ಪ್ರಧಾನ ಮಂತ್ರಿಯವರ ಕಛೇರಿ
ಪುಣೆಯ ಸಂಸತ್ ಸದಸ್ಯ ಶ್ರೀ ಗಿರೀಶ್ ಬಾಪಟ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ
प्रविष्टि तिथि:
29 MAR 2023 4:19PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಪುಣೆಯ ಸಂಸತ್ ಸದಸ್ಯ ಶ್ರೀ ಗಿರೀಶ್ ಬಾಪಟ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಸರಣಿ ಟ್ವೀಟ್ ಗಳಲ್ಲಿ ಪ್ರಧಾನಮಂತ್ರಿಯವರು ಹೀಗೆ ಹೇಳಿದ್ದಾರೆ;
"ಶ್ರೀ ಗಿರೀಶ್ ಬಾಪಟ್ ಜೀ ಅವರು ವಿನಮ್ರ ಮತ್ತು ಕಠಿಣ ಪರಿಶ್ರಮದ ನಾಯಕರಾಗಿದ್ದರು. ಅವರು ಸಮಾಜಕ್ಕೆ ಶ್ರದ್ಧೆಯಿಂದ ಸೇವೆ ಸಲ್ಲಿಸಿದ್ದಾರೆ. ಅವರು ಮಹಾರಾಷ್ಟ್ರದ ಅಭಿವೃದ್ಧಿಗಾಗಿ ವ್ಯಾಪಕವಾಗಿ ಕೆಲಸ ಮಾಡಿದವರು, ವಿಶೇಷವಾಗಿ ಪುಣೆಯ ಬೆಳವಣಿಗೆಯ ಬಗ್ಗೆ ಉತ್ಸುಕರಾಗಿದ್ದರು. ಅವರ ಅಗಲಿಕೆಯು ದುಃಖ ತಂದಿದೆ. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪಗಳು. ಓಂ ಶಾಂತಿ"
"ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಕಟ್ಟಿ ಬಲಪಡಿಸುವಲ್ಲಿ ಶ್ರೀ ಗಿರೀಶ್ ಬಾಪಟ್ ಜಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರು ಸಾರ್ವಜನಿಕರ ಸಮಸ್ಯೆಗಳಿಗೆ ಸಂಪರ್ಕಿಸಬಹುದಾದ ಮತ್ತು ಸ್ಪಂದಿಸುವ ಶಾಸಕರಾಗಿದ್ದರು. ಅವರು ಪರಿಣಾಮಕಾರಿ ಸಚಿವರಾಗಿ, ನಂತರ ಪುಣೆಯ ಸಂಸದರಾಗಿಯೂ ಛಾಪು ಮೂಡಿಸಿದರು. ಅವರ ಒಳ್ಳೆಯ ಕೆಲಸವು ಹಲವಾರು ಜನರನ್ನು ಪ್ರೇರೇಪಿಸುತ್ತದೆ.
***
(रिलीज़ आईडी: 1911861)
आगंतुक पटल : 148
इस विज्ञप्ति को इन भाषाओं में पढ़ें:
English
,
Urdu
,
Marathi
,
हिन्दी
,
Manipuri
,
Bengali
,
Assamese
,
Punjabi
,
Gujarati
,
Odia
,
Tamil
,
Telugu
,
Malayalam