ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ತಮ್ಮ ಮುಂಬರುವ ಅಮೇರಿಕ ಭೇಟಿಗೆ ತೋರಿರುವ ಜನರ ಉತ್ಸಾಹಕ್ಕಾಗಿ ಪ್ರಧಾನಮಂತ್ರಿಯವರು ಧನ್ಯವಾದಗಳನ್ನು ಅರ್ಪಿಸಿದರು

Posted On: 19 JUN 2023 10:05PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು, ತಮ್ಮ ಮುಂಬರುವ ಅಮೇರಿಕ ಭೇಟಿಗಾಗಿ ವೈವಿಧ್ಯಮಯ ಬೆಂಬಲ ಮತ್ತು ಉತ್ಸಾಹ  ತೋರಿಸುತ್ತಿರುವ   ಅಮೆರಿಕದ  ಕಾಂಗ್ರೆಸ್ ಸದಸ್ಯರು ಮತ್ತು ಚಿಂತನಶೀಲ ನಾಯಕರು  ಸೇರಿದಂತೆ ಎಲ್ಲಾ ವರ್ಗದ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಪ್ರಧಾನಮಂತ್ರಿಯವರ ಟ್ವೀಟ್ ಹೀಗಿದೆ:

"ಕಾಂಗ್ರೆಸ್ ಸದಸ್ಯರು, ಚಿಂತನಶೀಲ ನಾಯಕರು  ಮತ್ತು ಇತರರು ಸೇರಿದಂತೆ ಎಲ್ಲಾ ವರ್ಗಗಳ ಜನರು ನನ್ನ ಮುಂಬರುವ ಅಮೆರಿಕದ ಭೇಟಿಯ ಬಗ್ಗೆ ತಮ್ಮ ಉತ್ಸಾಹವನ್ನು ಹಂಚಿಕೊಳ್ಳುತ್ತಿದ್ದಾರೆ. ಅವರ ಈ ರೀತಿಯ ಮಾತುಗಳಿಗಾಗಿ ನನ್ನ ಧನ್ಯವಾದಗಳು. ಇಂತಹ ವೈವಿಧ್ಯಮಯ ಬೆಂಬಲವು ಭಾರತ-ಅಮೆರಿಕ ಬಾಂಧವ್ಯದ ಆಳವನ್ನು ಒತ್ತಿಹೇಳುತ್ತದೆ."

***


(Release ID: 1933657) Visitor Counter : 135