ಪ್ರಧಾನ ಮಂತ್ರಿಯವರ ಕಛೇರಿ

ಕಳೆದ 9 ವರ್ಷಗಳಲ್ಲಿ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯವು 54 ಪಟ್ಟು ಹೆಚ್ಚಳ; ಇಂಗಾಲ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ತರುವ ಕಾರ್ಯಕ್ರಮದಲ್ಲಿ ಆಗಿರುವ ಪ್ರಗತಿಗೆ ಪ್ರಧಾನಿ ಶ್ಲಾಘನೆ

Posted On: 29 AUG 2023 8:41PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂಗಾಲ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ತರುವ ಕಾರ್ಯಕ್ರಮದಲ್ಲಿ ಆಗಿರುವ ಪ್ರಗತಿಯನ್ನು ಶ್ಲಾಘಿಸಿದ್ದಾರೆ.

ಕಳೆದ 9 ವರ್ಷಗಳಲ್ಲಿ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯವು 54 ಪಟ್ಟು ಹೆಚ್ಚಾಗಿದೆ ಎಂದು ರೈಲ್ವೇ ಇಲಾಖೆ ಪ್ರಕಟಿಸಿದೆ. 2014 ಮಾರ್ಚ್ ವರೆಗೆ ಸೌರ ವಿದ್ಯುತ್ ಉತ್ಪಾದನಾ ಸಾಮರ್ಥ್ಯ 3.68 ಮೆಗಾವ್ಯಾಟ್ ಆಗಿದ್ದರೆ, 2014-23ರ ಅವಧಿಯಲ್ಲಿ 200.31 ಮೆಗಾವ್ಯಾಟ್ ಉತ್ಪಾದನೆ ಮಾಡಲಾಗಿದೆ ಎಂದು ಅದು ಮಾಹಿತಿ ನೀಡಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ:

"ಹಸಿರು ಭವಿಷ್ಯ ಹೊಂದುವ ನಮ್ಮ ಬದ್ಧತೆಯಲ್ಲಿ ಇದು ಶ್ಲಾಘನೀಯ ಪ್ರಗತಿ ತೋರಿಸುತ್ತಿದೆ. ಕೇವಲ 9 ವರ್ಷಗಳಲ್ಲಿ, ನಾವು ನಮ್ಮ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿದ್ದೇವೆ. #MissionNetZero ಇಂಗಾಲ ಹೊರಸೂಸುವಿಕೆ ನಿಯಂತ್ರಣ ಕಾರ್ಯಕ್ರಮದ ಕಡೆಗೆ ನಾವು ಗಮನಾರ್ಹ ದಾಪುಗಾಲು ಹಾಕಿದ್ದೇವೆ. ನಾವು ಈ ಪ್ರಯಾಣವನ್ನು ಮುಂದುವರಿಸೋಣ, ಭಾರತಕ್ಕೆ ಉಜ್ವಲ ಮತ್ತು ಸುಸ್ಥಿರ ಭವಿಷ್ಯವನ್ನುನ್ನು ಖಚಿತಪಡಿಸಿಕೊಳ್ಳೋಣ" ಎಂದಿದ್ದಾರೆ.

***



(Release ID: 1953476) Visitor Counter : 109