ಹಣಕಾಸು ಸಚಿವಾಲಯ
azadi ka amrit mahotsav

ವಿಪತ್ತು ಪ್ರತಿಕ್ರಿಯೆಗಾಗಿ ಕೇಂದ್ರವು ರಾಜ್ಯಗಳಿಗೆ ರೂ.7,532 ಕೋಟಿ ಬಿಡುಗಡೆ ಮಾಡಿದೆ


ಭಾರೀ ಮಳೆ ಮತ್ತು ಸಂಬಂಧಿತ ನೈಸರ್ಗಿಕ ವಿಕೋಪಗಳ ದೃಷ್ಟಿಯಿಂದ ರಾಜ್ಯಗಳಿಗೆ ತಕ್ಷಣವೇ ಹಣವನ್ನು ಒದಗಿಸಲು ಮಾರ್ಗಸೂಚಿಗಳನ್ನು ಸಡಿಲಿಸಲಾಗಿದೆ

Posted On: 12 JUL 2023 4:03PM by PIB Bengaluru

ಕೇಂದ್ರ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು 22 ರಾಜ್ಯ ಸರ್ಕಾರಗಳ ಆಯಾ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಗಳಿಗೆ (ಎಸ್.ಡಿ.ಆರ್.ಎಫ್.) ರೂ. 7,532 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರ ಗೃಹ ಸಚಿವಾಲಯದ ಶಿಫಾರಸ್ಸಿನಂತೆ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಈಗ ಬಿಡುಗಡೆ ಮಾಡಲಾದ ಮೊತ್ತದ ರಾಜ್ಯವಾರು ವಿವರಗಳು ಕೆಳಕಂಡಂತಿವೆ:  

                                                                                                       

ಕ್ರ.ಸಂ

ರಾಜ್ಯ

ಮೊತ್ತ  (ಕೋಟಿ ರೂ.)

1

ಆಂಧ್ರಪ್ರದೇಶ

493.60

2

ಅರುಣಾಚಲ ಪ್ರದೇಶ

110.40

3

ಅಸ್ಸಾಂ

340.40

4

ಬಿಹಾರ

624.40

5

ಛತ್ತೀಸಗಡ

181.60

6

ಗೋವ

4.80

7

ಗುಜರಾತ್

584.00

8

ಹರ್ಯಾಣ

216.80

9

ಹಿಮಾಚಲ ಪ್ರದೇಶ

180.40

10

ಕರ್ನಾಟಕ

348.80

11

ಕೇರಳ

138.80

12

ಮಹಾರಾಷ್ಟ್ರ

1420.80

13

ಮಣಿಪುರ

18.80

14

ಮೇಘಾಲಯ

27.20

15

ಮಿಜೋರಾಂ

20.80

16

ಒಡಿಶಾ

707.60

17

ಪಂಜಾಬ್

218.40

18

ತಮಿಳುನಾಡು

450.00

19

ತೆಲಂಗಾಣ

188.80

20

ತ್ರಿಪುರ

30.40

21

ಉತ್ತರ ಪ್ರದೇಶ

812.00

22

ಉತ್ತರಾಖಂಡ

413.20

 

 

ದೇಶಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳನ್ನು ಸಡಿಲಿಸಿ, ಕಳೆದ ಆರ್ಥಿಕ ವರ್ಷದಲ್ಲಿ ರಾಜ್ಯಗಳಿಗೆ ಒದಗಿಸಿದ ಮೊತ್ತದ ಬಳಕೆ ಪ್ರಮಾಣ ಪತ್ರಕ್ಕೆ ಕಾಯದೆ ರಾಜ್ಯಗಳಿಗೆ ತಕ್ಷಣದ ನೆರವು ನೀಡಬೇಕು ಎಂಬ ಉದ್ಧೇಶದಲ್ಲಿ  ಸಹಾಯ ನಿಧಿಯನ್ನು ಕೂಡಲೇ ಬಿಡುಗಡೆ ಮಾಡಲಾಗಿದೆ.

 

ವಿಪತ್ತು ನಿರ್ವಹಣಾ ಕಾಯಿದೆ, 2005 ರ ಪರಿಚ್ಛೇಧ 48 (1) (ಎ) ಅಡಿಯಲ್ಲಿ ಪ್ರತಿ ರಾಜ್ಯದಲ್ಲಿ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯನ್ನು (ಎಸ್.ಡಿ.ಆರ್.ಎಫ್.) ರಚಿಸಲಾಗಿದೆ. ಈ ನಿಧಿಯು ಅಧಿಸೂಚಿತ ವಿಪತ್ತುಗಳಿಗೆ ಪ್ರತಿಕ್ರಿಯೆಗಾಗಿ ರಾಜ್ಯ ಸರ್ಕಾರಗಳ ಬಳಿ ಲಭ್ಯವಿರುವ ಪ್ರಾಥಮಿಕ ನಿಧಿಯಾಗಿರುತ್ತದೆ. ಕೇಂದ್ರ ಸರ್ಕಾರವು ಸಾಮಾನ್ಯವಾಗಿ ರಾಜ್ಯಗಳಲ್ಲಿ ಎಸ್.ಡಿ.ಆರ್.ಎಫ್.ಗೆ 75% ಮತ್ತು ಈಶಾನ್ಯ ಮತ್ತು ಹಿಮಾಲಯದ ರಾಜ್ಯಗಳಲ್ಲಿ 90% ಧನಸಹಾಯ ನೀಡುತ್ತದೆ.

