ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಪ್ಯಾರಾ ಗೇಮ್ಸ್ 2022 ರಲ್ಲಿ ಪುರುಷರ 100 ಮೀ-ಟಿ35 ಸ್ಪರ್ಧೆಯಲ್ಲಿ ನಾರಾಯಣ್ ಠಾಕೂರ್ ಕಂಚಿನ ಪದಕವನ್ನು  ಗೆದ್ದಿದ್ದಕ್ಕಾಗಿ ಪ್ರಧಾನಮಂತ್ರಿಯವರು ಅವರನ್ನು ಅಭಿನಂದಿಸಿದರು 

Posted On: 26 OCT 2023 11:24AM by PIB Bengaluru

ಚೀನಾದ ಹ್ಯಾಂಗ್ ಝೌನಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್ 2022ರಲ್ಲಿ ಪುರುಷರ 100 ಮೀ-ಟಿ35 ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಯವರು ನಾರಾಯಣ್ ಠಾಕೂರ್ ಅವರನ್ನು ಅಭಿನಂದಿಸಿದರು

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರಧಾನ ಮಂತ್ರಿಯವರು  ಹೀಗೆ ಹೇಳಿದ್ದಾರೆ:

“ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಎರಡನೇ ಪದಕ ಗೆದ್ದಿದ್ದಕ್ಕಾಗಿ ನಾರಾಯಣ್ ಠಾಕೂರ್ ಅವರಿಗೆ ಅಭಿನಂದನೆಗಳು.

ಪುರುಷರ 100 ಮೀ-ಟಿ35 ಪಂದ್ಯದಲ್ಲಿನ ಈ ಕಂಚಿನ ಪದಕವು ಅವರ ಅಸಾಧಾರಣ ಪ್ರತಿಭೆಗೆ  ಮತ್ತು ಶ್ರೇಷ್ಠತೆಯೆಡೆಗಿರುವ ಅಚಲವಾದ ಬದ್ಧತೆಗೆ ಸಾಕ್ಷಿಯಾಗಿದೆ.

 

***


(Release ID: 1971527) Visitor Counter : 76