ಪ್ರಧಾನ ಮಂತ್ರಿಯವರ ಕಛೇರಿ
ದೆಹಲಿಯ ಮೂರು ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದ ಅಸ್ಸಾಂ ರಾಜ್ಯಪಾಲರು, ಮುಖ್ಯಮಂತ್ರಿ ಮತ್ತು ರಾಜ್ಯ ಸಚಿವ ಸಂಪುಟವನ್ನು ಶ್ಲಾಘಿಸಿದ ಪ್ರಧಾನ ಮಂತ್ರಿ
ಪ್ರಕಟಣಾ ದಿನಾಂಕ:
19 MAR 2023 9:56PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಸ್ಸಾಂ ರಾಜ್ಯಪಾಲ ಶ್ರೀ ಗುಲಾಬ್ ಚಂದ್ ಕಟಾರಿಯಾ, ಮುಖ್ಯಮಂತ್ರಿ ಶ್ರೀ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ದೆಹಲಿಯ ಮೂರು ಪ್ರಮುಖ ಸ್ಥಳಗಳಾದ ರಾಷ್ಟ್ರೀಯ ಯುದ್ಧ ಸ್ಮಾರಕ, ರಾಷ್ಟ್ರೀಯ ಪೊಲೀಸ್ ಸ್ಮಾರಕ ಮತ್ತು ಪಿಎಂ ಸಂಗ್ರಾಹಾಲಯಕ್ಕೆ ಭೇಟಿ ನೀಡಿದ್ದನ್ನು ಶ್ಲಾಘಿಸಿದ್ದಾರೆ.
ರಾಜ್ಯಪಾಲರ ಟ್ವೀಟ್ ಗೆ ಪ್ರತಿಕ್ರಿಯೆಯಾಗಿ ಶ್ರೀ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ, ಅದರಲ್ಲಿ :
"ಅಸ್ಸಾಂ ರಾಜ್ಯಪಾಲ @Gulab_kataria ಜೀ, ಸಿಎಂ @himantabiswa ಜೀ ಮತ್ತು ಅಸ್ಸಾಂ ಸರ್ಕಾರದ ಸಚಿವರು ದೆಹಲಿಯ ಮೂರು ಪ್ರಮುಖ ಪ್ರತಿಷ್ಠಿತ ಸ್ಥಳಗಳಾದ ರಾಷ್ಟ್ರೀಯ ಯುದ್ಧ ಸ್ಮಾರಕ, ರಾಷ್ಟ್ರೀಯ ಪೊಲೀಸ್ ಸ್ಮಾರಕ ಮತ್ತು ಪಿಎಂ ಸಂಗ್ರಾಹಾಲಯಕ್ಕೆ ಭೇಟಿ ನೀಡಿರುವುದು ಉತ್ತಮ ಕ್ರಮವಾಗಿದೆ” ಎಂದಿದ್ದಾರೆ.
***
(ಪ್ರಕಟಣೆ ಐ.ಡಿ.: 1908719)
ವಿಸಿಟರ್ ಕೌಂಟರ್ : 185
ಪ್ರಕಟಣೆಯನ್ನು ಇದರಲ್ಲಿ ಓದಿ:
English
,
Urdu
,
Marathi
,
हिन्दी
,
Bengali
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam