ಪ್ರಧಾನ ಮಂತ್ರಿಯವರ ಕಛೇರಿ

​​​​​​​ಮುಂಬರುವ 21 ಮಾರ್ಚ್ 2023 ರಂದು ಈಶಾನ್ಯ ಭಾಗಕ್ಕೆ ಪ್ರಯಾಣ ಬೆಳೆಸಲಿರುವ ಭಾರತ್ ಗೌರವ್ ರೈಲಿನ ಕುರಿತು  ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ

Posted On: 06 MAR 2023 8:09PM by PIB Bengaluru

21 ಮಾರ್ಚ್ 2023 ರಂದು ಈಶಾನ್ಯ ಭಾಗಕ್ಕೆ ಭಾರತ್ ಗೌರವ್ ರೈಲು ಲೋಕಾರ್ಪಣೆ ಕುರಿತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಈಶಾನ್ಯ ಭಾಗವನ್ನು ಅನ್ವೇಷಿಸಲು ಇದು ಒಂದು ರೋಮಾಂಚಕಾರಿ ಅವಕಾಶ ಹಾಗೂ ಆಸಕ್ತಿದಾಯಕ ಮತ್ತು ಸ್ಮರಣೀಯ ಪ್ರಯಾಣವಾಗಲಿದೆ ಎಂದು ಶ್ರೀ ಮೋದಿಯವರು ಹೇಳಿದ್ದಾರೆ. 

ಭಾರತ್ ಗೌರವ್ ಡಿಲಕ್ಸ್ ವಾತಾನುಕೂಲಿತ ಪ್ರವಾಸಿ ರೈಲಿನ ಮೂಲಕ ಭಾರತದ ಈಶಾನ್ಯ ರಾಜ್ಯಗಳು ಒಳಗೊಳ್ಳುವಂತೆ  ವಿಶೇಷವಾಗಿ ವಿನ್ಯಾಸಗೊಳಿಸಲಾದ "ನಾರ್ತ್ ಈಸ್ಟ್ ಡಿಸ್ಕವರಿ: ಬಿಯಾಂಡ್ ಗುವಾಹಟಿ" ಯ ಚಾಲನೆಗೆ ಭಾರತೀಯ ರೈಲ್ವೆ ನಿರ್ಧರಿಸಿದೆ. ಮಾರ್ಚ್ 21, 2023 ರಂದು ದೆಹಲಿ ಸಫ್ದರ್‌ಜಂಗ್ ರೈಲು ನಿಲ್ದಾಣದಿಂದ ರೈಲು ಪ್ರವಾಸ ಪ್ರಾರಂಭವಾಗಲಿದ್ದು, ಅಸ್ಸಾಂನ ಗುವಾಹಟಿ, ಶಿವಸಾಗರ್, ಜೋರ್ಹತ್ ಮತ್ತು ಕಾಜಿರಂಗ, ತ್ರಿಪುರಾದ ಉನಕೋಟಿ, ಅಗರ್ತಲಾ ಮತ್ತು ಉದಯಪುರ, ನಾಗಾಲ್ಯಾಂಡ್‌ನ ದಿಮಾಪುರ್ ಮತ್ತು ಕೊಹಿಮಾ ಮತ್ತು ಮೇಘಾಲಯದ ಶಿಲ್ಲಾಂಗ್ ಮತ್ತು ಚೀರಾಪುಂಜಿಯ ಪ್ರವಾಸವನ್ನು 15 ದಿನಗಳಲ್ಲಿ ಪೂರ್ಣಗೊಳಿಸಲಿದೆ. 

ಈಶಾನ್ಯ ಪ್ರದೇಶದ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಅಭಿವೃದ್ಧಿ ಖಾತೆಯ ಕೇಂದ್ರ ಸಚಿವರಾದ ಶ್ರೀ ಜಿ ಕಿಶನ್ ರೆಡ್ಡಿ ಅವರ ಟ್ವೀಟ್ ಥ್ರೆಡ್‌ಗೆ ಪ್ರತಿಕ್ರಿಯಿಸಿದ ಪ್ರಧಾನಮಂತ್ರಿ ಅವರು ಭಾರತ್ ಗೌರವ್ ರೈಲಿನ ಲೋಕಾರ್ಪಣೆ ಕುರಿತು ಟ್ವೀಟ್ ಮಾಡಿದ್ದಾರೆ;

"ಇದು ಈಶಾನ್ಯ ಭಾಗದ ಅನ್ವೇಷಣೆಗೆ ಒಂದು ಉತ್ತೇಜನಕಾರಿ ಅವಕಾಶವಾಗಿದ್ದು, ಆಸಕ್ತಿದಾಯಕ ಮತ್ತು ಸ್ಮರಣೀಯ ಪ್ರಯಾಣವಾಗಲಿದೆ."

*****



(Release ID: 1904775) Visitor Counter : 144