ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಎಲ್ಲಾ ಎಲ್‌ಪಿಜಿ ಗ್ರಾಹಕರಿಗೆ (33 ಕೋಟಿ ಸಂಪರ್ಕಗಳು) ಎಲ್‌ಪಿಜಿ ಸಿಲಿಂಡರ್ ಬೆಲೆ 200 ರೂ. ಇಳಿಸುವ ಮೂಲಕ ದಿಟ್ಟ ಕ್ರಮ ಕೈಗೊಂಡ ಪ್ರಧಾನ ಮಂತ್ರಿ


ಪ್ರಧಾನಮಂತ್ರಿ ಉಜ್ವಲ ಯೋಜನೆ ಗ್ರಾಹಕರಿಗೆ 200 ರೂ. ಸಿಲಿಂಡರ್ ಸಬ್ಸಿಡಿ ಮುಂದುವರಿಯಲಿದೆ
 
ಸರ್ಕಾರವು 75 ಲಕ್ಷ ಹೆಚ್ಚುವರಿ ಉಜ್ವಲ ಸಂಪರ್ಕಗಳನ್ನು ಅನುಮೋದಿಸಿದೆ, ಇದರೊಂದಿಗೆ  ಒಟ್ಟು ಪಿಎಂಯುವೈ ಫಲಾನುಭವಿಗಳ ಸಂಖ್ಯೆ 10.35 ಕೋಟಿಗೆ ಏರಿಕೆ

Posted On: 29 AUG 2023 5:10PM by PIB Bengaluru

ರಾಷ್ಟ್ರಾದ್ಯಂತ ಎಲ್ಪಿಜಿ ಗ್ರಾಹಕರಿಗೆ ಕೊಂಚ ನೆಮ್ಮದಿ ಮೂಡಿಸುವ ಕ್ರಮವಾಗಿ, ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರ,ಅಡುಗೆ ಅನಿಲ ಬೆಲೆಯಲ್ಲಿ ಗಣನೀಯ ಇಳಿಕೆ  ಘೋಷಿಸಿದೆ. 30.08.2023ರಿಂದ ಅನ್ವಯವಾಗುವಂತೆ, ದೇಶಾದ್ಯಂತ ಎಲ್ಲಾ ಮಾರುಕಟ್ಟೆಗಳಲ್ಲಿ 14.2 ಕೆಜಿ ಎಲ್ಪಿಜಿ ಸಿಲಿಂಡರ್‌ ಬೆಲೆಯನ್ನು 200 ರೂ. ಕಡಿಮೆಗೊಳಿಸಲಾಗುತ್ತದೆ. ಉದಾಹರಣೆಗೆ ದೆಹಲಿಯಲ್ಲಿ ಈ ನಿರ್ಧಾರವು 14.2 ಕೆಜಿ ಪ್ರತಿ ಸಿಲಿಂಡರ್‌ ಬೆಲೆಯನ್ನು ಸಿಲಿಂಡರ್‌ಗೆ ಹಾಲಿ ಇರುವ ರೂ 1,103ರಿಂದ 903 ರೂ.ಗೆ ಇಳಿಕೆ ಆಗುತ್ತದೆ. ರಕ್ಷಾ ಬಂಧನ ಸಂದರ್ಭದಲ್ಲಿ ನನ್ನ ಕೋಟ್ಯಂತರ ಸಹೋದರಿಯರಿಗೆ ಇದು ಕೊಡುಗೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಮ್ಮ ಸರ್ಕಾರವು ಯಾವಾಗಲೂ ಜನರ ಜೀವನದ ಗುಣಮಟ್ಟ ಸುಧಾರಿಸಲು ಮತ್ತು ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತೆ ಎಲ್ಲವನ್ನೂ ಮಾಡುತ್ತದೆ ಎಂದರು.
 
