ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಕೇಂದ್ರ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಭಾರತೀಯ ವಾರ್ತಾ ಸೇವೆಯ ಒಂದು ದಿನದ ಚಿಂತನ ಶಿಬಿರವನ್ನು ಉದ್ಘಾಟಿಸಿದರು


ಹೊಸ ತಂತ್ರಜ್ಞಾನಗಳನ್ನು ಪ್ರಯತ್ನಿಸಿ ಮತ್ತು ಸರ್ಕಾರಿ ಸಂವಹನದಲ್ಲಿ ಹೊಸ ಗಡಿಗಳನ್ನು ಅನ್ವೇಷಿಸಿ: ಶ್ರೀ ಅನುರಾಗ್ ಠಾಕೂರ್

Posted On: 17 MAY 2023 2:47PM by PIB Bengaluru

 

ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು ಇಂದು  ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಮಾಧ್ಯಮ ಘಟಕಗಳು ಮತ್ತು ಭಾರತೀಯ ವಾರ್ತಾ ಸೇವೆ (ಐಐಎಸ್) ಸೇರಿದಂತೆ ಅಧಿಕಾರಿಗಳಿಗೆ ಜನರೊಂದಿಗಿನ ಸಂವಹನದಲ್ಲಿ ಹೊಸ ಗಡಿಗಳನ್ನು ಅನ್ವೇಷಿಸಲು ಮತ್ತು ಆ ಪ್ರಕ್ರಿಯೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು. ಇಂದು ಇಲ್ಲಿ  'ಉತ್ತಮ ಆಡಳಿತಕ್ಕಾಗಿ ನಾಗರಿಕ ಕೇಂದ್ರಿತ ಸಂವಹನವನ್ನು ಒಂದು ಸಾಧನವಾಗಿ ಬಳಸಿ' ಎಂಬ ಒಂದು ದಿನದ ‘ಚಿಂತನ ಶಿಬಿರ’ ಸಮಾವೇಶವನ್ನು ಉದ್ಘಾಟಿಸಿದ ಸಚಿವರು, ಐಐಎಸ್ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. 

ಐಐಎಸ್ ನ ಹಿರಿಯ ಅಧಿಕಾರಿಗಳು ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳನ್ನು ಒಳಗೊಂಡ ಸಭಿಕರಿಗೆ ಎಚ್ಚರಿಕೆ ನೀಡಿದ ಶ್ರೀ ಠಾಕೂರ್, ಮಾಧ್ಯಮ ವಿದ್ಯಮಾನವು ವೇಗವಾಗಿ ಬದಲಾಗುತ್ತಿದೆ ಮತ್ತು ಜನರು ಮಾಹಿತಿಯನ್ನು ಬಳಸುವ ವಿಧಾನವೂ ಸಹ ಬದಲಾಗುತ್ತಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ 21ನೇ ಶತಮಾನದ ಅಗತ್ಯಗಳನ್ನು ಪೂರೈಸಲು ಮಾಹಿತಿ ಪ್ರಸರಣ ವಿಧಾನಗಳನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ ಎಂದರು.

ಭಾರತೀಯ ವಾರ್ತಾ ಸೇವೆಯು ಸರ್ಕಾರದ ಪ್ರಮುಖ ಭಾಗವಾಗಿದೆ ಮತ್ತು ಈ ಚಿಂತನ ಶಿಬಿರ ಅಧಿಕಾರಿಗಳಿಗೆ ಸಹಯೋಗ, ಆತ್ಮಾವಲೋಕನ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕೆಲಸವನ್ನು ಸಮಯೋಚಿತವಾಗಿ ಸರಿಪಡಿಸಲು ಅನನ್ಯ ಅವಕಾಶವನ್ನು ಒದಗಿಸಿದೆ ಎಂದು ಸಚಿವರು ಹೇಳಿದರು. ಸಂಪನ್ಮೂಲಗಳ ಉತ್ತಮ ಬಳಕೆ, ಪ್ರಯತ್ನಗಳ ಸಮನ್ವಯ, ಮಾಹಿತಿಯ ಹಂಚಿಕೆ ಮತ್ತು ಒಂದೇ ತಂಡವಾಗಿ ಕೆಲಸ ಮಾಡುವ ಮೂಲಕ ಹೆಚ್ಚಿನ ಪರಿಣಾಮಕಾರಿತನದತ್ತ ಕೆಲಸ ಮಾಡುವಂತೆ ಅವರು ಅಧಿಕಾರಿಗಳನ್ನು ಪ್ರೋತ್ಸಾಹಿಸಿದರು.

