ಪ್ರಧಾನ ಮಂತ್ರಿಯವರ ಕಛೇರಿ

ಸಾಮಾಜಿಕ ಮಾಧ್ಯಮ ಖಾತೆಗಳ ಪ್ರದರ್ಶನ ಚಿತ್ರ(ಡಿಪಿ)ಗಳನ್ನು “ಹರ್ ಘರ್ ತಿರಂಗಾ“ ಆಂದೋಲನದ ಉತ್ಸಾಹಕ್ಷಣಗಳಿಗೆ ಬದಲಾಯಿಸಲು ದೇಶವಾಸಿಗಳಿಗೆ ಕರೆ ನೀಡಿದ ಪ್ರಧಾನಮಂತ್ರಿ

Posted On: 13 AUG 2023 10:32AM by PIB Bengaluru

ಪ್ರಧಾನಮಂತ್ರಿಯವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರದರ್ಶನ ಚಿತ್ರ(ಡಿಪಿ)ಗಳನ್ನು “ತ್ರಿವರ್ಣ ಧ್ವಜ”ಕ್ಕೆ ಬದಲಾಯಿಸಿದರು.  

#HarGharTiranga ಸ್ಪೂರ್ತಿಯಲ್ಲಿ ಎಲ್ಲರೂ  ಇದೇ ರೀತಿ ಮಾಡಬೇಕೆಂದು ಅವರು ದೇಶವಾಸಿಗಳಲ್ಲಿ ಮನವಿ ಮಾಡಿದರು.

ಆಗಸ್ಟ್ 13-15, 2೦23ರ ಅವಧಿಯಲ್ಲಿ ಪ್ರತಿ ಮನೆಗಳಲ್ಲೂ “ತ್ರಿವರ್ಣ ಧ್ವಜ” ಹಾರಾಟದ “ಹರ್ ಘರ್ ತಿರಂಗಾ” ಆಂದೋಲನವನ್ನು ಸಂಪೂರ್ಣ ರಾಷ್ಟ್ರವು  ಆಚರಿಸುತ್ತಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ  ಮೋದಿ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ:

"#HarGharTiranga ಆಂದೋಲನದ ಉತ್ಸಾಹದಲ್ಲಿ, ನಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಪ್ರದರ್ಶನ ಚಿತ್ರ(ಡಿಪಿ)ಗಳನ್ನು “ತ್ರಿವರ್ಣ ಧ್ವಜ”ಕ್ಕೆ  ಬದಲಾಯಿಸೋಣ. ನಮ್ಮ “ಪ್ರೀತಿಯ ದೇಶ” ಮತ್ತು “ನಮ್ಮ” ನಡುವಿನ ಬಾಂಧವ್ಯವನ್ನು ಗಾಢವಾಗಿಸುವ ಈ ಅನನ್ಯ ಪ್ರಯತ್ನಕ್ಕೆ ಬೆಂಬಲವನ್ನು ನೀಡೋಣ.

***



(Release ID: 1948289) Visitor Counter : 123