ಪ್ರಧಾನ ಮಂತ್ರಿಯವರ ಕಛೇರಿ
ಮುಂಬರುವ ಲಾಸ್ ಏಂಜಲ್ಸ್ ಒಲಂಪಿಕ್ಸ್ 2028 ರಲ್ಲಿ ಕ್ರಿಕೆಟ್ ಅನ್ನು ಸೇರಿಸುವುದನ್ನು ಸ್ವಾಗತಿಸಿದ ಪ್ರಧಾನಮಂತ್ರಿ
Posted On:
16 OCT 2023 8:03PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೇಸ್‌ಬಾಲ್-ಸಾಫ್ಟ್‌ಬಾಲ್, ಕ್ರಿಕೆಟ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್ ಮತ್ತು ಸ್ಕ್ವಾಷ್‌ಗಳನ್ನು ಲಾಸ್ ಏಂಜಲ್ಸ್ ಒಲಂಪಿಕ್ ಗೇಮ್ಸ್ 2028 ರಲ್ಲಿ ಸೇರಿಸಿಕೊಳ್ಳುವುದನ್ನು ಸ್ವಾಗತಿಸಿದರು. ಕ್ರಿಕೆಟ್ ನ ಸೇರ್ಪಡೆಯು ಈ ಅದ್ಭುತ ಕ್ರೀಡೆಯ ಜಾಗತಿಕ ಜನಪ್ರಿಯತೆಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ
ಪ್ರಧಾನಮಂತ್ರಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಈ ರೀತಿ ಸಂದೇಶ ಹೇಳಿದ್ದಾರೆ;
"ಲಾಸ್ ಏಂಜಲ್ಸ್ ಒಲಂಪಿಕ್ ಗೇಮ್ಸ್ 2028 (@LA28) ರಲ್ಲಿ ಬೇಸ್‌ಬಾಲ್-ಸಾಫ್ಟ್‌ಬಾಲ್, ಕ್ರಿಕೆಟ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್ ಮತ್ತು ಸ್ಕ್ವಾಷ್ ಸೇರಿಸಿಕೊಳ್ಳುವುದು ಸಂಪೂರ್ಣವಾಗಿ ಸಂತೋಷದ ವಿಷಯವಾಗಿದೆ. ಇದು ಕ್ರೀಡಾ ಪಟುಗಳಿಗೆ ಸಂತಸದ ಸುದ್ದಿ. ಕ್ರಿಕೆಟ್ ಆಟವನ್ನು ಪ್ರೀತಿಸುವ ರಾಷ್ಟ್ರವಾಗಿ, ಈ ಅದ್ಭುತ ಕ್ರೀಡೆಯ ಹೆಚ್ಚುತ್ತಿರುವ ಜಾಗತಿಕ ಜನಪ್ರಿಯತೆಯನ್ನು ಪ್ರತಿಬಿಂಬಿಸುವ ಕ್ರಿಕೆಟ್ ಆಟದ ಸೇರ್ಪಡೆಯನ್ನು ನಾನು ವಿಶೇಷವಾಗಿ ಸ್ವಾಗತಿಸುತ್ತೇನೆ."
***
(Release ID: 1968420)
Visitor Counter : 92
Read this release in:
English
,
Urdu
,
Hindi
,
Marathi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam