ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಖ್ಯಾತ ಫ್ರೆಂಚ್ ಯೋಗ ಶಿಕ್ಷಕಿ ಶ್ರೀಮತಿ ಷಾರ್ಲೆಟ್ ಚೋಪಿನ್ ಅವರನ್ನು ಭೇಟಿ ಮಾಡಿದ  ಪ್ರಧಾನಮಂತ್ರಿ

प्रविष्टि तिथि: 14 JUL 2023 9:57PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023ರ ಜುಲೈ 14ರಂದು ಪ್ಯಾರಿಸ್ ನಲ್ಲಿ ಖ್ಯಾತ ಫ್ರೆಂಚ್ ಯೋಗ ಶಿಕ್ಷಕಿ ಶ್ರೀಮತಿ ಷಾರ್ಲೆಟ್ ಚೋಪಿನ್ ಅವರನ್ನು ಭೇಟಿ ಮಾಡಿದರು.

ಶ್ರೀಮತಿ ಚೋಪಿನ್ ಅವರಿಗೆ ಯೋಗದ ಬಗ್ಗೆ ಇರುವ ಆಳವಾದ ನಂಬಿಕೆ ಮತ್ತು ಫ್ರಾನ್ಸ್ ನಲ್ಲಿ ಯೋಗದ ಪ್ರಚಾರದಲ್ಲಿ ಅವರು ಮಾಡುತ್ತಿರುವ ಅದ್ಭುತ ಕಾರ್ಯವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು.

ಶ್ರೀಮತಿ ಚೋಪಿನ್ ಅವರು ಯೋಗವು ಹೇಗೆ ಸಂತೋಷವನ್ನು ತರುತ್ತದೆ ಮತ್ತು ಸಮಗ್ರ ಯೋಗಕ್ಷೇಮವನ್ನು ಹೇಗೆ ಉತ್ತೇಜಿಸುತ್ತದೆ ಎಂಬುದರ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಅಂತರರಾಷ್ಟ್ರೀಯ ಯೋಗ ದಿನಾಚರಣೆಯಿಂದಾಗಿ ಯೋಗದ ಬಗ್ಗೆ ಹೆಚ್ಚುತ್ತಿರುವ ಆಸಕ್ತಿಯ ಬಗ್ಗೆ ಕೂಡಾ ಅವರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.

****


(रिलीज़ आईडी: 1939970) आगंतुक पटल : 234
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Assamese , Bengali , Punjabi , Gujarati , Odia , Tamil , Telugu , Malayalam