ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

 ಖ್ಯಾತ ಗ್ರೀಕ್ ಸಂಶೋಧಕ ಮತ್ತು ಸಂಗೀತಗಾರ ಶ್ರೀ ಕಾನ್ಸ್ಟಾಂಟಿನೋಸ್ ಕಲೈಟ್ಜಿಸ್ ಅವರನ್ನು ಭೇಟಿಯಾದ ಪ್ರಧಾನಮಂತ್ರಿ

Posted On: 25 AUG 2023 10:41PM by PIB Bengaluru

ಭಾರತದ ಸ್ನೇಹಿತ, ಗ್ರೀಕ್ ಸಂಶೋಧಕ, ಸಂಗೀತಗಾರ ಶ್ರೀ ಕಾನ್ಸ್ಟಾಂಟಿನೋಸ್ ಕಲೈಟ್ಜಿಸ್ ಅವರನ್ನು ಆಗಸ್ಟ್ 25, 2023 ರಂದು ಅಥೆನ್ಸ್‌ನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು  ಭೇಟಿಯಾದರು. 

ಶ್ರೀ ಕಾನ್ಸ್ಟಾಂಟಿನೋಸ್ ಕಲೈಟ್ಜಿಸ್ ಅವರ ಸಾಧನೆಗಳನ್ನು ,  ಭಾರತದ ಮೇಲಿನ ಪ್ರೀತಿ ಮತ್ತು ಭಾರತೀಯ ಸಂಗೀತ ಮತ್ತು ನೃತ್ಯದ ಬಗ್ಗೆ ಅವರ ಉತ್ಸಾಹಗಳನ್ನು  ಪ್ರಧಾನಮಂತ್ರಿ ಅವರು ಶ್ಲಾಘಿಸಿದರು.  2022 ರ ನವೆಂಬರ್ 27 ರಂದು ಪ್ರಸಾರವಾದ "ಮನ್ ಕಿ ಬಾತ್" ನ 95 ನೇ ಆವೃತ್ತಿಯಲ್ಲಿ ಪ್ರಧಾನಮಂತ್ರಿಯವರು ಅವರ ಬಗ್ಗೆ ಪ್ರಸ್ತಾಪಿಸಿದ್ದರು.

ಗ್ರೀಸ್‌ ನಲ್ಲಿ ಭಾರತೀಯ ಸಂಸ್ಕೃತಿಯನ್ನು ಮತ್ತಷ್ಟು ಜನಪ್ರಿಯಗೊಳಿಸುವ ಸಾಧ್ಯತೆಗಳ ಕುರಿತು ಅವರು ಪ್ರಧಾನಿಮಂತ್ರಿ ಅವರ ಜೊತೆಗೆ ಚರ್ಚಿಸಿದರು.
 

****


(Release ID: 1952560) Visitor Counter : 129