ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
"ಭಾರತದ ಜಿ20 ನಾಯಕತ್ವದ ಅಡಿಯಲ್ಲಿ, ಡಿ.ಪಿ.ಐ. ವ್ಯಾಖ್ಯಾನ, ಚೌಕಟ್ಟು ಮತ್ತು ತತ್ವಗಳ ಮೇಲೆ ಐತಿಹಾಸಿಕ ಜಾಗತಿಕ ಒಮ್ಮತವನ್ನು ಸಾಧಿಸಲಾಗಿದೆ": ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್
"ವಿಶೇಷವಾಗಿ ಜಾಗತಿಕ ದಕ್ಷಿಣದ ದೇಶಗಳಿಗೆ, ಸೇರ್ಪಡೆಗೆ ಡಿ.ಪಿ.ಐ.ಗಳು ಪ್ರಬಲವಾದ ಕಾರ್ಯವಿಧಾನವಾಗಿದೆ": ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್
" ಭಾರತದ ಮುನ್ನಡೆಯನ್ನು ಹಿಂದುಳಿದಿರುವ ದೇಶಗಳು ತಾವು ಅನುಸರಿಸುವ ಮಾರ್ಗವಾಗಿ ನೋಡುತ್ತಿವೆ": ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್
Posted On:
05 SEP 2023 3:10PM by PIB Bengaluru
ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಇಂದು (05-09-2023) ಮಾಧ್ಯಮಗಳೊಂದಿಗೆ ಸಂವಾದ ಸಭೆ ನಡೆಸಿದರು. ಆಗಸ್ಟ್ ನಲ್ಲಿ ನಡೆದ ಡಿಜಿಟಲ್ ಆರ್ಥಿಕ ಮಂತ್ರಿಗಳ ಸಭೆಯ ಮಹತ್ವದ ಫಲಿತಾಂಶಗಳ ಕುರಿತು ಸಂವಾದ ಸಭೆಯಲ್ಲಿ ಚರ್ಚಿಸಲಾಯಿತು. ಭವಿಷ್ಯದ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು (ಡಿ.ಪಿ.ಐ.) ಪರಿಣಾಮಕಾರಿಯಾಗಿ ರೂಪಿಸುವುದು ಹೇಗೆ ಎಂಬ ಬಗ್ಗೆ ಐತಿಹಾಸಿಕ ಚರ್ಚೆಯಲ್ಲಿ, ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಡಿಜಿಟಲ್ ಆರ್ಥಿಕ ಸಚಿವರುಗಳು ಹೇಗೆ ತಲಮಟ್ಟದ ಒಮ್ಮತವನ್ನು ತಲುಪಿದರು ಎಂಬುದನ್ನು ಸಂವಾದ ಸಭೆಯಲ್ಲಿ ಸಚಿವರು ವಿವರಿಸಿದರು.
“ರಾಷ್ಟ್ರಗಳ ನಡುವಿನ ಒಮ್ಮತವು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ಕೌಶಲ್ಯಗಳ ಮೂರು ಪ್ರಮುಖ ಕ್ಷೇತ್ರಗಳಲ್ಲಿ ವಿಶಾಲವಾಗಿ ಕೇಂದ್ರೀಕೃತವಾಗಿದೆ” ಎಂದು ಕೇಂದ್ರ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಹೇಳಿದರು.
