ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav g20-india-2023

ವಿಶ್ವ ರೇಡಿಯೋ ದಿನದಂದು ಎಲ್ಲಾ ರೇಡಿಯೋ ಕೇಳುಗರಿಗೆ ಪ್ರಧಾನಮಂತ್ರಿಯವರು ಶುಭಾಶಯ ಕೋರಿದ್ದಾರೆ


​​​​​​​ಫೆಬ್ರವರಿ 26, 2023 ರ ಮನ್ ಕಿ ಬಾತ್ ಕಾರ್ಯಕ್ರಮಕ್ಕಾಗಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ನಾಗರಿಕರನ್ನು ಕೇಳಲಾಯಿತು 

Posted On: 13 FEB 2023 9:00AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ವಿಶ್ವ ರೇಡಿಯೋ ದಿನದ ಸಂದರ್ಭದಲ್ಲಿ ಎಲ್ಲಾ ರೇಡಿಯೋ ಶೋತೃಗಳು, ಆರ್ ಜೆಗಳು ಮತ್ತು ಪ್ರಸಾರ ವ್ಯವಸ್ಥೆಗೆ ಸಂಬಂಧಿಸಿದ ಎಲ್ಲರಿಗೂ ಶುಭಾಶಯ ಕೋರಿದರು. ಫೆಬ್ರವರಿ 26, 2023 ರಂದು ಮನ್ ಕಿ ಬಾತ್ ಕಾರ್ಯಕ್ರಮಕ್ಕಾಗಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳುವಂತೆ ಶ್ರೀ ಮೋದಿ ಅವರು ನಾಗರಿಕರನ್ನು ವಿನಂತಿಸಿದರು.

ಟ್ವೀಟ್ ಗಳ ಸರಣಿಯಲ್ಲಿ, ಪ್ರಧಾನಮಂತ್ರಿಯವರು ಹೀಗೆ ಹೇಳಿರುವರು;

"ವಿಶ್ವ ರೇಡಿಯೋ ದಿನದ ವಿಶೇಷ ಸಂದರ್ಭದಲ್ಲಿ ಎಲ್ಲಾ ರೇಡಿಯೋ ಕೇಳುಗರಿಗೆ, RJ ಗಳಿಗೆ ಮತ್ತು ಪ್ರಸಾರ  ವ್ಯವಸ್ಥೆಗೆ ಸಂಬಂಧಿಸಿದ ಎಲ್ಲರಿಗೂ ಶುಭಾಶಯಗಳು. ರೇಡಿಯೋ ನವೀನ ಕಾರ್ಯಕ್ರಮಗಳ ಮೂಲಕ ಮತ್ತು ಮಾನವ ಸೃಜನಶೀಲತೆಯನ್ನು ಪ್ರದರ್ಶಿಸುವ ಮೂಲಕ ಜೀವನವನ್ನು ಬೆಳಗಿಸಲಿ."

“ಇದು ವಿಶ್ವ ರೇಡಿಯೋ ದಿನವಾಗಿರುವುದರಿಂದ, 26 ರಂದು 98 ನೇ #ಮನದಮಾತು ಕಾರ್ಯಕ್ರಮವನ್ನು ಈ ಸಂಧರ್ಭದಲ್ಲಿ ನಿಮಗೆ ನೆನಪಿಸಲು ಬಯಸುತ್ತೇನೆ. ಅದಕ್ಕಾಗಿ ನಿಮ್ಮ ವಿಚಾರಗಳನ್ನು  ಹಂಚಿಕೊಳ್ಳಿರಿ. MyGov, NaMo ಅಪ್ಲಿಕೇಶನ್ನಲ್ಲಿ ಬರೆಯಿರಿ ಅಥವಾ 1800-11-7800 ಗೆ ಕರೆ ಮಾಡುವ ಮೂಲಕ ನಿಮ್ಮ ಸಂದೇಶವನ್ನು ರೆಕಾರ್ಡ್ ಮಾಡಿರಿ."

*****



(Release ID: 1898846) Visitor Counter : 103