 
ಈ ಕಡಿತವು ಪಿಎಂಯುವೈ ಯೋಜನೆಯ ಕುಟುಂಬಗಳಿಗೆ ಪ್ರತಿ ಸಿಲಿಂಡರ್‌ಗೆ 200 ರೂ. ಹಾಲಿ ಇರುವ ಸಬ್ಸಿಡಿಗೆ ಹೆಚ್ಚುವರಿಯಾಗಿದೆ, ಇದು ಮುಂದುವರಿಯಲಿದೆ. ಆದ್ದರಿಂದ ಪಿಎಂಯುವೈ ಕುಟುಂಬಗಳಿಗೆ, ಈ ಕಡಿತದ ನಂತರ ದೆಹಲಿಯಲ್ಲಿ ಪರಿಣಾಮಕಾರಿ ಬೆಲೆ ಪ್ರತಿ ಸಿಲಿಂಡರ್‌ಗೆ 703 ರೂ. ಆಗಲಿದೆ.
9.6 ಕೋಟಿ ಪಿಎಂಯುವೈ ಫಲಾನುಭವಿ ಕುಟುಂಬಗಳು ಸೇರಿದಂತೆ ದೇಶದಲ್ಲಿ 31 ಕೋಟಿಗಿಂತ ಹೆಚ್ಚಿನ ದೇಶೀಯ ಎಲ್ಪಿಜಿ  ಗ್ರಾಹಕರಿದ್ದಾರೆ. ಈ ಕಡಿತವು ದೇಶದ ಎಲ್ಲಾ ಎಸ್ಪಿಜಿ  ಗ್ರಾಹಕರಿಗೆ ಸಹಾಯ ಮಾಡುತ್ತದೆ ಎಂಬುದನ್ನು ಗಮನಿಸಬಹುದು. ಬಾಕಿ ಉಳಿದಿರುವ ಪಿಎಂಯುವೈ ಅರ್ಜಿಗಳನ್ನು ತೆರವುಗೊಳಿಸಲು ಮತ್ತು ಎಲ್ಲಾ ಅರ್ಹ ಕುಟುಂಬಗಳಿಗೆ ಠೇವಣಿಮುಕ್ತ ಎಲ್ಪಿಜಿ ಸಂಪರ್ಕ ಒದಗಿಸಲು, ಎಲ್ಪಿಜಿ ಸಂಪರ್ಕ ಹೊಂದಿರದ ಬಡ ಕುಟುಂಬಗಳ 75 ಲಕ್ಷ ಮಹಿಳೆಯರಿಗೆ ಸರ್ಕಾರ ಶೀಘ್ರದಲ್ಲೇ ಪಿಎಂಯುವೈ ಸಂಪರ್ಕಗಳನ್ನು ವಿತರಿಸಲು ಪ್ರಾರಂಭಿಸುತ್ತದೆ. ಇದು ಪಿಎಂಯುವೈ ಯೋಜನೆ ಅಡಿ, ಒಟ್ಟು ಫಲಾನುಭವಿಗಳ ಸಂಖ್ಯೆಯನ್ನು 9.6 ಕೋಟಿಯಿಂದ 10.35 ಕೋಟಿಗೆ ಹೆಚ್ಚಿಸಲಿದೆ.
ದೇಶದ ನಾಗರಿಕರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು ಮತ್ತು ಕುಟುಂಬಗಳ ಕಲ್ಯಾಣ  ಉತ್ತೇಜಿಸಲು ಸರ್ಕಾರದ ನಿರಂತರ ಪ್ರಯತ್ನಗಳ ಭಾಗವಾಗಿ ಈ ನಿರ್ಧಾರಗಳು ಬಂದಿವೆ. ಅಡುಗೆ ಅನಿಲದ ಬೆಲೆ ಕಡಿತವು ತನ್ನ ನಾಗರಿಕರ ಯೋಗಕ್ಷೇಮಕ್ಕೆ ಆದ್ಯತೆ ನೀಡಲು ಮತ್ತು ಸಮಂಜಸ ದರದಲ್ಲಿ ಅಗತ್ಯ ವಸ್ತುಗಳ ಪ್ರವೇಶ ಖಚಿತಪಡಿಸಿಕೊಳ್ಳುವ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಈ ನಿರ್ಧಾರಕ್ಕೆ ಸಂತಸ ವ್ಯಕ್ತಪಡಿಸಿರುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಶ್ರೀ ಸಚಿವ ಹರ್ದೀಪ್ ಸಿಂಗ್ ಪುರಿ, "ಕುಟುಂಬಗಳು ತಮ್ಮ ಬಜೆಟ್ ನಿರ್ವಹಿಸುವಲ್ಲಿ ಎದುರಿಸುತ್ತಿರುವ ಸವಾಲುಗಳನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಅಡುಗೆ ಅನಿಲದ ಬೆಲೆ ಇಳಿಕೆಯು ಕುಟುಂಬಗಳು ಮತ್ತು ವ್ಯಕ್ತಿಗಳಿಗೆ ನೇರ ಪರಿಹಾರ ಒದಗಿಸುವ ಗುರಿ ಹೊಂದಿದೆ. ಕೈಗೆಟಕುವ ಬೆಲೆಗೆ ಅಗತ್ಯ ವಸ್ತುಗಳು ಸಿಗುವುದನ್ನು ಖಾತ್ರಿಪಡಿಸುವ ಸರ್ಕಾರದ ದೊಡ್ಡ ಗುರಿಯನ್ನು ಬೆಂಬಲಿಸುತ್ತದೆ" ಎಂದರು.
ಅಡುಗೆ ಅನಿಲದ ಬೆಲೆ ಕಡಿತವು ಸಮಾಜದ ವಿಶಾಲ ವ್ಯಾಪ್ತಿಯ ಜೀವನ ವೆಚ್ಚದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ನಿರೀಕ್ಷಿಸಲಾಗಿದೆ. ಸರ್ಕಾರದ ಪೂರ್ವಭಾವಿ ಕ್ರಮವು ಕುಟುಂಬಗಳಿಗೆ  ಗಮನಾರ್ಹ ವೆಚ್ಚ ಉಳಿಸಲು ಯೋಜಿಸಲಾಗಿದೆ, ಇದು ನಾಗರಿಕರ ಆದಾಯಕ್ಕೆ ಗಮನಾರ್ಹ ಕೊಡುಗೆ ನೀಡುತ್ತದೆ.
ಜನತೆಯ ಆರ್ಥಿಕ ಹೊರೆ ಇಳಿಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈ ಅಡುಗೆ ಅನಿಲ ಬೆಲೆ ಇಳಿಕೆಯು ಜನರ ಅಗತ್ಯಗಳಿಗೆ ಸರ್ಕಾರ ಸ್ಪಂದಿಸುತ್ತಿ, ಅವರ ಕಲ್ಯಾಣಕ್ಕಾಗಿ ಸರ್ಕಾರ ಹೊಂದಿರುವ ಅಚಲವಾದ ಸಮರ್ಪಣಾ ಮನೋಭಾವಕ್ಕೆ ಸಾಕ್ಷಿಯಾಗಿದೆ.

 


(Release ID: 1953298) Visitor Counter : 247