ಪ್ರಧಾನ ಮಂತ್ರಿಯವರ ಕಛೇರಿ

ಕಂಚಿನ ಪದಕ ಗೆದ್ದ ಭಾರತೀಯ ಬಾಕ್ಸರ್ ನಿಖತ್ ಝರೀನ್ ಗೆ ಪ್ರಧಾನಮಂತ್ರಿ ಅಭಿನಂದನೆ

Posted On: 01 OCT 2023 8:27PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹಾಂಗ್ ಝೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಬಾಕ್ಸರ್ ನಿಖತ್ ಝರೀನ್ ಅವರನ್ನು ಅಭಿನಂದಿಸಿದ್ದಾರೆ.

ಪ್ರಧಾನಮಂತ್ರಿಯವರು ಎಕ್ಸ್ ಖಾತೆಯಲ್ಲಿ ಹೀಗೆ ಹೇಳಿದ್ದಾರೆ;

"ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆಲ್ಲಲು ಕಾರಣವಾದ ಕೌಶಲ್ಯ ಮತ್ತು ದೃಢನಿಶ್ಚಯದ ಅದ್ಭುತ ಪ್ರದರ್ಶನಕ್ಕಾಗಿ ಅತ್ಯುತ್ತಮ @nikhat_zareen ಅವರಿಗೆ ಅಭಿನಂದನೆಗಳು. ಈ ಪದಕವು ಅವರ ಅಚಲ ಬದ್ಧತೆ ಮತ್ತು ಶಿಸ್ತಿಗೆ ಸಾಕ್ಷಿಯಾಗಿದೆ,’’ಎಂದಿದ್ದಾರೆ.

 

***



(Release ID: 1963673) Visitor Counter : 66