ಪ್ರಧಾನ ಮಂತ್ರಿಯವರ ಕಛೇರಿ
ಅಡುಗೆ ಅನಿಲದ ಬೆಲೆ ಇಳಿಕೆ ನಮ್ಮ ಸಹೋದರಿಯರ ಜೀವನವನ್ನು ಸುಗಮಗೊಳಿಸುತ್ತದೆ: ಪ್ರಧಾನಿ
ಎಲ್ಲಾ ಎಲ್‌ಪಿಜಿ ಗ್ರಾಹಕರಿಗೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 200 ರೂಪಾಯಿಗಳಷ್ಟು ಕಡಿಮೆ ಮಾಡುವ ದಿಟ್ಟ ಹೆಜ್ಜೆ ಇಟ್ಟ ಪ್ರಧಾನಿ
Posted On:
29 AUG 2023 6:19PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಎಲ್ಲಾ ಎಲ್‌ಪಿಜಿ ಗ್ರಾಹಕರಿಗೆ ಅಂದರೆ 33 ಕೋಟಿ ಸಂಪರ್ಕಗಳಿಗೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 200 ರೂಪಾಯಿ ಕಡಿಮೆ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
ʻರಕ್ಷಾ ಬಂಧನʼ ಹಬ್ಬವು ನಮ್ಮ ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸುವ ದಿನವಾಗಿದೆ ಎಂದು ಶ್ರೀ ಮೋದಿ ಹೇಳಿದ್ದಾರೆ.
ʻಪಿಎಂ ಉಜ್ವಲʼ ಯೋಜನೆ ಗ್ರಾಹಕರು ತಮ್ಮ ಖಾತೆಗಳಲ್ಲಿ ಸಿಲಿಂಡರ್‌ಗೆ 200 ರೂ.ಗಳ ಸಬ್ಸಿಡಿ ಪಡೆಯುವುದನ್ನು ಮುಂದುವರಿಸುತ್ತಾರೆ.
ಸರ್ಕಾರವು 75 ಲಕ್ಷ ಹೆಚ್ಚುವರಿ ʻಪಿಎಂ ಉಜ್ವಲʼ ಸಂಪರ್ಕಗಳನ್ನು ಅನುಮೋದಿಸಿದೆ, ಇದರೊಂದಿಗೆ ಒಟ್ಟು ʻಪಿಎಂಯುವೈʼ ಫಲಾನುಭವಿಗಳ ಸಂಖ್ಯೆ 10.35 ಕೋಟಿಗೆ ತಲುಪಲಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರ ʻಎಕ್ಸ್ʼ ಥ್ರೆಡ್‌ಗಳಿಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿಯವರು, ʻಎಕ್ಸ್ʼನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ:
"ರಕ್ಷಾ ಬಂಧನ ಹಬ್ಬವು ನಿಮ್ಮ ಕುಟುಂಬದಲ್ಲಿ ಸಂತೋಷವನ್ನು ಹೆಚ್ಚಿಸುವ ದಿನವಾಗಿದೆ. ಅನಿಲ ಬೆಲೆಗಳ ಕಡಿತವು ಕುಟುಂಬದಲ್ಲಿನ ನನ್ನ ಸಹೋದರಿಯರ ಆರಾಮವನ್ನು ಹೆಚ್ಚಿಸುತ್ತದೆ ಮತ್ತು ಅವರ ಜೀವನವನ್ನು ಸುಲಭಗೊಳಿಸುತ್ತದೆ. ನನ್ನ ಪ್ರತಿಯೊಬ್ಬ ಸಹೋದರಿ ಸಂತೋಷ, ಆರೋಗ್ಯ, ಸಂತೋಷವಾಗಿರಲಿ, ಈಶ್ವರನು ಸಹ ಇದನ್ನೇ ಬಯಸುತ್ತಾನೆ.”
ಹೆಚ್ಚಿನ ವಿವರಗಳನ್ನು ಇಲ್ಲಿ ನೋಡಬಹುದು:
https://pib.gov.in/PressReleasePage.aspx?PRID=1953241
****
(Release ID: 1953447)
Visitor Counter : 104
Read this release in:
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam