ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯಾ ಪ್ಯಾರಾ ಗೇಮ್ಸ್-2022ರ ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್ ಎಸ್ಎಲ್3-ಎಸ್ ಯು5 ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ನಿತೇಶ್ ಕುಮಾರ್ ಮತ್ತು ತುಳಸಿಮತಿ ಮುರುಗೇಶನ್; ಪ್ರಧಾನ ಮಂತ್ರಿ ಸಂಭ್ರಮ

प्रविष्टि तिथि: 25 OCT 2023 4:44PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯಾ ಪ್ಯಾರಾ ಗೇಮ್ಸ್‌-2022ರ ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್ ಎಸ್ಎಲ್3-ಎಸ್ ಯು5 ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ನಿತೇಶ್ ಕುಮಾರ್ ಮತ್ತು ತುಳಸಿಮತಿ ಮುರುಗೇಶನ್ ಅವರನ್ನು ಅಭಿನಂದಿಸಿದ್ದಾರೆ.

ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನ ಮಂತ್ರಿ:

“ಬ್ಯಾಡ್ಮಿಂಟನ್ ಮಿಶ್ರ ಡಬಲ್ಸ್ ಎಸ್ಎಲ್3-ಎಸ್ ಯು5 ಕ್ರೀಡಾಕೂಟದಲ್ಲಿ ಅದ್ಭುತವಾದ ಕಂಚಿನ ಪದಕ ಗೆದ್ದ ನಿತೇಶ್ ಕುಮಾರ್ ಮತ್ತು ತುಳಸಿಮತಿ ಮುರುಗೇಶನ್ ಅವರಿಗೆ ಅಭಿನಂದನೆಗಳು.

ಅವರ ಸಾಧನೆಗಳು ನಮ್ಮ ರಾಷ್ಟ್ರದ ಶ್ರೇಷ್ಠತೆಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.

 

***


(रिलीज़ आईडी: 1971276) आगंतुक पटल : 111
इस विज्ञप्ति को इन भाषाओं में पढ़ें: Malayalam , English , Urdu , Marathi , हिन्दी , Bengali , Manipuri , Assamese , Punjabi , Gujarati , Odia , Tamil , Telugu