ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಅಂತಾರಾಷ್ಟ್ರೀಯ ದಾಖಲೆಗಳ ಸಂಗ್ರಹ ದಿನ(ಆರ್ಕೈವ್ಸ್ ಡೇ) ಮಹತ್ವ ಸಾರಿದ ಪ್ರಧಾನಿ ಮೋದಿ

प्रविष्टि तिथि: 09 JUN 2023 7:06PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸರಿಯಾಗಿ ದಾಖಲೆಗಳ ಸಂಗ್ರಹ ಮಾಡುವುದರ ಅಗತ್ಯತೆ ಮತ್ತು ನಮ್ಮ ಪರಂಪರೆ ಮತ್ತು ಜ್ಞಾನವನ್ನು ಸಂರಕ್ಷಿಸುವಲ್ಲಿ ಅದರ ಪಾತ್ರವನ್ನು ಒತ್ತಿ ಹೇಳಿದ್ದಾರೆ.

ಅಂತಾರಾಷ್ಟ್ರೀಯ ದಾಖಲೆಗಳ ಸಂಗ್ರಹ ದಿನದ ಸಂದರ್ಭದಲ್ಲಿ ಭಾರತದ ದಾಖಲೆಗಳ ಸಂಗ್ರಹ ಇಲಾಖೆ(ಆರ್ಕೈವ್ಸ್ )ಆಯೋಜಿಸಿದ್ದ ಪ್ರದರ್ಶನದ ಕುರಿತು ಮಾಡಿದ್ದ ಟ್ವೀಟ್ ನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡು ಅಭಿಪ್ರಾಯ ವ್ಯಕ್ತಪಡಿಸಿದ ಪ್ರಧಾನ ಮಂತ್ರಿಗಳು: ನಮ್ಮ ಹಳೆಯ ಐತಿಹಾಸಿಕ ದಾಖಲೆಗಳನ್ನು ಸರಿಯಾಗಿ ಕಾಪಾಡುವುದು ನಮ್ಮ ಪರಂಪರೆ ಮತ್ತು ಜ್ಞಾನವನ್ನು ಸಂರಕ್ಷಿಸುವ  ಬದ್ಧತೆಗೆ ಸಾಕ್ಷಿಯಾಗಿದೆ. ಭವಿಷ್ಯದ ಪೀಳಿಗೆ ಭೂತಕಾಲದೊಂದಿಗೆ ಜೊತೆಯಾಗಿ ಜ್ಞಾನವನ್ನು ಹೆಚ್ಚಿಸಿಕೊಳ್ಳಲು, ಮಾಹಿತಿಗಳನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ನಮ್ಮ ಇತಿಹಾಸವನ್ನು ಶ್ರದ್ಧೆಯಿಂದ ರಕ್ಷಿಸುವ ನಮ್ಮ ಇತಿಹಾಸಕಾರರು, ದಾಖಲೆ ಸಂಗ್ರಹಕಾರರನ್ನು ನಾವು ಗೌರವಿಸೋಣ ಎಂದು ಬರೆದುಕೊಂಡಿದ್ದಾರೆ.

 

****


(रिलीज़ आईडी: 1931471) आगंतुक पटल : 163
इस विज्ञप्ति को इन भाषाओं में पढ़ें: English , Urdu , Marathi , हिन्दी , Assamese , Bengali , Manipuri , Punjabi , Gujarati , Odia , Tamil , Telugu , Malayalam