ಸಂಪುಟ
azadi ka amrit mahotsav

ತೆಲಂಗಾಣ ರಾಜ್ಯದ ಕೋರಿಕೆಯ ಮೇರೆಗೆ ಅಂತರರಾಜ್ಯ ನದಿ ನೀರಿನ ವಿವಾದಗಳ ಕಾಯ್ದೆ, 1956ರ (ಐಎಸ್ ಆರ್ ಡಬ್ಲ್ಯುಡಿ) ಅಡಿಯಲ್ಲಿ ಕೃಷ್ಣಾ ಜಲ ವಿವಾದಗಳ ನ್ಯಾಯಮಂಡಳಿ-2ರ ಉಲ್ಲೇಖದ ನಿಯಮಗಳಿಗೆ ಸಂಪುಟದ ಅನುಮೋದನೆ

Posted On: 04 OCT 2023 4:08PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ನಡುವೆ ತೀರ್ಪು ನೀಡಲು ಅಂತರರಾಜ್ಯ ನದಿ ನೀರಿನ ವಿವಾದಗಳ ಕಾಯ್ದೆಯ ಸೆಕ್ಷನ್ 5(1)ರ ಅಡಿಯಲ್ಲಿ ಅಸ್ತಿತ್ವದಲ್ಲಿರುವ ಕೃಷ್ಣಾ ಜಲ ವಿವಾದಗಳ ನ್ಯಾಯಮಂಡಳಿ-2ಕ್ಕೆ (ಕೆಡಬ್ಲ್ಯೂಡಿಟಿ-2) ಮತ್ತಷ್ಟು ಉಲ್ಲೇಖಿತ ನಿಯಮಗಳನ್ನು ನೀಡಲು ತನ್ನ ಅನುಮೋದನೆ ನೀಡಿದೆ. ಇದು ಅಂತರ ರಾಜ್ಯ ನದಿ ನೀರಿನ ವಿವಾದಗಳ ಕಾಯ್ದೆ, 1956ರ ಸೆಕ್ಷನ್ (3)ರ ಅಡಿಯಲ್ಲಿ ತೆಲಂಗಾಣ ಸರ್ಕಾರವು ತಮ್ಮ ದೂರಿನಲ್ಲಿ ಎತ್ತಿದ ವಿಷಯಗಳ ಬಗ್ಗೆ ಕಾನೂನು ಅಭಿಪ್ರಾಯಗಳನ್ನು ಸ್ವೀಕರಿಸುವುದರ ಬಗ್ಗೆ ಅವಲಂಬಿತವಾಗಿದೆ.

ಕೃಷ್ಣಾ ನದಿ ನೀರಿನ ಬಳಕೆ, ಹಂಚಿಕೆ ಅಥವಾ ನಿಯಂತ್ರಣದ ಬಗ್ಗೆ ಉಭಯ ರಾಜ್ಯಗಳ ನಡುವಿನ ವಿವಾದದ ಪರಿಹಾರವು ತೆಲಂಗಾಣ ಮತ್ತು ಆಂಧ್ರಪ್ರದೇಶ ಎರಡೂ ರಾಜ್ಯಗಳಲ್ಲಿ ಬೆಳವಣಿಗೆಯ ಹೊಸ ಮಾರ್ಗಗಳನ್ನು ತೆರೆಯಲಿದ್ದು, ಉಭಯ ರಾಜ್ಯಗಳ ಜನರಿಗೆ ಪ್ರಯೋಜನಕಾರಿಯಾಗಲಿದೆ, ಇದು ನಮ್ಮ ದೇಶವನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಕೃಷ್ಣಾ ಜಲ ವಿವಾದಗಳ ನ್ಯಾಯಮಂಡಳಿ-2ನ್ನು ಕೇಂದ್ರ ಸರ್ಕಾರವು 02/04/2004ರಂದು ಅಂತರರಾಜ್ಯ ನದಿ ನೀರಿನ ವಿವಾದಗಳ ಕಾಯ್ದೆ, 1956ರ ಸೆಕ್ಷನ್ 3ರ ಅಡಿಯಲ್ಲಿ ರಾಜ್ಯದ ಪಕ್ಷಗಳು ಮಾಡಿದ ಮನವಿಯ ಮೇರೆಗೆ ರಚಿಸಿತು. ಆನಂತರ, 02/06/2014ರಂದು, ತೆಲಂಗಾಣವು ಭಾರತ ಒಕ್ಕೂಟದ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದಿತು. ಆಂಧ್ರಪ್ರದೇಶ ಮರುಸಂಘಟನೆ ಕಾಯ್ದೆ, 2014ರ ಸೆಕ್ಷನ್ 89ರ ಪ್ರಕಾರ, ಆಂಧ್ರಪ್ರದೇಶ ಮರುಸಂಘಟನೆ ಕಾಯ್ದೆ, 2014ರ ಸದರಿ ವಿಭಾಗದ ಷರತ್ತು (ಎ) ಮತ್ತು (ಬಿ)ಅನ್ನು ಪರಿಹರಿಸಲು ಕೃಷ್ಣಾ ಜಲ ವಿವಾದಗಳ ನ್ಯಾಯಮಂಡಳಿ-2ರ ಅಧಿಕಾರಾವಧಿಯನ್ನು ವಿಸ್ತರಿಸಲಾಯಿತು.

ತರುವಾಯ, ತೆಲಂಗಾಣ ಸರ್ಕಾರವು 14/07/2014ರಂದು ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಗೆ ಕೃಷ್ಣಾ ನದಿ ನೀರಿನ ಬಳಕೆ, ವಿತರಣೆ ಅಥವಾ ನಿಯಂತ್ರಣದ ವಿವಾದವನ್ನು ಉಲ್ಲೇಖಿಸಿ ದೂರನ್ನು ನೀಡಿತು. ಈ ಬಗ್ಗೆ ತೆಲಂಗಾಣ ಸರ್ಕಾರವು 2015ರಲ್ಲಿ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿತು. 2018ರಲ್ಲಿ, ತೆಲಂಗಾಣ ಸರ್ಕಾರವು ಜಲಶಕ್ತಿ ಸಚಿವಾಲಯದ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಗೆ ದೂರನ್ನು ನೀಡಿ, ಅದು ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ನಡುವೆ ಮಾತ್ರ ಉಲ್ಲೇಖದ ವ್ಯಾಪ್ತಿಯನ್ನು ಸೀಮಿತಗೊಳಿಸುವ ಮೂಲಕ ಅಸ್ತಿತ್ವದಲ್ಲಿರುವ ಕೃಷ್ಣಾ ಜಲ ವಿವಾದಗಳ ನ್ಯಾಯಮಂಡಳಿ-2ನ್ನು ಉಲ್ಲೇಖಿಸುವಂತೆ ವಿನಂತಿಸಿತು. ನಂತರ 2020ರಲ್ಲಿ, ಗೌರವಾನ್ವಿತ ಸಚಿವರ (ಜಲಶಕ್ತಿ) ಅಡಿಯಲ್ಲಿ ನಡೆದ 2ನೇ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಯಿತು. 2ನೇ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿದಂತೆ, ತೆಲಂಗಾಣ ಸರ್ಕಾರವು 2021ರಲ್ಲಿ ಈ ರಿಟ್ ಅರ್ಜಿಯನ್ನು ಹಿಂತೆಗೆದುಕೊಂಡು, ಈ ವಿಷಯದಲ್ಲಿ ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಇಲಾಖೆಯಿಂದ ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾನೂನು ಅಭಿಪ್ರಾಯವನ್ನು ಕೋರಿತು.

*****



(Release ID: 1964198) Visitor Counter : 123