ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
azadi ka amrit mahotsav

ಒಂದು ದಿನಾಂಕ(ಅ.1), ಒಂದು ಗಂಟೆ ಒಟ್ಟಿಗೆ


2023 ರ ಅಕ್ಟೋಬರ್‌ 1 ರಂದು ಬೆಳಗ್ಗೆ 10 ಗಂಟೆಗೆ ಸ್ವಚ್ಛತೆಗಾಗಿ ನಾಗರಿಕರ ನೇತೃತ್ವದ 1 ಗಂಟೆಯ ಶ್ರಮದಾನಕ್ಕಾಗಿ ರಾಷ್ಟ್ರೀಯ ಕ್ರಮಕ್ಕೆ ಕರೆ

Posted On: 24 SEP 2023 1:30PM by PIB Bengaluru

ಒಂಬತ್ತು ವರ್ಷಗಳ ಹಿಂದೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2014 ರಲ್ಲಿ ಸ್ವಚ್ಛತೆಗೆ ಕರೆ ನೀಡಿದ್ದರು. ಎಲ್ಲಾ ವರ್ಗದ ನಾಗರಿಕರು ಸ್ವಚ್ಛ ಭಾರತದ ಮಾಲೀಕತ್ವವನ್ನು ತೆಗೆದುಕೊಳ್ಳಲು ಅಪಾರ ಉತ್ಸಾಹದಿಂದ ಪ್ರತಿಕ್ರಿಯಿಸಿದರು. ಇದರ ಪರಿಣಾಮವಾಗಿ, ಸ್ವಚ್ಚತೆಯು ರಾಷ್ಟ್ರೀಯ ನಡವಳಿಕೆಯಾಯಿತು ಮತ್ತು ಸ್ವಚ್ಛ ಭಾರತ ಅಭಿಯಾನವು ಮನೆಮಾತಾಯಿತು.

ಗಾಂಧಿ ಜಯಂತಿಯ ಮುನ್ನಾದಿನದಂದು ಪ್ರಧಾನಮಂತ್ರಿ ಅವರು ಸಹ ನಾಗರಿಕರಿಗೆ ವಿಶಿಷ್ಟ ಕ್ರಮಕ್ಕೆ ಕರೆ ನೀಡಿದ್ದಾರೆ. ಮನ್‌ ಕಿ ಬಾತ್‌ ನ 105ನೇ ಸಂಚಿಕೆಯಲ್ಲಿ ಪ್ರಧಾನಮಂತ್ರಿ ಅವರು, ಅಕ್ಟೋಬರ್‌ 1ರಂದು ಬೆಳಗ್ಗೆ 10 ಗಂಟೆಗೆ ಸ್ವಚ್ಛತೆಗಾಗಿ 1 ಗಂಟೆ ಶ್ರಮದಾನ ಮಾಡುವಂತೆ ಮನವಿ ಮಾಡಿದರು. ಸ್ವಚ್ಛತಾ ಹೀ ಸೇವಾ ಅಭಿಯಾನದ ಕುರಿತು ಮಾತನಾಡಿದ ಅವರು, ‘‘ಅಕ್ಟೋಬರ್‌ 1 ರಂದು ಅಂದರೆ ಭಾನುವಾರ ಬೆಳಗ್ಗೆ 10 ಗಂಟೆಗೆ ಸ್ವಚ್ಛತೆಯ ಬಗ್ಗೆ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಸ್ವಚ್ಛತೆಗೆ ಸಂಬಂಧಿಸಿದ ಈ ಅಭಿಯಾನದಲ್ಲಿನೀವೂ ಸಹ ಸಮಯ ತೆಗೆದುಕೊಂಡು ಸಹಾಯ ಮಾಡಬೇಕು. ನಿಮ್ಮ ಬೀದಿಯಲ್ಲಿಅಥವಾ ಉದ್ಯಾನವನ, ನದಿ, ಸರೋವರ ಅಥವಾ ಇನ್ನಾವುದೇ ಸಾರ್ವಜನಿಕ ಸ್ಥಳದಲ್ಲಿ ನೆರೆಹೊರೆಯಲ್ಲಿನೀವು ಈ ಸ್ವಚ್ಚತಾ ಅಭಿಯಾನಕ್ಕೆ ಸೇರಬಹುದು,’’ ಎಂದು ತಿಳಿಸಿದರು.