ಕೇಂದ್ರ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ವಾರ್ಷಿಕ ಕೇಂದ್ರ ಧನಸಹಾಯವನ್ನು ಎರಡು ಸಮಾನ ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮಾರ್ಗಸೂಚಿಗಳ ಪ್ರಕಾರ, ಹಿಂದಿನ ಕಂತಿನಲ್ಲಿ ಬಿಡುಗಡೆಯಾದ ಮೊತ್ತದ ಬಳಕೆಯ ಪ್ರಮಾಣಪತ್ರದ ಸ್ವೀಕೃತಿ ಮತ್ತು ಎಸ್‌.ಡಿ.ಆರ್‌.ಎಫ್‌.ನಿಂದ ಕೈಗೊಂಡ ಚಟುವಟಿಕೆಗಳ ಕುರಿತು ರಾಜ್ಯ ಸರ್ಕಾರದಿಂದ ವರದಿಯನ್ನು ಸ್ವೀಕರಿಸಿದ ನಂತರ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ, ತುರ್ತು ದೃಷ್ಟಿಯಿಂದ ಬಾರಿ ಹಣ ಬಿಡುಗಡೆ ಮಾಡುವಾಗ ಅವಶ್ಯಕತೆಗಳನ್ನು ಮನ್ನಾ ಮಾಡಲಾಗಿದೆ.

ಚಂಡಮಾರುತ, ಬರ, ಭೂಕಂಪ, ಬೆಂಕಿ, ಪ್ರವಾಹ, ಸುನಾಮಿ, ಆಲಿಕಲ್ಲು, ಭೂಕುಸಿತ, ಹಿಮಕುಸಿತ, ಮೋಡದ ಸ್ಫೋಟ, ಕೀಟಗಳ ದಾಳಿ ಮತ್ತು ಹಿಮ ಮತ್ತು ಶೀತ ಅಲೆಗಳಂತಹ ಅಧಿಸೂಚಿತ ವಿಪತ್ತುಗಳ ಸಂತ್ರಸ್ತರಿಗೆ ತಕ್ಷಣದ ಪರಿಹಾರವನ್ನು ಒದಗಿಸಲು ಮಾತ್ರ ಎಸ್.ಡಿ.ಆರ್.ಎಫ್. ಮೊತ್ತವನ್ನು ಬಳಸಲಾಗುತ್ತದೆ.

ರಾಜ್ಯಗಳಿಗೆ ಎಸ್.ಡಿ.ಆರ್.ಎಫ್. ನಿಧಿಗಳ ಹಂಚಿಕೆಯು ಹಿಂದಿನ ಖರ್ಚು, ಪ್ರದೇಶ, ಜನಸಂಖ್ಯೆ ಮತ್ತು ವಿಪತ್ತು ಅಪಾಯದ ಸೂಚ್ಯಂಕದಂತಹ ಬಹು ಅಂಶಗಳನ್ನು ಆಧರಿಸಿದೆ. ಈ ಅಂಶಗಳು ರಾಜ್ಯಗಳ ಸಾಂಸ್ಥಿಕ ಸಾಮರ್ಥ್ಯ, ಅಪಾಯದ ಮಾನ್ಯತೆ ಮತ್ತು ಅಪಾಯ ಮತ್ತು ದುರ್ಬಲತೆಯನ್ನು ಪ್ರತಿಬಿಂಬಿಸುತ್ತವೆ.

15ನೇ ಕೇಂದ್ರ ಹಣಕಾಸು ಆಯೋಗದ ಶಿಫಾರಸುಗಳ ಆಧಾರದ ಮೇಲೆ 2021-22 ರಿಂದ 2025-26 ರವರೆಗಿನ ಎಸ್‌.ಡಿ.ಆರ್‌.ಎಫ್‌. ನಿಧಿಗಾಗಿ ಕೇಂದ್ರ ಸರ್ಕಾರವು ರೂ.1,28,122.40 ಕೋಟಿ ಹಂಚಿಕೆ ಮಾಡಿದೆ. ಈ ಮೊತ್ತದಲ್ಲಿ ಕೇಂದ್ರ ಸರ್ಕಾರದ ಪಾಲು ರೂ. 98,080.80 ಕೋಟಿ ಆಗಿರುತ್ತದೆ. ಕೇಂದ್ರ ಸರ್ಕಾರವು ಈ ಮೊದಲು ರೂ.34,140.00 ಕೋಟಿ ಬಿಡುಗಡೆ ಮಾಡಿದೆ. ಪ್ರಸ್ತುತ ಬಿಡುಗಡೆಯೊಂದಿಗೆ, ಇದುವರೆಗೆ ರಾಜ್ಯ ಸರ್ಕಾರಗಳಿಗೆ ಬಿಡುಗಡೆಯಾದ ಎಸ್‌.ಡಿ.ಆರ್‌.ಎಫ್‌. ನಿಧಿಯ ಕೇಂದ್ರ ಸರ್ಕಾರದ ಪಾಲು ಒಟ್ಟು ರೂ. 42,366 ಕೋಟಿಯಾಗುತ್ತದೆ.

****


(Release ID: 1939152) Visitor Counter : 150