ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

​​​​​​​ಪ್ರಧಾನ ಮಂತ್ರಿಯವರನ್ನು ಭೇಟಿಯಾದ ನ್ವಿಡಿಯಾ ಸಿಇಒ ಶ್ರೀ ಜೆನ್ಸನ್ ಹುವಾಂಗ್

Posted On: 04 SEP 2023 8:20PM by PIB Bengaluru

ನ್ವಿಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಶ್ರೀ ಜೆನ್ಸನ್ ಹುವಾಂಗ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ಈ ಬಗ್ಗೆ ಪ್ರಧಾನಮಂತ್ರಿಯವರು X ನಲ್ಲಿ ಪೋಸ್ಟ್ ಮಾಡಿದ್ದು ಅದರಲ್ಲಿ :

"@nvidia ಸಿಇಒ ಜೆನ್ಸನ್ ಹುವಾಂಗ್ ಅವರೊಂದಿಗೆ ನಡೆಸಿದ ಭೇಟಿ, ಸಭೆ  ಅತ್ಯುತ್ತಮವಾಗಿದೆ. ಕೃತಕ ಬುದ್ಧಿಮತ್ತೆ (ಎಐ)  ಜಗತ್ತಿನಲ್ಲಿ ಭಾರತದ ಶ್ರೀಮಂತ ಸಾಮರ್ಥ್ಯದ ಬಗ್ಗೆ ನಾವು ಸುದೀರ್ಘವಾಗಿ ಮಾತನಾಡಿದ್ದೇವೆ. ಶ್ರೀ ಜೆನ್ಸನ್ ಹುವಾಂಗ್ ಅವರು ಈ ಕ್ಷೇತ್ರದಲ್ಲಿ ಭಾರತ ಸಾಧಿಸಿದ ಧಾಪುಗಾಲಿನ ಪ್ರಗತಿಯನ್ನು ಶ್ಲಾಘಿಸಿದರು ಮತ್ತು ಭಾರತದ ಪ್ರತಿಭಾವಂತ ಯುವಕರ ಬಗ್ಗೆ ಅಷ್ಟೇ ಉತ್ಸಾಹಭರಿತರಾಗಿದ್ದರು”.

ಎಂದು ಹೇಳಿದ್ದಾರೆ.

***


(Release ID: 1954853) Visitor Counter : 117