"ಡಿ.ಪಿ.ಐ.ಗಳು, ಅವುಗಳ ವ್ಯಾಖ್ಯಾನ, ಚೌಕಟ್ಟು ಮತ್ತು ತತ್ವಗಳು ಏನಾಗಿರಬೇಕು ಎಂದು ಮೊದಲ ಬಾರಿಗೆ, ಜಾಗತಿಕ ಒಮ್ಮತವನ್ನು ತಲುಪಿದವು. ಇದು ಜಿ20 ಸಂದರ್ಭದಲ್ಲಿ ವೇಗ ಪಡೆದುಕೊಂಡಿತು. ಭಾರತ, ಪ್ರಗತಿ ಮತ್ತು ಬೆಳವಣಿಗೆಗಾಗಿ ತಾಂತ್ರಿಕ ಸಾಧನಗಳನ್ನು ಬಳಸಿಕೊಳ್ಳುವ ಮತ್ತು ನಿಯೋಜಿಸಿದ ರಾಷ್ಟ್ರವಾಗಿದೆ. ಭಾರತವು ಈಗ ಒಂದು ವಿಶೇಷ ಪ್ರಕರಣವಾಗಿದೆ ಹಾಗೂ ಜಾಗತಿಕ ಅಧ್ಯಯನ ವಿಷಯಯಾಗಿದೆ. ಮುಕ್ತ ಮೂಲ ಡಿಜಿಟಲ್ ಮೂಲಸೌಕರ್ಯ ಕ್ಷೇತ್ರದಲ್ಲಿ ಭಾರತವು ಹೊಂದಿರುವ ಅದೇ ಪರಿಣಾಮವನ್ನು ರಚಿಸಲು ಮತ್ತು ಬಳಸಿಕೊಳ್ಳಲು ಇತರೇ ದೇಶಗಳು ಬಯಸುತ್ತಿವೆ. ಹೆಚ್ಚು ಹಿಂದುಳಿದಿರುವ ದೇಶಗಳು, ಡಿ.ಪಿ.ಐ.ಗಳಲ್ಲಿ ಭಾರತದ ಮುನ್ನಡೆಯನ್ನು ತಾವೂ ಕೂಡಾ ಅನುಸರಿಸಲು ಒಂದು ಮಾರ್ಗವಾಗಿದೆ ಎಂಬ ಆಶಯದಿಂದ ನೋಡುತ್ತಿವೆ. ಈ ಜಿ20 ಮಾತುಕತೆಗಳ ಮೂಲಕ, ವಿಶೇಷವಾಗಿ ಜಾಗತಿಕ ದಕ್ಷಿಣದ ದೇಶಗಳಿಗೆ, ಸೇರ್ಪಡೆಗೆ ಡಿ.ಪಿ.ಐ.ಗಳು ಪ್ರಬಲವಾದ ಕಾರ್ಯವಿಧಾನವಾಗಿದೆ” ಕೇಂದ್ರ ಸಚಿವರು ಹೇಳಿದರು.
ಅರ್ಮೇನಿಯಾ, ಸಿಯೆರಾ ಲಿಯೋನ್, ಸುರಿನಾಮ್, ಆಂಟಿಗುವಾ, ಬಾರ್ಬಡೋಸ್, ಟ್ರಿನಿಡಾಡ್ ಮತ್ತು ಟೊಬಾಗೊ, ಪಪುವಾ ನ್ಯೂಗಿನಿಯಾ ಮತ್ತು ಮಾರಿಷಸ್ ನಂತಹ ದೇಶಗಳೊಂದಿಗೆ ಭಾರತವು ಎಂಟು ತಿಳುವಳಿಕೆ ಒಪ್ಪಂದಗಳನ್ನು (ಎಂ.ಒ.ಯು.) ಮಾಡಿಕೊಂಡಿದೆ. ಅವರಿಗೆ ಇಂಡಿಯಾ ಸ್ಟಾಕ್ ಮತ್ತು ಡಿ.ಪಿ.ಐ. ಅನ್ನು ಯಾವುದೇ ವೆಚ್ಚವಿಲ್ಲದೆ - ಮೂಲ ಪ್ರವೇಶ ಅವಕಾಶದೊಂದಿಗೆ, ಮತ್ತು ಉಚಿತವಾಗಿ ನೀಡುತ್ತದೆ. ಈ ರಾಷ್ಟ್ರಗಳು ತಮ್ಮ ಅನನ್ಯ ನಾವೀನ್ಯತೆ ಪರಿಸರ ವ್ಯವಸ್ಥೆಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು, ಈ ಸಂಪನ್ಮೂಲಗಳನ್ನು ತಮ್ಮ ಗಡಿಯೊಳಗೆ ಅಳವಡಿಸಿಕೊಳ್ಳಲು ಮತ್ತು ಬಳಸಿಕೊಳ್ಳಲು ಮುಕ್ತ ಅವಕಾಶವನ್ನು ಹೊಂದಿವೆ.
