ಪ್ರಧಾನ ಮಂತ್ರಿಯವರ ಕಛೇರಿ
ಕಳೆದ 60 ವರ್ಷಗಳಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವನ್ನು ಶ್ಲಾಘಿಸಿದ ಪ್ರಧಾನಮಂತ್ರಿ
प्रविष्टि तिथि:
08 OCT 2023 11:03AM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕಳೆದ 60 ವರ್ಷಗಳಲ್ಲಿ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಅತ್ಯುತ್ತಮ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ಶ್ರೀ ನರೇಂದ್ರ ಮೋದಿ ಅವರು ಆಟಗಾರರ ಅಚಲ ದೃಢನಿಶ್ಚಯ, ಅವಿರತ ಮನೋಭಾವ ಮತ್ತು ಕಠಿಣ ಪರಿಶ್ರಮವನ್ನು ಶ್ಲಾಘಿಸಿದರು.
ಪ್ರಧಾನಮಂತ್ರಿ ಅವರು ಎಕ್ಸ್ ಖಾತೆಯಲ್ಲಿ ಈ ಸಂಬಂಧ ಹಂಚಿಕೊಂಡಿದ್ದಾರೆ:
"ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಐತಿಹಾಸಿಕ ಸಾಧನೆ!
ನಮ್ಮ ಅದ್ಭುತ ಕ್ರೀಡಾಪಟುಗಳು ಕಳೆದ 60 ವರ್ಷಗಳಲ್ಲಿ ಅತ್ಯುತ್ತಮ ಪ್ರದರ್ಶನವಾದ ಒಟ್ಟು 107 ಪದಕಗಳನ್ನು ಮನೆಗೆ ತಂದಿದ್ದಾರೆ ಎಂದು ಇಡೀ ರಾಷ್ಟ್ರವು ತುಂಬಾ ಸಂತೋಷವಾಗಿದೆ.
ನಮ್ಮ ಆಟಗಾರರ ಅಚಲ ದೃಢನಿಶ್ಚಯ, ಅವಿರತ ಮನೋಭಾವ ಮತ್ತು ಕಠಿಣ ಪರಿಶ್ರಮವು ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಿದೆ. ಅವರ ಗೆಲುವುಗಳು ನಮಗೆ ನೆನಪಿಡುವ ಕ್ಷಣಗಳನ್ನು ನೀಡಿವೆ, ನಮ್ಮೆಲ್ಲರಿಗೂ ಸ್ಫೂರ್ತಿ ನೀಡಿವೆ ಮತ್ತು ಶ್ರೇಷ್ಠತೆಗೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿವೆ,’’ ಎಂದಿದ್ದಾರೆ.
(रिलीज़ आईडी: 1965772)
आगंतुक पटल : 165
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam