ಪ್ರಕಟಣಾ ದಿನಾಂಕ:
23 AUG 2023 7:25PM by PIB Bengaluru
ಚಂದ್ರಯಾನ-3ರ ಯಶಸ್ಸು 140 ಕೋಟಿ ಭಾರತೀಯರ ಆಕಾಂಕ್ಷೆಗಳು ಮತ್ತು ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಬಣ್ಣಿಸಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ "ಎಕ್ಸ್" ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ಅನ್ನು ಹಂಚಿಕೊಂಡಿರುವ ಪ್ರಧಾನ ಮಂತ್ರಿಗಳು, "ಚಂದ್ರಯಾನ -3ರ ಗೆಲುವು 140 ಕೋಟಿ ಭಾರತೀಯರ ಆಕಾಂಕ್ಷೆಗಳು ಹಾಗೂ ಸಾಮರ್ಥ್ಯಗಳನ್ನು ಪ್ರತಿಬಿಂಬಿಸುತ್ತದೆ.
ಆ ಮೂಲಕ ಹೊಸ ಎತ್ತರಕ್ಕೆ ಹಾಗೂ ಅದರಾಚೆಗಿನ ಸಾಧನೆಗೂ ನಾಂದಿ ಹಾಡಿದೆ. ದಿಗಂತಗಳಿಗೆ ಮತ್ತು ಅದರಾಚೆಗೆ! ಭಾರತಕ್ಕೆ ಹೆಮ್ಮೆಯ ಕ್ಷಣ,ʼʼ ಎಂದು ಬಣ್ಣಿಸಿದ್ದಾರೆ.
***