ಡಿ.ಪಿ.ಐ.ಗಳ ಹೊರತಾಗಿ, ರಾಷ್ಟ್ರಗಳು ಸೈಬರ್ ಭದ್ರತೆಗೆ ಹೇಗೆ ಆದ್ಯತೆ ನೀಡಿವೆ ಎಂಬುದರ ಕುರಿತು ಹಾಗೂ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗೆ ಅದರ ಪ್ರಾಮುಖ್ಯತೆಯನ್ನು ಕೇಂದ್ರ ಸಚಿವರು ವಿವರಿಸಿದರು. “ಸೈಬರ್ ಭದ್ರತೆಯ ಕುರಿತು, ಹಾಗೂ ವ್ಯವಹಾರಗಳಿಗೆ ರಕ್ಷಣೆ ನೀಡುವುದು ಏಕೆ ಮುಖ್ಯ ಎಂಬುದರ ಕುರಿತು ಜಿ20 ಡಿಜಿಟಲ್ ಆರ್ಥಿಕ ಸಚಿಚರುಗಳು ವ್ಯಾಪಕವಾದ ಚರ್ಚೆಗಳನ್ನು ನಡೆಸಿದ್ದಾರೆ. ಡಿಜಿಟಲ್ ಆರ್ಥಿಕತೆಯು ಆರ್ಥಿಕ ಪ್ರಗತಿ ಮತ್ತು ಜಾಗತಿಕ ಆರ್ಥಿಕತೆಯ ಅತಿ ದೊಡ್ಡ ಅಂಶವಾಗುತ್ತಿರುವ ಕಾರಣ ಸೈಬರ್ ಭದ್ರತೆಯು ಪ್ರಪಂಚದ ಎಲ್ಲಾ ದೇಶಗಳಿಗೆ ಒಂದು ಪ್ರಮುಖ ವಿಷಯವಾಗಿದೆ. ” ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಹೇಳಿದರು
ಈ ಸಭೆಯ ಒಮ್ಮತದ ಮೂರನೇ ಅಂಶವೆಂದರೆ, ಡಿಜಿಟಲ್ ಕೌಶಲ್ಯವಾಗಿದೆ. “ಕೋವಿಡ್ ನಂತರದ ಡಿಜಿಟಲ್ ಜಗತ್ತಿನಲ್ಲಿ, ಯುವಕರಲ್ಲಿ ಡಿಜಿಟಲ್ ಕೌಶಲ್ಯಗಳನ್ನು ಹೆಚ್ಚು ಹೆಚ್ಚು ಕಲಿಸಲಾಗುತ್ತದೆ, ಪ್ರೋತ್ಸಾಹಿಸಲಾಗುತ್ತಿದೆ ಮತ್ತು ಪೋಷಿಸಲಾಗುತ್ತಿದೆ ಎಂದು ಎಲ್ಲಾ ರಾಷ್ಟ್ರಗಳು ಖಚಿತಪಡಿಸಿಕೊಳ್ಳುವುದು ಇಂದಿನ ಕಾಲಘಟ್ಟದಲ್ಲಿ ಅವಶ್ಯಕವಾಗಿದೆ” ಎಂದು ಕೇಂದ್ರ ಸಚಿವರು ಹೇಳಿದರು.
“ಕೋವಿಡ್ ನಂತರದ ಈ ಡಿಜಿಟಲ್ ಜಗತ್ತಿನಲ್ಲಿ, ಡಿಜಿಟಲ್ ಕೌಶಲ್ಯಗಳು ಹೆಚ್ಚು ಅಗತ್ಯವಿದೆ. ಭಾರತದ ನವ ಪ್ರತಿಭೆಗಳು ನಮ್ಮ ಯುವಜನತೆಗೆ ಡಿಜಿಟಲ್ ಕೌಶಲ್ಯಗಳನ್ನು ಸೃಷ್ಟಿಸುವತ್ತ ಗಮನಹರಿಸಿದ್ದಾರೆ. ಇದು ಈ ಚರ್ಚೆಯಲ್ಲಿ ಪ್ರತಿಧ್ವನಿಸಿದ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಮುಂಬರುವ ತಂತ್ರಜ್ಞಾನ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಡಿಜಿಟಲ್-ಸಿದ್ಧ, ಭವಿಷ್ಯ-ಸಿದ್ಧ ಕೌಶಲ್ಯ-ಸಿದ್ದ ಪ್ರತಿಭೆಗಳನ್ನು ರಚಿಸಲು ಅನೇಕ ದೇಶಗಳು ಪರಸ್ಪರ ಪೈಪೋಟಿ ನಡೆಸುತ್ತಿವೆ ಹಾಗೂ ಭಾರತದೊಂದಿಗೆ ಪಾಲುದಾರಿಕೆಯಲ್ಲಿ ಹೆಚ್ಚು ಆಸಕ್ತಿ ಹೊಂದಿವೆ” ಎಂದು ಕೇಂದ್ರ ಸಚಿವ ಶ್ರೀ ರಾಜೀವ್ ಚಂದ್ರಶೇಖರ್ ಅವರು ಹೇಳಿದರು.
***
(Release ID: 1954931)
Visitor Counter : 185
Read this release in:
Punjabi
,
Hindi
,
Marathi
,
Gujarati
,
Urdu
,
English
,
Bengali
,
Assamese
,
Manipuri
,
Odia
,
Tamil
,
Telugu
,
Malayalam