ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಆಸ್ಟ್ರೋ ನೈಟ್ ಸ್ಕೈ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಯತ್ನವನ್ನು ಶ್ಲಾಘಿಸಿದ ಪ್ರಧಾನಮಂತ್ರಿ

Posted On: 29 MAR 2023 4:11PM by PIB Bengaluru

ಗೋವಾ ವಿಜ್ಞಾನ ಕೇಂದ್ರ ಮತ್ತು ತಾರಾಲಯವು ಆಸ್ಟ್ರೋ ನೈಟ್ ಸ್ಕೈ ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಜನರು ದೂರದರ್ಶಕದ ಮೂಲಕ ರಾತ್ರಿ ಆಕಾಶವನ್ನು ವೀಕ್ಷಿಸುವ ಮರೆಯಲಾಗದ ಅನುಭವವನ್ನು ಪಡೆಯಲು ಮಿರಮಾರ್ ಬೀಚ್ ಗೆ ಆಗಮಿಸುತ್ತಿರುವುದನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ. 

ನ್ಯಾಷನಲ್ ಕೌನ್ಸಿಲ್ ಆಫ್ ಸೈನ್ಸ್ ಮ್ಯೂಸಿಯಂನ ಟ್ವೀಟ್ ಅನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು, ಈ ಬಗ್ಗೆ;

"ಇಂತಹ ಪ್ರಯತ್ನಗಳು ಪ್ರಚಾರ ಪಡೆಯುತ್ತಿರುವುದನ್ನು ನೋಡಿ ಸಂತೋಷವಾಗಿದೆ. ಕೆಲವು ವರ್ಷಗಳ ಹಿಂದೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಖಗೋಳಶಾಸ್ತ್ರದಲ್ಲಿ ಭಾರತದ ಶ್ರೀಮಂತ ಪರಂಪರೆಯ ಬಗ್ಗೆಯೂ ನಾನು ಮಾತನಾಡಿದ್ದೆ" ಎಂದು ಟ್ವೀಟ್ ಮಾಡಿದ್ದಾರೆ.

 

***


(Release ID: 1911829) Visitor Counter : 121