ಸಂಪುಟ
ಸಹಾಯಕ ತಂತ್ರಜ್ಞಾನ ಕುರಿತಂತೆ ಆರೋಗ್ಯ ಸಂಶೋಧನಾ ಇಲಾಖೆ (ಡಿಎಚ್.ಆರ್) ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯು.ಎಚ್ ಒ) ನಡುವೆ ಯೋಜನಾ ಸಹಯೋಗ ಒಪ್ಪಂದಕ್ಕೆ ಅಂಕಿತ ಹಾಕಲು ಸಂಪುಟದ ಅನುಮೋದನೆ
Posted On:
17 MAY 2023 4:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಸಂಶೋಧನೆ, ನಾವೀನ್ಯತೆ ಮತ್ತು ಸಾಮರ್ಥ್ಯವರ್ಧನೆಯನ್ನು ಉತ್ತೇಜಿಸುವ ಮೂಲಕ ಉನ್ನತ ಗುಣಮಟ್ಟದ ಕೈಗೆಟುಕುವ ಸಹಾಯಕ ತಂತ್ರಜ್ಞಾನದ ಲಭ್ಯತೆಯನ್ನು ಉತ್ತೇಜಿಸಲು ಆರೋಗ್ಯ ಸಂಶೋಧನಾ ಇಲಾಖೆ (ಡಿಎಚ್.ಆರ್) ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ ಒ) ನಡುವೆ ಯೋಜನಾ ಸಹಯೋಗ ಒಪ್ಪಂದಕ್ಕೆ ಅಂಕಿತ ಹಾಕಿರುವ ಕುರಿತಂತೆ ವಿವರಿಸಲಾಯಿತು.
ಯೋಜನಾ ಸಹಯೋಗ ಒಪ್ಪಂದಕ್ಕೆ (ಪಿಸಿಎ) ವಿಶ್ವ ಆರೋಗ್ಯ ಸಂಸ್ಥೆ 10.10.2022 ರಂದು ಮತ್ತು ಆರೋಗ್ಯ ಸಂಶೋಧನಾ ಇಲಾಖೆ (ಡಿಎಚ್ಆರ್) 18.10.2022 ರಂದು ಸಹಿ ಹಾಕಿದ್ದವು.
ಈ ಸಹಯೋಗವು ಸಹಾಯಕ ತಂತ್ರಜ್ಞಾನದ ಲಭ್ಯತೆಯ ನಿಟ್ಟಿನಲ್ಲಿ ಜಾಗತಿಕ ಗಮನವನ್ನು ಸೆಳೆಯಲು, ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಮತ್ತು ಸೂಕ್ತ ತರಬೇತಿ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವ ಮತ್ತು ಪ್ರಸಾರ ಮಾಡುವ ಗುರಿಯನ್ನು ಹೊಂದಿದೆ.
****
(Release ID: 1924896)
Visitor Counter : 175
Read this release in:
English
,
Urdu
,
Marathi
,
Hindi
,
Nepali
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam