ಪ್ರಧಾನ ಮಂತ್ರಿಯವರ ಕಛೇರಿ

ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ಮಹಿಳಾ 4x400 ರಿಲೇ ತಂಡಕ್ಕೆ ಪ್ರಧಾನಮಂತ್ರಿ ಅಭಿನಂದನೆ

Posted On: 04 OCT 2023 7:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಏಷ್ಯನ್ ಕ್ರೀಡಾಕೂಟದಲ್ಲಿ ಭಾರತೀಯ ಮಹಿಳಾ 4×400 ರಿಲೇ ತಂಡ ಬೆಳ್ಳಿ ಪದಕ ಗೆದ್ದಿರುವುದಕ್ಕೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಈ ಗಮನಾರ್ಹ ಸಾಧನೆಗಾಗಿ ಶ್ರೀ ನರೇಂದ್ರ ಮೋದಿ ಅವರು ವಿದ್ಯಾ ರಾಮ್ ರಾಜ್, ಐಶ್ವರ್ಯಾ ಕೈಲಾಶ್ ಮಿಶ್ರಾ, ಪ್ರಾಚಿ ಮತ್ತು ಶುಭಾ ವೆಂಕಟೇಶನ್ ಅವರನ್ನು ಅಭಿನಂದಿಸಿದರು.

ಎಕ್ಸ್ ಖಾತೆಯಲ್ಲಿ ಪ್ರಧಾನಮಂತ್ರಿ ಅವರು ಹೀಗೆ ಹೇಳಿದ್ದಾರೆ;

"ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ಮಹಿಳಾ 4×400 ರಿಲೇ ತಂಡದ ಬಗ್ಗೆ ಹೆಮ್ಮೆ ಇದೆ. ಈ ಗಮನಾರ್ಹ ಪ್ರದರ್ಶನಕ್ಕಾಗಿ ವಿದ್ಯಾ ರಾಮ್ ರಾಜ್, ಐಶ್ವರ್ಯಾ ಕೈಲಾಶ್ ಮಿಶ್ರಾ, ಪ್ರಾಚಿ ಮತ್ತು ಶುಭಾ ವೆಂಕಟೇಶನ್ ಅವರಿಗೆ ದೊಡ್ಡ ಅಭಿನಂದನೆಗಳು. ಅವರ ಧೈರ್ಯ, ದೃಢನಿಶ್ಚಯ ಮತ್ತು ತಂಡದ ಕೆಲಸವು ರಾಷ್ಟ್ರಕ್ಕೆ ಈ ಸಂತೋಷವನ್ನು ತಂದಿದೆ," ಎಂದು ಹೇಳಿದ್ದಾರೆ.

 

****



(Release ID: 1964568) Visitor Counter : 76