ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​'ದಿ ಸಿಂಧಿಯಾ ಸ್ಕೂಲ್'ನ 125ನೇ ಸಂಸ್ಥಾಪಕರ ದಿನಾಚರಣೆ ಪ್ರಯುಕ್ತ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನ ಮಂತ್ರಿಗಳು

प्रविष्टि तिथि: 20 OCT 2023 7:12PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಅಕ್ಟೋಬರ್‌ 21ರಂದು ಸಂಜೆ 5 ಗಂಟೆಗೆ ಗ್ವಾಲಿಯರ್‌ನಲ್ಲಿರುವ 'ದಿ ಸಿಂಧಿಯಾ ಸ್ಕೂಲ್'ನ 125 ನೇ ಸಂಸ್ಥಾಪಕರ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವೇಳೆ ಪ್ರಧಾನ ಮಂತ್ರಿಗಳು ಶಾಲೆಯಲ್ಲಿ ‘ವಿವಿಧೋದ್ದೇಶ ಕ್ರೀಡಾ ಸಂಕೀರ್ಣ’ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಜತೆಗೆ ಶಾಲೆಯ ವಾರ್ಷಿಕ ಪ್ರಶಸ್ತಿಗಳನ್ನು ಪ್ರತಿಷ್ಠಿತ ಹಳೆಯ ವಿದ್ಯಾರ್ಥಿಗಳು ಮತ್ತು ಉನ್ನತ ಸಾಧಕರಿಗೆ ಪ್ರದಾನ ಮಾಡಲಿದ್ದಾರೆ. ಹಾಗೆಯೇ ಸಮಾರಂಭವನ್ನು ಉದ್ದೇಶಿಸಿಯೂ ಅವರು ಭಾಷಣ ಮಾಡಲಿದ್ದಾರೆ.

1897ರಲ್ಲಿ ಸ್ಥಾಪನೆಯಾಗಿರುವ ʼದಿ ಸಿಂಧಿಯಾ ಶಾಲೆʼಯು ಐತಿಹಾಸಿಕ ಗ್ವಾಲಿಯರ್ ಕೋಟೆಯ ಮೇಲಿರುವುದು ವಿಶೇಷ.

*****


(रिलीज़ आईडी: 1971239) आगंतुक पटल : 123
इस विज्ञप्ति को इन भाषाओं में पढ़ें: Marathi , Assamese , Telugu , English , Urdu , हिन्दी , Manipuri , Bengali , Punjabi , Gujarati , Odia , Tamil , Malayalam