ಪ್ರಕಟಣಾ ದಿನಾಂಕ:
27 SEP 2023 4:34PM by PIB Bengaluru
ಹಾಂಗ್ ಝೋ ನಲ್ಲಿ ನಡೆದ ಏಷ್ಯನ್ ಗೇಮ್ಸ್ ನ 50 ಮೀಟರ್ ರೈಫಲ್ 3 ಪೊಸಿಷನ್ ನಲ್ಲಿ ಸಿಫ್ತ್ ಕೌರ್ ಸರ್ಮಾ, ಆಶಿ ಚೌಕ್ಸೆ ಮತ್ತು ಮಾನಿನಿ ಕೌಶಿಕ್ ಅವರನ್ನೊಳಗೊಂಡ ಮಹಿಳಾ ತಂಡ ರಜತ ಪದಕ ಗೆದ್ದಿದೆ. ಈ ಸಾಧನೆ ಮಾಡಿದ ಮಹಿಳಾ ತಂಡವನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.
ಈ ಕುರಿತು ಅವರು:
“ಏಷ್ಯನ್ ಗೇಮ್ಸ್ ನ 50 ಮೀಟರ್ ರೈಫಲ್ 3 ಪೊಸಿಷನ್ಸ್ ನಲ್ಲಿ ನಮ್ಮ ಬದ್ಧ ಮತ್ತು ಪ್ರತಿಭಾನ್ವಿತ ಮಹಿಳಾ ತಂಡ ಬೆಳ್ಳಿ ಪದಕ ಗೆದ್ದಿದೆ. ಅವರು ತಮ್ಮ ಅಪ್ರತಿಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಸಿಫ್ತ್ ಕೌರ್ ಸರ್ಮಾ, ಆಶಿ ಚೌಕ್ಸೆ ಮತ್ತು ಮಾನಿನಿ ಕೌಶಿಕ್ ಅವರುಗಳಿಗೆ ಅಭಿನಂದನೆಗಳು” ಎಂದು ಟ್ವೀಟ್ ಮಾಡಿದ್ದಾರೆ.
***