ಪ್ರಧಾನ ಮಂತ್ರಿಯವರ ಕಛೇರಿ
ಭಾರತವು ಜಾಗತಿಕ ಉಜ್ವಲ ತಾಣ, ಬೆಳವಣಿಗೆ ಮತ್ತು ನಾವೀನ್ಯತೆ(ಅನುಶೋಧನೆ)ಯ ಶಕ್ತಿಕೇಂದ್ರ: ಪ್ರಧಾನ ಮಂತ್ರಿ
प्रविष्टि तिथि:
11 OCT 2023 8:09AM by PIB Bengaluru
ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್0) ಭಾರತದ ಅರ್ಥ ವ್ಯವಸ್ಥೆಯ ಬೆಳವಣಿಗೆ ಕುರಿತು ನೀಡಿರುವ ಮುನ್ನೋಟ(ಮುನ್ಸೂಚನೆ) ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜಾಗತಿಕ ಮಟ್ಟದಲ್ಲಿ ಭಾರತವು ಉಜ್ವಲ ತಾಣವಾಗಿದೆ, ಬೆಳವಣಿಗೆ ಮತ್ತು ನಾವೀನ್ಯತೆ(ಆವಿಷ್ಕಾರ)ಯ ಶಕ್ತಿ ಕೇಂದ್ರವಾಗಿದೆ. ಇದಕ್ಕೆ ನಮ್ಮ ಜನರ ಅಪಾರ ಶಕ್ತಿ(ಬಲ) ಮತ್ತು ಕೌಶಲ್ಯವೇ ಕಾರಣ ಎಂದು ಹೇಳಿದರು.
ನಮ್ಮ ಸುಧಾರಣಾ ಪಥವನ್ನು ಮತ್ತಷ್ಟು ಹೆಚ್ಚಿಸುವ ಮೂಲಕ ಸಮೃದ್ಧ ಭಾರತ ಕಟ್ಟುವ ನಮ್ಮ ಪ್ರಯಾಣ ಬಲಪಡಿಸುವುದನ್ನು ಮುಂದುವರಿಸುತ್ತೇವೆ ಎಂದು ಅವರು ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.
ಐಎಂಎಫ್ ವರದಿಯ ಟ್ವೀಟ್ ಗಳಿಗೆ ಮರುಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ;
“ನಮ್ಮ ಜನರ ಶಕ್ತಿ(ಬಲ) ಮತ್ತು ಕೌಶಲ್ಯದಿಂದ ಬಲಗೊಂಡಿರುವ ಭಾರತವು ಜಾಗತಿಕ ಉಜ್ವಲ ತಾಣವಾಗಿದೆ, ಬೆಳವಣಿಗೆ ಮತ್ತು ನಾವೀನ್ಯತೆಯ ಶಕ್ತಿ ಕೇಂದ್ರವಾಗಿದೆ. ನಾವು ಸಮೃದ್ಧ ಭಾರತ ಕಟ್ಟುವ ನಮ್ಮ ಪ್ರಯಾಣ ಬಲಪಡಿಸುವುದನ್ನು ಮುಂದುವರಿಸುತ್ತೇವೆ, ನಮ್ಮ ಸುಧಾರಣೆಗಳ ಪಥವನ್ನು ಮತ್ತಷ್ಟು ಹೆಚ್ಚಿಸುತ್ತೇವೆ” ಎಂದು ಅವರು ತಿಳಿಸಿದರು.
***
(रिलीज़ आईडी: 1966553)
आगंतुक पटल : 128
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Bengali-TR
,
Assamese
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam