ಪ್ರಧಾನ ಮಂತ್ರಿಯವರ ಕಛೇರಿ
'ಹರ್ ಘರ್ ತಿರಂಗಾ' ಆಂದೋಲನ ಅಡಿಯಲ್ಲಿ ತಿರಂಗಾ ಜೊತೆ ಫೋಟೋ ಅಪ್‌ಲೋಡ್ ಮಾಡಿ: ದೇಶದ ಜನತೆಗೆ ಪ್ರಧಾನ ಮಂತ್ರಿ ಮನವಿ
Posted On:
11 AUG 2023 8:41PM by PIB Bengaluru
ನಾಳೆ ಅಂದರೆ ಆಗಸ್ಟ್ 13 ರಿಂದ 15 ರವರೆಗೆ 'ಹರ್ ಘರ್ ತಿರಂಗಾ' ಆಂದೋಲನ ಅಡಿಯಲ್ಲಿ ತಿರಂಗಾ ಜೊತೆ ಫೋಟೋ ತೆಗೆದು ಅದನ್ನು harghartiranga.com ವೆಬ್ ಸೈಟ್ ನಲ್ಲಿ ಅಪ್‌ಲೋಡ್ ಮಾಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ನಾಗರಿಕರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು,
'ಹರ್ ಘರ್ ತಿರಂಗಾ’ ಅಭಿಯಾನವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಹೊಸ ಶಕ್ತಿಯನ್ನು ನೀಡುತ್ತದೆ. ದೇಶವಾಸಿಗಳು ಈ ಅಭಿಯಾನವನ್ನು ಈ ವರ್ಷ ಹೊಸ ಎತ್ತರಕ್ಕೆ ಕೊಂಡೊಯ್ಯಬೇಕು. ಆಗಸ್ಟ್ 13 ರಿಂದ 15 ರ ನಡುವೆ ದೇಶದ ಹೆಮ್ಮೆಯ ಸಂಕೇತವಾದ ರಾಷ್ಟ್ರಧ್ವಜವನ್ನು ಹಾರಿಸಿ http://harghartiranga.com ನಲ್ಲಿ ತ್ರಿವರ್ಣ ಧ್ವಜದೊಂದಿಗೆ ನಿಮ್ಮ ಸೆಲ್ಫಿಯನ್ನು ಅಪ್‌ಲೋಡ್ ಮಾಡಿ.
''ತಿರಂಗ, ಸ್ವಾತಂತ್ರ್ಯ ಮತ್ತು ರಾಷ್ಟ್ರೀಯ ಏಕತೆಯ ಚೈತನ್ಯವನ್ನು ಸಂಕೇತಿಸುತ್ತದೆ. ಪ್ರತಿಯೊಬ್ಬ ಭಾರತೀಯ ತ್ರಿವರ್ಣ ಧ್ವಜದೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುತ್ತಾನೆ. ಇದು ಮತ್ತಷ್ಟು ರಾಷ್ಟ್ರೀಯ ಪ್ರಗತಿಗೆ ಶ್ರಮಿಸಲು ನಮಗೆ ಸ್ಫೂರ್ತಿ ನೀಡುತ್ತದೆ. ಆಗಸ್ಟ್ 13 ರಿಂದ 15 ರ ಮಧ್ಯೆ ನಡೆಯುವ #ಹರ್ ಘರ್ ತಿರಂಗಾ ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ನಾನು ನಿಮ್ಮೆಲ್ಲರನ್ನು ಕೋರುತ್ತೇನೆ. ತಿರಂಗಾದೊಂದಿಗೆ ನಿಮ್ಮ ಫೋಟೋಗಳನ್ನು ಇಲ್ಲಿ http://harghartiranga.com ನಲ್ಲಿ ಅಪ್‌ಲೋಡ್ ಮಾಡಿ'' ಎಂದು ಪ್ರಧಾನ ಮಂತ್ರಿಗಳು ಮನವಿ ಮಾಡಿಕೊಂಡಿದ್ದಾರೆ.
********
(Release ID: 1948056)
Visitor Counter : 120
Read this release in:
Manipuri
,
English
,
Urdu
,
Marathi
,
Hindi
,
Assamese
,
Bengali
,
Punjabi
,
Gujarati
,
Odia
,
Tamil
,
Telugu
,
Malayalam