ಪ್ರಧಾನ ಮಂತ್ರಿಯವರ ಕಛೇರಿ
ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆ(ಪಿಎಲ್ಐ)ಯು ಉಕ್ಕು ವಲಯಕ್ಕೆ ಶಕ್ತಿ ತುಂಬಿದೆ; ನಮ್ಮ ಯುವ ಸಮುದಾಯದ ಉದ್ಯಮಶೀಲರಿಗೆ ಅವಕಾಶಗಳನ್ನು ಸೃಷ್ಟಿಸಲಿದೆ: ಪ್ರಧಾನಿ
Posted On:
17 MAR 2023 8:12PM by PIB Bengaluru
ಆತ್ಮನಿರ್ಭರ್ ಭಾರತ ಕಟ್ಟುವ ಗುರಿ ಸಾಧಿಸಲು ಉಕ್ಕು ವಲಯ ನಿರ್ಣಾಯಕ ಎಂದು ಪ್ರಧಾನಿ ತಿಳಿಸಿದ್ದಾರೆ. ಉತ್ಪಾದನೆ ಸಂಪರ್ಕಿತ ಉತ್ತೇಜನಾ ಯೋಜನೆಯು ಉಕ್ಕು ವಲಯಕ್ಕೆ ಸ್ಪಷ್ಟವಾಗಿ ಶಕ್ತಿ ತುಂಬಿದೆ. ನಮ್ಮ ಯುವಕರು ಮತ್ತು ಉದ್ಯಮಶೀಲರಿಗೆ ವಿಪುಲ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ.
ವಿಶೇಷ ಉಕ್ಕಿನ ಉತ್ಪಾದನೆ ಸಂಪರ್ಕಿತ ಉತ್ತೇಜನಾ(ಪಿಎಲ್‌ಐ) ಯೋಜನೆಯಡಿ, 27 ಕಂಪನಿಗಳೊಂದಿಗೆ 57 ತಿಳಿವಳಿಕೆ ಒಪ್ಪಂದ(ಎಂಒಯು)ಗಳಿಗೆ ಸಹಿ ಹಾಕಲು ಉಕ್ಕು ಸಚಿವಾಲಯ ಆಯೋಜಿಸಿದ್ದ ಎಂಒಯು ಸಹಿ ಸಮಾರಂಭ ಕುರಿತು ಕೇಂದ್ರ ಉಕ್ಕು ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ ಅವರು ಮಾಡಿರುವ ಟ್ವೀಟ್ ಗೆ ಪ್ರಧಾನಮಂತ್ರಿ ಅವರು ಮರುಟ್ವೀಟ್ ಮಾಡಿದ್ದಾರೆ.
“ಆತ್ಮನಿರ್ಭರ್ ಭಾರತ ಕಟ್ಟುವ ಗುರಿ ಸಾಧಿಸಲು ಉಕ್ಕು ವಲಯ ನಿರ್ಣಾಯಕವಾಗಿದೆ. ಪಿಎಲ್‌ಐ ಯೋಜನೆಯು ಈ ವಲಯವನ್ನು ಸ್ಪಷ್ಟವಾಗಿ ಚೈತನ್ಯಗೊಳಿಸಿದೆ. ಜತೆಗೆ, ನಮ್ಮ ಯುವ ಸಮುದಾಯ ಮತ್ತು ಉದ್ಯಮಶೀಲರಿಗೆ ಅಪಾರ ಅವಕಾಶಗಳನ್ನು ಸೃಷ್ಟಿಸಲಿದೆ” ಎಂದು ಪ್ರಧಾನ ಮಂತ್ರಿ ತಿಳಿಸಿದ್ದಾರೆ.
****
(Release ID: 1908399)
Visitor Counter : 113
Read this release in:
Bengali
,
English
,
Urdu
,
Hindi
,
Marathi
,
Manipuri
,
Assamese
,
Punjabi
,
Gujarati
,
Odia
,
Tamil
,
Telugu
,
Malayalam