂಟ್ನ ಘಟಕ – II ಅನ್ನು ಒಳಗೊಂಡಿವೆ.

ಅಖೌರಾ-ಅಗರ್ತಲಾ ಗಡಿಯಾಚೆಗಿನ  ರೈಲು ಸಂಪರ್ಕ ಯೋಜನೆಯನ್ನು ಭಾರತ ಸರ್ಕಾರವು ಬಾಂಗ್ಲಾದೇಶಕ್ಕೆ  ನೀಡಿದ  392.52 ಕೋಟಿ ರೂಪಾಯಿಗಳ ಅನುದಾನದ ಅಡಿಯಲ್ಲಿ ಕಾರ್ಯಗತಗೊಳಿಸಲಾಗಿದೆ.  ರೈಲು ಸಂಪರ್ಕದ ಉದ್ದವು ಬಾಂಗ್ಲಾದೇಶದಲ್ಲಿ 6.78 ಕಿ.ಮೀ. ಡ್ಯುಯಲ್ ಗೇಜ್ ರೈಲು ಮಾರ್ಗ ಮತ್ತು ತ್ರಿಪುರಾದಲ್ಲಿ 5.46 ಕಿ.ಮೀ. ಆಗಿದ್ದು ಒಟ್ಟು 12.24 ಕಿಮೀ ಇದೆ.

ಖುಲ್ನಾ-ಮೊಂಗ್ಲಾ ಪೋರ್ಟ್ ರೈಲು ಮಾರ್ಗ ಯೋಜನೆಯನ್ನು ಭಾರತ ಸರ್ಕಾರದ ರಿಯಾಯಿತಿ ಸಾಲದ ಅಡಿಯಲ್ಲಿ ಒಟ್ಟು 388.92  ದಶಲಕ್ಷ ಡಾಲರ್ ಯೋಜನಾ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯು ಮೊಂಗ್ಲಾ ಬಂದರು ಮತ್ತು ಖುಲ್ನಾದಲ್ಲಿ ಅಸ್ತಿತ್ವದಲ್ಲಿರುವ ರೈಲು ಜಾಲದ ನಡುವೆ ಸರಿಸುಮಾರು 65 ಕಿಲೋಮೀಟರ್ ಬ್ರಾಡ್ ಗೇಜ್ ರೈಲು ಮಾರ್ಗದ ನಿರ್ಮಾಣವನ್ನು ಒಳಗೊಂಡಿರುತ್ತದೆ. ಇದರೊಂದಿಗೆ, ಬಾಂಗ್ಲಾದೇಶದ ಎರಡನೇ ಅತಿದೊಡ್ಡ ಬಂದರು ಮೊಂಗ್ಲಾ ಬ್ರಾಡ್-ಗೇಜ್ ರೈಲ್ವೆ ಜಾಲದೊಂದಿಗೆ ಸಂಪರ್ಕವನ್ನು ಹೊಂದುತ್ತದೆ.

ಮೈತ್ರೀ ಸೂಪರ್ ಥರ್ಮಲ್ ಪವರ್ ಪ್ರಾಜೆಕ್ಟ್ 1.6 ಶತಕೋಟಿ ಡಾಲರಿನ  ಭಾರತೀಯ ರಿಯಾಯಿತಿ ಹಣಕಾಸು ಯೋಜನೆ ಸಾಲದ ಅಡಿಯಲ್ಲಿ, ಬಾಂಗ್ಲಾದೇಶದ ಖುಲ್ನಾ ವಿಭಾಗದ ರಾಂಪಾಲ್ನಲ್ಲಿರುವ 1320 ಮೆವ್ಯಾ (2x660) ಸೂಪರ್ ಥರ್ಮಲ್ ಪವರ್ ಪ್ಲಾಂಟ್ (ಎಂಎಸ್ ಟಿಪಿಪಿ) ಆಗಿದೆ.  ಈ ಯೋಜನೆಯನ್ನು ಬಾಂಗ್ಲಾದೇಶ್-ಇಂಡಿಯಾ ಫ್ರೆಂಡ್ಶಿಪ್ ಪವರ್ ಕಂಪನಿ (ಪ್ರೈವೇಟ್) ಲಿಮಿಟೆಡ್ (ಬಿಐಎಫ್ ಪಿಸಿಎಲ್) ಕಾರ್ಯಗತಗೊಳಿಸುತ್ತಿದೆ.  ಬಿಐಎಫ್ ಪಿಸಿಎಲ್ ಭಾರತದ ಎನ್ಟಿಪಿಸಿ ಲಿಮಿಟೆಡ್ ಮತ್ತು ಬಾಂಗ್ಲಾದೇಶ ಪವರ್ ಡೆವಲಪ್ಮೆಂಟ್ ಬೋರ್ಡ್ (ಬಿಪಿಡಿಬಿ) ನಡುವಿನ 50:50 ಜಂಟಿ ಉದ್ಯಮವಾಗಿದೆ. ಮೈತ್ರೀ ಸೂಪರ್ ಥರ್ಮಲ್ ಪವರ್ ಪ್ಲಾಂಟ್ನ ಘಟಕ I ಅನ್ನು ಇಬ್ಬರೂ ಪ್ರಧಾನ ಮಂತ್ರಿಗಳು ಸೆಪ್ಟೆಂಬರ್ 2022 ರಲ್ಲಿ ಜಂಟಿಯಾಗಿ ಉದ್ಘಾಟಿಸಿದ್ದರು ಮತ್ತು ಘಟಕ 2 ಅನ್ನು  ನವೆಂಬರ್ 1, 2023 ರಂದು ಉದ್ಘಾಟಿಸಲಾಗುವುದು. ಮೈತ್ರೀ ಸೂಪರ್ ಥರ್ಮಲ್ ಪವರ್ ಪ್ಲಾಂಟ್ನ ಕಾರ್ಯಾಚರಣೆಯು ಬಾಂಗ್ಲಾದೇಶದಲ್ಲಿ ಇಂಧನ ಸುರಕ್ಷತೆಯನ್ನು ಹೆಚ್ಚಿಸುತ್ತದೆ.
 
ಈ ಯೋಜನೆಗಳು ಈ ಪ್ರದೇಶದಲ್ಲಿ ಸಂಪರ್ಕ ಮತ್ತು ಇಂಧನ ಭದ್ರತೆಯನ್ನು ಬಲಪಡಿಸುತ್ತದೆ.

***(Release ID: 1973483) Visitor Counter : 87