ಪ್ರಧಾನ ಮಂತ್ರಿಯವರ ಕಛೇರಿ

ಪಿಟಿಪಿ-ಎನ್ಇಆರ್ ಒಂದು ಉತ್ತಮ ಯೋಜನೆಯಾಗಿದ್ದು, ಈಶಾನ್ಯಕ್ಕೆ ಸೇರಿದ ಪ್ರತಿಭಾವಂತ ಕುಶಲಕರ್ಮಿಗಳ ಜೀವನವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ: ಪ್ರಧಾನಮಂತ್ರಿ

Posted On: 19 APR 2023 3:13PM by PIB Bengaluru

ಈಶಾನ್ಯ ವಲಯದ ಬುಡಕಟ್ಟು ಉತ್ಪನ್ನಗಳ ಉತ್ತೇಜನಕ್ಕಾಗಿ ಮಾರುಕಟ್ಟೆ ಮತ್ತು ಲಾಜಿಸ್ಟಿಕ್ಸ್ ಅಭಿವೃದ್ಧಿ (ಪಿಟಿಪಿ-ಎನ್ಇಆರ್) ಒಂದು ಉತ್ತಮ ಯೋಜನೆಯಾಗಿದ್ದು, ಈಶಾನ್ಯಕ್ಕೆ ಸೇರಿದ ಪ್ರತಿಭಾವಂತ ಕುಶಲಕರ್ಮಿಗಳ ಜೀವನವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದ್ದಾರೆ. ಈ ಯೋಜನೆಯು ಈಶಾನ್ಯದ ಉತ್ಪನ್ನಗಳಿಗೆ ಹೆಚ್ಚಿನ ಗೋಚರತೆಯನ್ನು ಖಾತ್ರಿಪಡಿಸುತ್ತದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಶ್ರೀ ಅರ್ಜುನ್ ಮುಂಡಾ ಅವರು ಸರಣಿ ಟ್ವೀಟ್ ನಲ್ಲಿ, ಪಿಟಿಪಿ-ಎನ್ ಇಆರ್ ಯೋಜನೆಯ ಉದ್ದೇಶವು ಉತ್ಪನ್ನಗಳ ಸಂಗ್ರಹಣೆ, ಲಾಜಿಸ್ಟಿಕ್ಸ್ ಮತ್ತು ಮಾರುಕಟ್ಟೆಯಲ್ಲಿ ದಕ್ಷತೆಯನ್ನು ಹೆಚ್ಚಿಸುವ ಮೂಲಕ ಬುಡಕಟ್ಟು ಕುಶಲಕರ್ಮಿಗಳಿಗೆ ಜೀವನೋಪಾಯದ ಅವಕಾಶಗಳನ್ನು ಬಲಪಡಿಸುವುದಾಗಿದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಸಚಿವರ ಸರಣಿ ಟ್ವೀಟ್ ಗೆ ಉತ್ತರವಾಗಿ, ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ;

“ಪಿಟಿಪಿ-ಎನ್ಇಆರ್ ಒಂದು ಉತ್ತಮ ಯೋಜನೆಯಾಗಿದ್ದು, ಈಶಾನ್ಯಕ್ಕೆ ಸೇರಿದ ಪ್ರತಿಭಾವಂತ ಕುಶಲಕರ್ಮಿಗಳ ಜೀವನವನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಇದು ಈಶಾನ್ಯದ ಉತ್ಪನ್ನಗಳಿಗೆ ಉತ್ತಮ ಗೋಚರತೆಯನ್ನು ಖಚಿತಪಡಿಸುತ್ತದೆ. ಇದರಿಂದ ಬುಡಕಟ್ಟು ಸಮುದಾಯಗಳು ವಿಶೇಷವಾಗಿ ಪ್ರಯೋಜನ ಪಡೆಯಲಿವೆ,’’ ಎಂದಿದ್ದಾರೆ.

 

***



(Release ID: 1921869) Visitor Counter : 92