ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಸ್ವದೇಶಿ ಇಂಧನ ಕಚ್ಚಾವಸ್ತು(ಫೀಡ್‌ಸ್ಟಾಕ್) ಮತ್ತು ಸುಸ್ಥಿರ ವೈಮಾನಿಕ ಇಂಧನ(ಎಸ್‌ಎಎಫ್‌) ಬಳಸಿದ ಭಾರತದ ಮೊದಲ ದೇಶೀಯ ವಾಣಿಜ್ಯ ವಿಮಾನ ಹಾರಾಟ; ಪ್ರಧಾನಿ ಶ್ಲಾಘನೆ

प्रविष्टि तिथि: 19 MAY 2023 8:08PM by PIB Bengaluru

ಎಥೆನಾಲ್‌ನಿಂದ ವೈಮಾನಿಕ ಇಂಧನವನ್ನು ತಯಾರಿಸಿದ ಭಾರತದ ಐತಿಹಾಸಿಕ ಹೆಜ್ಜೆ ಮತ್ತು ಸ್ವದೇಶಿ ಇಂಧನ ಕಚ್ಚಾವಸ್ತು(ಫೀಡ್‌ಸ್ಟಾಕ್) ಮತ್ತು ಸುಸ್ಥಿರ ವೈಮಾನಿಕ ಇಂಧನ(ಎಸ್‌ಎಎಫ್‌)ದಲ್ಲಿ ಭಾರತದ ಮೊದಲ ದೇಶೀಯ ವಾಣಿಜ್ಯ ವಿಮಾನ ಹಾರಾಟ ಪ್ರಾರಂಭಿಸಿರುವುದಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಅವರ ಟ್ವೀಟ್ ಗೆ ಉತ್ತರವಾಗಿ ಮರುಟ್ವೀಟ್ ಮಾಡಿರುವ ಪ್ರಧಾನ ಮಂತ್ರಿ;

"ಸುಸ್ಥಿರ ಅಭಿವೃದ್ಧಿಯ ಕಡೆಗಿನ ನಮ್ಮೆಲ್ಲರ ಸಾಮೂಹಿಕ ಅಥವಾ ಸಂಘಟಿತ ಆದ್ಯತೆಯನ್ನು ಇದು ಸೂಚಿಸುತ್ತಿದೆ" ಎಂದಿದ್ದಾರೆ.

 

*****


(रिलीज़ आईडी: 1925915) आगंतुक पटल : 184
इस विज्ञप्ति को इन भाषाओं में पढ़ें: Bengali , English , Urdu , हिन्दी , Marathi , Manipuri , Assamese , Punjabi , Gujarati , Odia , Tamil , Telugu , Malayalam