ಪ್ರಧಾನ ಮಂತ್ರಿಯವರ ಕಛೇರಿ

ವೈಟ್ ಫೀಲ್ಡ್ ನಿಂದ ಕೃಷ್ಣರಾಜಪುರ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದ ಪ್ರಧಾನಮಂತ್ರಿಯವರು


ಮೆಟ್ರೋರೈಲಿನಲ್ಲಿ ಪ್ರಯಾಣ ಕೈಗೊಂಡರು.

Posted On: 25 MAR 2023 2:10PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಬೆಂಗಳೂರು ಮೆಟ್ರೋದ ವೈಟ್ ಫೀಲ್ಡ್ (ಕಾಡುಗೋಡಿ) ಮತ್ತು ಕೃಷ್ಣರಾಜಪುರ ಮೆಟ್ರೋ ರೈಲುಮಾರ್ಗವನ್ನು ಉದ್ಘಾಟಿಸಿದರು. ಅವರು ಹೊಸದಾಗಿ ಉದ್ಘಾಟಿಸಲಾದ ಮೆಟ್ರೋ ರೈಲಿನಲ್ಲಿ ಸಂಚರಿಸಿದರು.

ಈ ಬಗ್ಗೆ ಪ್ರಧಾನಿ ಕಚೇರಿ ಟ್ವೀಟ್ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು ಮೆಟ್ರೋರೈಲಿನಲ್ಲಿ ಸಂಚಾರ ಕೈಗೊಂಡ ವೇಳೆ ವಿವಿಧ ವರ್ಗದ ಜನರೊಂದಿಗೆ ಸಂವಾದ ನಡೆಸುತ್ತಿದ್ದಾರೆ.

ವೈಟ್ ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಮೊದಲು ಟಿಕೆಟ್ ಕೌಂಟರ್ ನಲ್ಲಿ ಟಿಕೆಟ್ ಖರೀದಿಸಿದರು ಮತ್ತು ನಂತರ  ಇದೇ ವೇಳೆ ವಸ್ತುಪ್ರದರ್ಶನ ಮಳಿಗೆಗೆ ಕಾಲ್ನಡಿಗೆಯಲ್ಲಿ ತೆರಳಿದರು. ನಂತರ ಪ್ರಧಾನಮಂತ್ರಿ ಅವರು ವೈಟ್ ಫೀಲ್ಡ್ ಮೆಟ್ರೋ ರೈಲುಮಾರ್ಗದ ಉದ್ಘಾಟನೆಯ ಸಂಕೇತವಾಗಿ ಫಲಕವನ್ನು ಅನಾವರಣಗೊಳಿಸಿದರು ಮತ್ತು ಮೆಟ್ರೋ ರೈಲಿನಲ್ಲಿ ಪಯಣಿಸುವ ಸಲುವಾಗಿ ಪ್ಲಾಟ್ ಫಾರ್ಮ್ ಕಡೆಗೆ ತೆರಳಿದರು. ತಮ್ಮ ಪ್ರಯಾಣದ ಸಮಯದಲ್ಲಿ, ಅವರು ಬೆಂಗಳೂರು ಮೆಟ್ರೋದ ಕಾರ್ಮಿಕರು ಮತ್ತು ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.

ಪ್ರಧಾನಮಂತ್ರಿ ಅವರೊಂದಿಗೆ ಕರ್ನಾಟಕದ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್ ಮತ್ತು ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಉಪಸ್ಥಿತರಿದ್ದರು.

ಹಿನ್ನೆಲೆ

ದೇಶಾದ್ಯಂತ ವಿಶ್ವದರ್ಜೆಯ ನಗರ  ಮೂಲಸೌಕರ್ಯಗಳ ಅಭಿವೃದ್ಧಿಗೆ ಪ್ರಧಾನಮಂತ್ರಿ ಅವರು ವಿಶೇಷ ಗಮನ ಹರಿಸಿದ್ದಾರೆ. ವೈಟ್ ಫೀಲ್ಡ್ (ಕಾಡುಗೋಡಿ) ಮೆಟ್ರೋದಿಂದ ಕೃಷ್ಣರಾಜಪುರ ಮೆಟ್ರೋ ಲೈನ್ ಆಫ್ ರೀಚ್ -1 ವಿಸ್ತರಣಾ ಯೋಜನೆಯ 13.71 ಕಿ.ಮೀ ವ್ಯಾಪ್ತಿಯ ಮೆಟ್ರೋ ರೈಲುಮಾರ್ಗಕ್ಕೆ ವೈಟ್ ಫೀಲ್ಡ್ (ಕಾಡುಗೋಡಿ) ಮೆಟ್ರೋ ನಿಲ್ದಾಣದಲ್ಲಿ ಪ್ರಧಾನಮಂತ್ರಿ ಚಾಲನೆ ನೀಡಿದರು. ಸುಮಾರು 4250 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಈ ಮೆಟ್ರೋ ರೈಲುಮಾರ್ಗದ ಉದ್ಘಾಟನೆಯು ಬೆಂಗಳೂರಿನ ಪ್ರಯಾಣಿಕರಿಗೆ ಸ್ವಚ್ಛ, ಸುರಕ್ಷಿತ, ತ್ವರಿತ ಮತ್ತು ಆರಾಮದಾಯಕ ಪ್ರಯಾಣ ಸೌಲಭ್ಯವನ್ನು ಒದಗಿಸುತ್ತದೆ, ಸಂಚಾರದ ಸೌಲಭ್ಯವನ್ನು ಹೆಚ್ಚಿಸುತ್ತದೆ ಮತ್ತು ನಗರದಲ್ಲಿ ಸಂಚಾರ ದಟ್ಟಣೆಯನ್ನು ತಗ್ಗಿಸುತ್ತದೆ.

*****



(Release ID: 1910775) Visitor Counter : 138