ಸಚಿವರು ಅಧಿಕಾರಿಗಳಿಗೆ ತಮಗಾಗಿ ಒಂದು ಕಾಲಮಿತಿಯನ್ನು ನಿಗದಿಪಡಿಸುವಂತೆ ಮತ್ತು ಸಚಿವಾಲಯದ ಆದ್ಯತೆಗಳು ಮತ್ತು ವಿತರಣೆಗಳು ಮತ್ತು ತಮ್ಮದೇ ಆದ ಸಂಸ್ಥೆಯ ಆದ್ಯತೆಗಳು ಮತ್ತು ವಿತರಣೆಗಳನ್ನು ಪರಿಶೀಲಿಸಲು ಮತ್ತು ನವೀಕರಿಸಲು ಒತ್ತಾಯಿಸಿದರು. ಕರ್ಮಯೋಗಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವವನ್ನು ಉಲ್ಲೇಖಿಸಿದ ಸಚಿವರು, ರಾಷ್ಟ್ರಕ್ಕೆ ತಮ್ಮ ಅತ್ಯುತ್ತಮವಾದದ್ದನ್ನು ನೀಡಲು ಸಮರ್ಥರಾಗಿದ್ದಾರೆಯೇ ಎಂಬ ಬಗ್ಗೆ ಕಾಲಕಾಲಕ್ಕೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಸಚಿವಾಲಯದ ಸಂವಹನದ ಗುರಿಗೆ ಸ್ಪಷ್ಟ ಆದ್ಯತೆಯನ್ನು  ವಿವರಿಸಿದ ಸಚಿವರು  ಸರ್ಕಾರವು ದೀನದಲಿತರ ಕಲ್ಯಾಣದ ಕಡೆಗೆ ಒಲವು ತೋರುತ್ತಿದ್ದಂತೆ, ಅಂತ್ಯೋದಯ ಮಂತ್ರವು ಅಧಿಕಾರಿಗಳ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು. ಭಾರತದ ಹೆಚ್ಚಿನ ಭಾಗವು ದೂರದರ್ಶನ ಮತ್ತು ಪತ್ರಿಕೆಗಳ ಸೌಲಭ್ಯಗಳಿಲ್ಲದೆ ಮಾಧ್ಯಮದ ನೆರಳಿನಲ್ಲಿ ವಾಸಿಸುತ್ತಿದೆ ಎಂದು ಅವರು ಗಮನಸೆಳೆದರು. ಸಮಾಜದ ಆ ವರ್ಗವನ್ನು ತಲುಪುವುದು ಸೇವೆಯ ಅಧಿಕಾರಿಗಳ ಜವಾಬ್ದಾರಿಯಾಗಿದೆ.

ಇದಕ್ಕೂ ಮುನ್ನ, ವಾರ್ತಾ ಮತ್ತು ಪ್ರಸಾರ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು ಶಿಬಿರವನ್ನು ಐದು ಗೋಷ್ಠಿಗಳಾಗಿ ವಿಂಗಡಿಸುವುದರ ಮೂಲ ವಿಷಯಗಳನ್ನು ಪರಿಶೀಲಿಸಿದರು ಮತ್ತು ಎಲ್ಲ ವಿಷಯಗಳು ಹೆಚ್ಚು ಪ್ರಸ್ತುತತೆಯನ್ನು ಹೊಂದಿವೆ ಮತ್ತು ಗುಂಪುಗಳಾಗಿ ವಿಂಗಡಿಸಲಾದ ಅಧಿಕಾರಿಗಳು ಹಗಲಿನಲ್ಲಿ ಚಿಂತನ-ಮಂಥನ ನಡೆಸುತ್ತಾರೆ ಮತ್ತು ಕೊನೆಯಲ್ಲಿ ತಮ್ಮ ಆಲೋಚನೆಗಳನ್ನು ಪ್ರಸ್ತುತಪಡಿಸುತ್ತಾರೆ ಎಂದು ಹೇಳಿದರು. ಚರ್ಚೆಯ ಐದು ವಿಷಯಗಳು ಹೀಗಿವೆ

• ನಾಗರಿಕರೊಂದಿಗೆ ಭಾಗವಹಿಸುವಿಕೆಯ ಸಂವಹನ - ಜನ್ ಭಾಗೀದಾರಿ
• ವ್ಯಾಪ್ತಿಯನ್ನು ಗರಿಷ್ಠಗೊಳಿಸಲು ಸಾರ್ವಜನಿಕ ಸಂವಹನಗಳಲ್ಲಿ ಉದಯೋನ್ಮುಖ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು
• ತಪ್ಪು ಮಾಹಿತಿಯನ್ನು ತೊಡೆಯಲು ತ್ವರಿತ ಪ್ರತಿಕ್ರಿಯೆ ಕಾರ್ಯವಿಧಾನದ ಸಾಂಸ್ಥೀಕರಣ
• ಪ್ರಾದೇಶಿಕ ಸಂವಹನದ ಮೂಲಕ ಉದ್ದೇಶಿತ ತಲುಪುವಿಕೆ
• ಸಾರ್ವಜನಿಕ ಸೇವಾ ಪ್ರಸಾರವನ್ನು ಬಲಪಡಿಸುವುದು

ಸರ್ಕಾರದ ಸಂವಹನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚಿಂತನ ಮಂಥನ ನಡೆಸಲು ಮತ್ತು ಭಾರತ ಸರ್ಕಾರದ ಸಂವಹನ ಮತ್ತು ಜನಸಂಪರ್ಕ ಚಟುವಟಿಕೆಗಳಿಗೆ ಮಾರ್ಗದರ್ಶನ ನೀಡಲು ಕ್ರಿಯಾ ಯೋಜನೆ ಮತ್ತು ಮಾರ್ಗಸೂಚಿಯನ್ನು ಸಿದ್ಧಪಡಿಸಲು ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ದಿನವಿಡೀ ಚಿಂತನ ಶಿಬಿರವನ್ನು ಆಯೋಜಿಸಲಾಗಿದೆ.

*****



(Release ID: 1925002) Visitor Counter : 142