ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಮಾಜಿ ರಾಜ್ಯಪಾಲರಾದ ಶ್ರೀ ಒ.ಪಿ. ಕೊಹ್ಲಿ ಅವರ ನಿಧನಕ್ಕೆ ಪ್ರಧಾನಮಂತ್ರಿ  ಶ್ರೀ ನರೇಂದ್ರ ಮೋದಿ ತೀವ್ರ ಸಂತಾಪ

ಪ್ರಕಟಣಾ ದಿನಾಂಕ: 20 FEB 2023 8:44PM by PIB Bengaluru

ಮಾಜಿ ರಾಜ್ಯಪಾಲರಾದ ಶ್ರೀ ಒ. ಪಿ.ಕೊಹ್ಲಿ ನಿಧನಕ್ಕೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮೂಲಕ ಸಂದೇಶ ನೀಡಿದ್ದಾರೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ.

"ಶ್ರೀ ಒ.ಪಿ. ಕೊಹ್ಲಿ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಅವರು ನವದೆಹಲಿಯಲ್ಲಿ ನಮ್ಮ ಪಕ್ಷವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಂಸದರಾಗಿ ಮತ್ತು ರಾಜ್ಯಪಾಲರಾಗಿ ಒ,ಪಿ. ಕೊಹ್ಲಿ ಅವರು ಸಾರ್ವಜನಿಕ ಕಲ್ಯಾಣದ ವಿಷಯಗಳತ್ತ ಗಮನ ಹರಿಸಿದ್ದರು. ಅವರು ಶಿಕ್ಷಣ ಕ್ಷೇತ್ರದ ಬಗ್ಗೆಯೂ ಅಪಾರ ಒಲವು ಹೊಂದಿದ್ದರು. ಅವರ ಕುಟುಂಬ ಸದಸ್ಯರ ಜತೆ ಸದಾ ನಾವು ಇರುತ್ತೇವೆ.  ಓಂ ಶಾಂತಿ." ಎಂದು ಶ್ರೀ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.

***


(ಪ್ರಕಟಣೆ ಐ.ಡಿ.: 1901415) ವಿಸಿಟರ್ ಕೌಂಟರ್ : 145