ಪ್ರಧಾನ ಮಂತ್ರಿಯವರ ಕಛೇರಿ

​​​​​​​ಮಹಿಳಾ ಬಾಕ್ಸಿಂಗ್ 75 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಲವ್ಲಿನಾ ಬೊರ್ಗೊಹೈನ್ ಅವರಿಗೆ  ಪ್ರಧಾನಿ ಅಭಿನಂದನೆ

Posted On: 04 OCT 2023 7:18PM by PIB Bengaluru

ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳಾ ಬಾಕ್ಸಿಂಗ್ 75 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಲವ್ಲಿನಾ ಬೊರ್ಗೊಹೈನ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿಯವರು ಈ ಬಗ್ಗೆ X ನಲ್ಲಿ ಪೋಸ್ಟ್ ಮಾಡಿದ್ದಾರೆ;

"ಮಹಿಳಾ ಬಾಕ್ಸಿಂಗ್ 75 ಕೆಜಿ ವಿಭಾಗದಲ್ಲಿ ದೇಶಕ್ಕೆ ಬೆಳ್ಳಿ ಪದಕ ತಂದ  @LovlinaBorgohai ಅವರಿಗೆ ಅಭಿನಂದನೆಗಳು.

ಅವರ ಅಸಾಧಾರಣ ಕೌಶಲ್ಯ ಮತ್ತು ತಂತ್ರದ ಪ್ರದರ್ಶನದಿಂದ, ಅವರು ನಮ್ಮ ರಾಷ್ಟ್ರಕ್ಕೆ ಸಂಭ್ರಮವನ್ನು  ಆಚರಿಸಲು ಉತ್ತಮ ಕಾರಣವನ್ನು ನೀಡಿದ್ದಾರೆ. ಅವರು ಎತ್ತರಕ್ಕೆ ಏರಲಿ ಮತ್ತು ಭಾರತ ಹೆಮ್ಮೆಪಡುವಂತೆ ಮಾಡಲಿ" ಎಂದು ಪ್ರಧಾನ ಮಂತ್ರಿ  ಹೇಳಿದ್ದಾರೆ.

 

***



(Release ID: 1964647) Visitor Counter : 81