ವಾರ್ತಾ ಮತ್ತು ಪ್ರಸಾರ ಸಚಿವಾಲಯ

‘ಬಿಪರ್ ಜಾಯ್;’ ಚಂಡಮಾರುತ ಕುರಿತು ತಳಮಟ್ಟದಲ್ಲಿ ವರದಿಗಾರಿಕೆಯಲ್ಲಿ ತೊಡಗಿರುವ ಮಾಧ್ಯಮ ಸಿಬ್ಬಂದಿಯ ಸುರಕ್ಷತೆಗೆ ಬಗ್ಗೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಆತಂಕ: ಸಲಹಾ ಸೂಚಿ ಬಿಡುಗಡೆ


ನಿಯೋಜಿತ ಸಿಬ್ಬಂದಿಯು ಸುರಕ್ಷತೆ ಮತ್ತು ಭದ್ರತೆಯಲ್ಲಿ ರಾಜಿ ಮಾಡಿಕೊಳ್ಳಬಾರದು, ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮಾಧ್ಯಮ ಸಂಸ್ಥೆಗಳಿಗೆ ಸಚಿವಾಲಯ ಆಗ್ರಹ

Posted On: 15 JUN 2023 12:02PM by PIB Bengaluru

ವಿವಿಧ ಮಾಧ್ಯಮ ಸಂಸ್ಥೆಗಳ ನಾನಾ ವರದಿಗಾರರು, ಕ್ಯಾಮರಾಮನ್ ಗಳು ಮತ್ತು ಇತರೆ ಸಿಬ್ಬಂದಿ ಸುರಕ್ಷತೆ ಮತ್ತು ಭದ್ರತೆ, ವಿಶೇಷವಾಗಿ “ಬಿಪರ್ ಜಾಯ್’’ ಚಂಡಮಾರುತ ಕುರಿತ ವರದಿಗಾರಿಕೆ ಮಾಡುತ್ತಿರುವ ಖಾಸಗಿ ಟಿ.ವಿ. ಚಾನಲ್ ಸಿಬ್ಬಂದಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಇಂದು ಚಂಡಮಾರುತದ ಬಗ್ಗೆ ತಳಮಟ್ಟದಲ್ಲಿ ವರದಿಗಾರಿಕೆ (ಗ್ರೌಂಡ್ ರಿಪೋರ್ಟಿಂಗ್) ಮಾಡಲು ನಿಯೋಜಿಸಿರುವ ಸಿಬ್ಬಂದಿಗೆ ಸಲಹಾ ಸೂಚಿಯನ್ನು ಬಿಡುಗಡೆ ಮಾಡಿದೆ.

ಈ ಘಟನೆ ಕುರಿತಂತೆ ವರದಿಗಾಗಿ ನಿಯೋಜಿಸಿರುವ ಖಾಸಗಿ ಉಪಗ್ರಹ ಟಿ.ವಿ. ಚಾನಲ್ ಗಳು ಸಿಬ್ಬಂದಿ, ಕ್ಯಾಮರಾಮನ್ ಮತ್ತು ವರದಿಗಾರರು ಭದ್ರತೆ ಮತ್ತು ಸುರಕ್ಷತೆಗೆ ತಳಮಟ್ಟದಲ್ಲಿ ಗಂಭೀರ ಅಪಾಯವಿದೆ ಎಂದು ಸಚಿವಾಲಯ ಎಚ್ಚರಿಕೆ ನೀಡಿದೆ. ಅಂತಹ ತಳಮಟ್ಟದ ವರದಿಗಾರಿಕೆ (ಗ್ರೌಂಡ್ ರಿಪೋರ್ಟಿಂಗ್) ಯಿಂದ ನಿಯೋಜನೆ ಮಾಡಿರುವ ನಾನಾ ಸಿಬ್ಬಂದಿಗಳ ಬಗ್ಗೆ ಸಚಿವಾಲಯ ಆತಂಕ ವ್ಯಕ್ತಪಡಿಸಿದೆ.

ಚಂಡಮಾರುತ ಪರಿಣಾಮ ಬೀರಬಹುದಾದ ಪ್ರದೇಶಗಳಲ್ಲಿ ತಮ್ಮ ಸಿಬ್ಬಂದಿಯನ್ನು ನಿಯೋಜಿಸುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆ ಹಾಗೂ ಸೂಕ್ತ ಕಾಳಜಿಯನ್ನು ಕೈಗೊಳ್ಳುವಂತೆ ಸಚಿವಾಲಯವು ಮಾಧ್ಯಮಗಳ ಸಂಸ್ಥೆಗಳಿಗೆ ಕಠಿಣ ಸೂಚನೆ ನೀಡಿದೆ. ಮಾಧ್ಯಮ ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಗೆ ರಾಜಿಯಾಗುವ ರೀತಿಯಲ್ಲಿ ಮತ್ತು ಸ್ಥಳೀಯ ಆಡಳಿತಗಳು ನೀಡುವ ಮುನ್ನೆಚ್ಚರಿಕೆಗಳನ್ನು ಅನುಸರಿಸರಿಬೇಕು ಮತ್ತು ಅಂತಹ ಸಂದರ್ಭಗಳಲ್ಲಿ ಯಾವುದೇ ಸಿಬ್ಬಂದಿಯನ್ನು ನಿಯೋಜಿಸಲು ಸಂಸ್ಥೆಗಳು ನಿರ್ಧಾರ ಕೈಗೊಳ್ಳಬಾರದು ಎಂದು ಸಚಿವಾಲಯ ಬಲವಾಗಿ ಶಿಫಾರಸು ಮಾಡಿದೆ.

“ಬಿಪರ್ ಜಾಯ್’ ಚಂಡಮಾರುತ ಮುಂದಿನ ಗಂಟೆಗಳಲ್ಲಿ ದೇಶದ ಪಶ್ಚಿಮ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆ ಇದ್ದು, ಅದು ನಾನಾ ಬಗೆಯ ಅಡ್ಡ ಪರಿಣಾಮಗಳನ್ನು ಉಂಟು ಮಾಡುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಜತೆಗೂಡಿ ಚಂಡಮಾರುತದ ಪರಿಣಾಮಗಳನ್ನು ತಗ್ಗಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಸಚಿವಾಲಯವು ಜನರಿಗೆ ಭರವಸೆಯನ್ನು ನೀಡಿದೆ.

                                                          -----------

 



(Release ID: 1932536) Visitor Counter : 151