ಈ ಬೃಹತ್‌ ಸ್ವಚ್ಛತಾ ಅಭಿಯಾನವು ಮಾರುಕಟ್ಟೆ ಸ್ಥಳಗಳು, ರೈಲ್ವೆ ಹಳಿಗಳು, ಜಲಮೂಲಗಳು, ಪ್ರವಾಸಿ ಸ್ಥಳಗಳು, ಧಾರ್ಮಿಕ ಸ್ಥಳಗಳು ಮುಂತಾದ ಸಾರ್ವಜನಿಕ ಸ್ಥಳಗಳ ವಾಸ್ತವಿಕ ಶುಚಿಗೊಳಿಸುವ ಚಟುವಟಿಕೆಗಳಲ್ಲಿ ಸೇರಲು ಎಲ್ಲಾ ವರ್ಗದ ನಾಗರಿಕರಿಗೆ ಕರೆ ನೀಡುತ್ತದೆ. ಪ್ರತಿ ಪಟ್ಟಣ, ಗ್ರಾಮ ಪಂಚಾಯಿತಿ, ನಾಗರಿಕ ವಿಮಾನಯಾನ, ರೈಲ್ವೆ, ಮಾಹಿತಿ ಮತ್ತು ತಂತ್ರಜ್ಞಾನ ಮುಂತಾದ ಸರ್ಕಾರದ ಎಲ್ಲಾ ಕ್ಷೇತ್ರಗಳು, ಸಾರ್ವಜನಿಕ ಸಂಸ್ಥೆಗಳು ನಾಗರಿಕರ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯಕ್ರಮಗಳಿಗೆ ಅನುಕೂಲ ಮಾಡಿಕೊಡಲಿವೆ. ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜಿಸಲು ಆಸಕ್ತಿ ಹೊಂದಿರುವ ಎನ್‌ಜಿಒ / ಆರ್‌ ಡಬ್ಲ್ಯೂಎ / ಪ್ರೈವೇಟ್‌ ಸಂಸ್ಥೆ ಇತ್ಯಾದಿಗಳು ಯುಎಲ್‌ಬಿ / ಜಿಲ್ಲಾಡಳಿತಕ್ಕೆ ಪೋರ್ಟಲ್‌ನಲ್ಲಿಆನ್‌ಲೈನಲ್ಲಿಅರ್ಜಿ ಸಲ್ಲಿಸಬಹುದು.

ಸ್ವಚ್ಛತಾ ಹೀ ಸೇವಾ - ಸಿಟಿಜನ್ಸ್‌ ಪೋರ್ಟಲ್‌   https://swachhatahiseva.com/ .  ನಲ್ಲಿಸಾರ್ವಜನಿಕ ಮಾಹಿತಿಗಾಗಿ ಸ್ವಚ್ಛತಾ ಕಾರ್ಯಕ್ರಮಗಳು ಲಭ್ಯವಿರುತ್ತವೆ . ಸ್ವಚ್ಛತೆಯ ಸ್ಥಳದಲ್ಲಿ, ನಾಗರಿಕರು ಚಿತ್ರಗಳನ್ನು ಕ್ಲಿಕ್‌ ಮಾಡಬಹುದು ಮತ್ತು ಪೋರ್ಟಲ್‌ನಲ್ಲಿಅಪ್ಲೋಡ್‌ ಮಾಡಬಹುದು. ಈ ಪೋರ್ಟಲ್‌ ನಾಗರಿಕರು, ಪ್ರಭಾವಶಾಲಿಗಳನ್ನು ಆಂದೋಲನಕ್ಕೆ ಸೇರಲು ಆಹ್ವಾನಿಸುವ ವಿಭಾಗವನ್ನು ಸಹ ಆಯೋಜಿಸುತ್ತದೆ ಮತ್ತು ಸ್ವಚ್ಛತಾ ರಾಯಭಾರಿಗಳಾಗುವ ಮೂಲಕ ಜನರ ಆಂದೋಲನವನ್ನು ಮುನ್ನಡೆಸುತ್ತದೆ.

ಈ ಮೆಗಾ ಸ್ವಚ್ಛತಾ ಅಭಿಯಾನವು ಸೆಪ್ಟೆಂಬರ್‌ 15 ರಿಂದ ಅಕ್ಟೋಬರ್‌ 2 ರವರೆಗೆ ಆಚರಿಸಲಾಗುವ ಸ್ವಚ್ಛತಾ ಪಖ್ವಾಡಾ- ಸ್ವಚ್ಛತಾ ಹೀ ಸೇವಾ 2023 ರ ಭಾಗವಾಗಿದೆ. ನಾಗರಿಕರು ಹಳೆಯ ಕಟ್ಟಡಗಳ ಪುನಃಸ್ಥಾಪನೆ, ಜಲಮೂಲಗಳು, ಘಾಟ್‌ಗಳು, ಗೋಡೆಗಳಿಗೆ ಬಣ್ಣ ಬಳಿಯುವುದು, ನಾಟಕ, ರಂಗೋಲಿ ಸ್ಪರ್ಧೆಗಳನ್ನು ನಡೆಸುವುದು ಮುಂತಾದ ವಿವಿಧ ಸ್ವಚ್ಚತಾ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಪಖ್ವಾಡಾ ಪ್ರಾರಂಭವಾದಾಗಿನಿಂದ, ಇಲ್ಲಿಯವರೆಗೆ 5 ಕೋಟಿಗೂ ಹೆಚ್ಚು ನಾಗರಿಕರು ಪಖ್ವಾಡಾ ಪಾಕ್ಷಿಕಕ್ಕೆ ಸೇರಿದ್ದಾರೆ.

*****


(Release ID: 1960171) Visitor Counter : 216