ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಏಷ್ಯನ್ ಗೇಮ್ಸ್‌ ನಲ್ಲಿ 10 ಮೀಟರ್ ಏರ್ ರೈಫಲ್‌ ಸ್ಪರ್ಧೆಯಲ್ಲಿ ಕಂಚು ಪದಕ ಗೆದ್ದ ಐಶ್ವರಿ ಪ್ರತಾಪ್ ತೋಮರ್ ಅವರನ್ನು ಶ್ಲಾಘಿಸಿದ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 25 SEP 2023 2:45PM by PIB Bengaluru

ಏಷ್ಯನ್ ಗೇಮ್ಸ್ 2022 ರಲ್ಲಿ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಐಶ್ವರಿ ಪ್ರತಾಪ್ ತೋಮರ್ ಅವರನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.

ಸದೃಢ ಶಕ್ತಿ ಮತ್ತು ಏಕಾಗ್ರತೆಗಳ ಮೂಲಕ ಐಶ್ವರಿ ಪ್ರತಾಪ್ ತೋಮರ್ ಅವರು ಅದ್ಭುತ ಕ್ರೀಡಾ ಸಾಧನೆಯನ್ನು ಪ್ರದರ್ಶಿಸಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ನಾಲ್ಕನೇ ಸ್ಥಾನ ಗಳಿಸಿದ ರುದ್ರಾಕ್ಷ ಪಾಟೀಲ್ ಅವರ ಅಮೋಘ ಸಾಧನೆಯನ್ನೂ ಕೂಡಾ ಪ್ರಧಾನಮಂತ್ರಿಯವರು ಶ್ಲಾಘಿಸಿದ್ದಾರೆ.

****

 

 


(ಪ್ರಕಟಣೆ ಐ.ಡಿ.: 1960518) ವಿಸಿಟರ್ ಕೌಂಟರ್ : 139