ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಕಾಂಪೌಂಡ್‌ ತಂಡ ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಪುರುಷರ ಆರ್ಚರಿ ತಂಡವನ್ನು ಅಭಿನಂದಿಸಿದ ಪ್ರಧಾನ ಮಂತ್ರಿಗಳು

प्रविष्टि तिथि: 05 OCT 2023 9:08PM by PIB Bengaluru

ಏಷ್ಯನ್ ಕ್ರೀಡಾಕೂಟದಲ್ಲಿ ಇಂದು ಕಾಂಪೌಂಡ್‌ ತಂಡ ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಅಭಿಷೇಕ್ ವರ್ಮಾ, ಓಜಸ್ ಪ್ರವೀಣ್ ದೇವತಾಳೆ ಹಾಗೂ ಪ್ರಥಮೇಶ್‌ ಚಾವ್ಕರ್‌ ಅವರನ್ನು ಒಳಗೊಂಡ ಪುರುಷರ ಆರ್ಚರಿ ತಂಡವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಈ ಬಗ್ಗೆ ʼಎಕ್ಸ್‌ʼ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪೋಸ್ಟ್‌ ಮಾಡಿರುವ ಅವರು, "ಭಾರತೀಯ ಬಿಲ್ಲುಗಾರರು ಕೊನೆಗೂ ಸಾಧಿಸಿಯೇ ತೀರಿದ್ದಾರೆ! ಕಾಂಪೌಂಡ್‌ ತಂಡ ವಿಭಾಗದಲ್ಲಿ ನಮ್ಮ ಪುರುಷರ ಆರ್ಚರಿ ತಂಡವು ಚಿನ್ನದ ಪದಕ ಗೆದ್ದಿರುವ ಬಗ್ಗೆ ಹೆಮ್ಮೆ ಇದೆ! ಅಭಿಷೇಕ್‌ ವರ್ಮಾ, ಓಜಸ್‌ ಪ್ರವೀಣ್‌ ದೇವತಾಳೆ ಹಾಗೂ ಪ್ರಥಮೇಶ್‌ ಜಾವ್ಕರ್‌ ಅವರು ಆಕರ್ಷಕವಾಗಿ ಪ್ರದರ್ಶನ ನೀಡಿದ್ದಾರೆ. ನಿಜಕ್ಕೂ ಅದ್ಭುತ! ಅವರ ಮುಂದಿನ ಯಶಸ್ಸಿಗೆ ನನ್ನ ಶುಭ ಹಾರೈಕೆಗಳು,ʼʼ ಎಂದು ಆಶಿಸಿದ್ದಾರೆ

***


(रिलीज़ आईडी: 1964941) आगंतुक पटल : 138
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Manipuri , Punjabi , Gujarati , Odia , Tamil , Telugu , Malayalam